ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ಮರಿಸು ಮನವೆ ಶ್ರೀಹರಿಯಚರಣ ಕಮಲಯುಗವರಿಯಾ ಮೂರುಲೋಕದ ನಿಜಧೊರಿಯ ಮರೆಯದಿರು ನರಹರಿಯ ಪ
ತಂತು ಪಿಡಿದನುದಿನ ಚಿಂತಿಸೊ ಕಂತಿಪಿತನ ನಿತ್ಯ ನಿಜಾನಂದ ಘನ ಸಂತತ ನೆರಿಯ ಪೂರ್ಣ 1
ಕರ್ತು ಶ್ರೀ ಸದ್ಗುರುವಿನ ಗುರ್ತುಮಾಡಿಕೊ ನಿಧಾನ ನಿತ್ಯ ನಿಜಾನುಸಂಧಾನ ಪ್ರಾರ್ಥಿಸೋ ಪರಮಾತ್ಮನ 2
ಇಹ್ಯ ಪರಾನಂದಘನ ಬಾಹ್ಯಾಂತ್ರ ಸದೋದಿತನ ಧ್ಯಾಯಿಸೋ ನೀ ಪರಿಪೂರ್ಣ ಮಹಿಪತಿ ಪ್ರಾಣನಾಥನ 3
***