Showing posts with label ಬೆಳಗಿನೊಳು ಬೆಳಗಾಯಿತು ನೋಡಿ ಥಳಥಳಿಸುತ ಮನದೊಳಗೆ mahipati. Show all posts
Showing posts with label ಬೆಳಗಿನೊಳು ಬೆಳಗಾಯಿತು ನೋಡಿ ಥಳಥಳಿಸುತ ಮನದೊಳಗೆ mahipati. Show all posts

Wednesday, 1 September 2021

ಬೆಳಗಿನೊಳು ಬೆಳಗಾಯಿತು ನೋಡಿ ಥಳಥಳಿಸುತ ಮನದೊಳಗೆ ankita mahipati

ಬೆಳಗಿನೊಳು ಬೆಳಗಾಯಿತು ನೋಡಿ ಥಳಥಳಿಸುತ ಮನದೊಳಗೆ ಝಳಿಸುತಿಹದು ಜಗದೊಳಗೆ ಪ 


ಬೆಳಗಾಯಿತು ಎನ್ನೊಳಗೆ ಸುಳಿವು ದೋರಿದ ಸದ್ಗುರು ಕೃಪೆಯ ಹೇಳಲಿನ್ನೇನದರ ಖೂನ ತಿಳಿದೇನೆಂದರೆ ಎಳೆಯು ಸಿಲುಕದು ಬಲು ಸೂಕ್ಷ್ಮ ಸುಜ್ಞಾನ ಹೇಳಿ ಕಿತ್ಯಾಡುವ ಮರುಳರಿಗೆ ತಿಳಿಯದಿದರನುಸಂಧಾನ ಕಳೆಯದ ಕಲ್ಪನೆ ಅನುಮಾನಿಗಳಿಗೆ ತಿಳಿಯುವುದೆ ಸದ್ಗತಿ ಸಾಧನ 1 

ಬೆಳಗಿ ಬೆಳಗು ಬೆರೆದವನೆ ತಾ ಕುಲಕೋಟಿಗಳು ಧನ್ಯ ಮಳೆಮಿಂಚಿನ ಕಳೆಕಾಂತಿಗಳಿಡುತದೋರಿದ ಸದ್ಗುರು ಪುಣ್ಯ ಗುಹ್ಯ ತಾರ್ಕಣ್ಯ ಬೆಳಗು ಬೈಗಿಲ್ಲದ ಬೆಳಗಿನ ಪ್ರಭೆ ತಿಳಿದವನೆ ಮೂಲೋಕದೊಳಗೆ ಮಾನ್ಯ 2 

ಬೆಳಗಿನೊಳು ಬೆರಗಾದನು ಮಹಿಪತಿ ಅತಿ ಆಶ್ಚರ್ಯವ ನೋಡಿ ತೊಳಲಿ ಬಳಲುವ ನಿದ್ರೆಯಗಳೆದನು ತಾ ಈ ಡ್ಯಾಡಿ ನಿಜ ಒಡಮೂಡಿ ಭವ ಪಾದವ ಕೂಡಿ3

***