Showing posts with label ಮುಡಿದಿಹ ಕುಸುಮವ ಸಡಗರದಲಿ ನೀಡೆ gopalakrishna vittala. Show all posts
Showing posts with label ಮುಡಿದಿಹ ಕುಸುಮವ ಸಡಗರದಲಿ ನೀಡೆ gopalakrishna vittala. Show all posts

Monday, 2 August 2021

ಮುಡಿದಿಹ ಕುಸುಮವ ಸಡಗರದಲಿ ನೀಡೆ ankita gopalakrishna vittala

ಮುಡಿದಿಹ ಕುಸುಮವ ಸಡಗರದಲಿ ನೀಡೆ

ಮಡದಿ ತುಳಸಿ ಎನಗೆ ಕಡುದಯದಿಂದ ಪ.

ಕಂಕಣ ಕಡಗವು ವಂಕಿ ಬಳೆಯನಿಟ್ಟು

ಪಂಕಜಕರದಿಂದ ಶಂಕಿಸದಲೆ ಎನಗೆ 1

ಪಾರಿಜಾತದ ಕುಸುಮ ನೀರೆಯೆ ನೀಡೆನಗೆ

ಪಾರುಗಾಣಿಸೆ ಭವ ಶ್ರೀ ರಮೇಶನ ತೋರಿ 2

ತುಷ್ಟಳಾಗಿ ನೀಡೆ ಅಷ್ಟು ವಿಧದ 

ಕುಸುಮಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠಲನ ಸತಿ3

****