..
ಬ್ಯಾಡ ಬ್ಯಾಡಿರೆಂದ ಅವರೊಳು ಪಂಥಬ್ಯಾಡ ಬ್ಯಾಡಿರೆಂದು ಬ್ಯಾಡ ಬ್ಯಾಡ ಪಂಥ ನೋಡಿಕೊ ರುಕ್ಮಿಣಿಮಾಡೋರು ಮುಖಭಂಗಬೇಡಿಕೊಂಡೆನು ಭಾವೆ ಪ.
ಹರದೆಯರಾಡಿದ ಮಾತು ಹರಿಯು ಕೇಳುತಬೇಗ ಕರೆಯ ಹೋಗೆಂದ ಮಡದಿಯರ ಕರಿಯ ಹೋಗೆಂದ ಮಡದಿಯರ ದ್ರೌಪತಿಯೆಸರಿಯಲ್ಲ ಪಂಥ ಬಿಡಿರೆಂದ1
ಹಾದಿ ಬೀದಿಯ ಮಾತು ಸಾಧಿಸುವರೆ ನೀವುವೇದಾಂತ ಮಳೆಯ ಗರೆದಾರುವೇದಾಂತ ಮಳೆಯ ಗರೆದಾರು ನಿಮ್ಮ ಮುಖಆದೀತು ಸಣ್ಣ ಸಭೆಯೊಳು 2
ಅತ್ತಲಿತ್ತಲೆ ಮಾತು ಜತ್ತು ಮಾಡೋರೆನೀವುಶ್ರುತ್ಯರ್ಥವೆಲ್ಲ ಸುರಿಸೋರುಶ್ರುತ್ಯರ್ಥವೆಲ್ಲ ಸುರಿಸೋರು ನಿಮ್ಮಮುಖ ಬತ್ತೀತು ಒಂದು ಕ್ಷಣದಾಗೆ 3
ಮಂದರಧರ ತನ್ನ ತಂಗಿಯರ ಕರೆಯೆಂದು ಮಂದಹಾಸದಲಿ ನುಡಿದನುಮಂದಹಾಸದಲಿ ನುಡಿದನು ಭಾವೆರುಕ್ಮಿಣಿ ಬಂದರು ಭಾಳೆ ವಿನಯದಿ4
ಆರು ಮಂದಿ ಹರಿಯ ನಾರಿಯರುಹದಿನಾರು ಸಾವಿರ ಮಂದಿ ಸಹಿತಾಗಿಹದಿನಾರು ಸಾವಿರ ಮಂದಿ ಸಹಿತಾಗಿ ಬಂದರು ನಾರಿ ದ್ರೌಪದಿಯ ಕರೆಯಲು5
ನೂರುಮಂದಿ ಹರಿಯನಾರಿಯರುತಂತಮ್ಮ ಹಾರಭಾರಗಳ ಅಲವೂತಹಾರಭಾರಗಳು ಅಲವೂತ ಬಂದರು ನೀರೆ ಸುಭದ್ರೆಯು ಕರೆಯಲು 6
ಪನ್ನಂಗ ವೇಣಿಯರು ಮನ್ನಿಸಿ ಹರಿಯಾಜ್ಞೆಚನ್ನ ರಾಮೇಶನ ಮಡದಿಯರು ಚನ್ನ ರಾಮೇಶನ ಮಡದಿಯರು ಬಂದರುಕನಿ ದ್ರೌಪತಿಯ ಕರೆಯಲು 7
****