Showing posts with label ಶ್ರೀವನಿತೆ ವೈನತೇಯ ವಾರುತೆ ದೇವಾದಿ ವರವಿನುತೆ vijaya vittala. Show all posts
Showing posts with label ಶ್ರೀವನಿತೆ ವೈನತೇಯ ವಾರುತೆ ದೇವಾದಿ ವರವಿನುತೆ vijaya vittala. Show all posts

Thursday, 17 October 2019

ಶ್ರೀವನಿತೆ ವೈನತೇಯ ವಾರುತೆ ದೇವಾದಿ ವರವಿನುತೆ ankita vijaya vittala

ವಿಜಯದಾಸ
ಶ್ರೀ ವನಿತೆ ವೈನತೇಯ ವಾರುತೆ ದೇವಾದಿ ವರವಿನುತೆ
ಕಾವದು ಯೆನ್ನ ನೀ ವದಿಗಿ ಮುನ್ನೆ ಈವದು ವರ ಆವದುವಲ್ಲೆ
ರಾಜೀವ ಚರಣದ
ಸೇವೆಯ ಪಾಲಿಸು ಕೋವಿದರೊಡನೆ ಪ

ಸಮಸ್ತಲೋಕ ವಂದಿತೆ ಸಂತತ ಮತ್ತೆ
ತಾಮಸ e್ಞÁನ ಹರತೆ ಸಾಮಗಾಯನ ಪ್ರೀತೆ ಸಕಲವಿದ್ಯಾತೀತೆ
ರೋಮ ರೋಮ ಗುಣ ಭರಿತೆ
ರಾಮನ್ನ ಪದ ನಾಮವನ್ನು
ನಾ ಮರೆಯದಂತೆ ನೀ ಮನಸು ಕೊಡು
ಹೇಮಾಂಬರೆ ಕಾಂಚಿದಾಮೆ ಅಮಮ ನಿ-
ವನಧಿ ಸೋಮೆ
ಕಾಮ ಜನನಿ ತ್ರಿಧಾಮೆ ಪುಣ್ಯನಾಮೆ
ಕೋಮಲಾಂಗಿ ಸತ್ಯಭಾಮೆ ರಮೆ ಪೂರ್ಣ
ಕಾಮೆ ಸುರಸಾರ್ವಭೌಮೆ 1

ಚಂದನ ಗಂಧಲೇಪಿನೀ ಚತುರವಾಣೀ
ಮಂದಹಾಸಗಮನೀ
ಗಂಧಕಸ್ತೂರಿ ಜಾಣಿ ಗಂಭೀರ ಗುಣಶ್ರೇಣಿ
ಸಿಂಧುತನಯೇ ಕಲ್ಯಾಣಿ
ಇಂದಿರೆ ಪದ್ಮಮಂದಿರೆ ಕಂಬು
ಕಂಧರೆ ಸರ್ವಸುಂದರೆ ಮಾಯೆ
ಬಂದೆನು ಕರುಣದಲಿಂದ ನೋಡು ಶತ -
ಕಂಧರÀರಿಪು ಸುಖಸಾಂದ್ರ ನಿರಾಮಯೆ
ಹಿಂದಣ ಕಲ್ಮಷ ವೃಂದಗಳೋಡಿಸಿ
ನಿಂದೆ ನಮೋನಮೋ ಯೆಂದೆ 2

ನಿತ್ಯ ಸಲ್ಲಾಪೆ
ಅನ್ನಂತಾನಂತ ರೂಪೆ
ಕನ್ಯಾಮಣಿಯೆನಿಪೆ ನಿನ್ನ ಕಡೆಗಣ್ಣಿನ ನೋಟ-
ವನ್ನು ಹರಹಿ ಹಿರಣ್ಯಗರ್ಭಾದಿ-
ಅನುದಿನ ಧನ್ಯನ ಮಾಳ್ಪಳೆ
ಅನ್ಯರಿಗೆ ಕಾರ್ಪಣ್ಯ ಬಡದಂತೆ
ಚನ್ನ ವಿಜಯವಿಠ್ಠಲನ್ನ ಪೂಜಿಪ ಗುರು
ರನ್ನೆ ಪುರಂದರರನ್ನ ಪೊಂದಿಸು ಸಂ-ಪನ್ನೆ ಯೆನ್ನ ಪ್ರಾಸನ್ನೆ 3
**********