ರಾಗ - : ತಾಳ -
ದಿಕ್ಕಾರೊ ಮುಂದೆ ದೆಸೆಯಾರೊ ಲಕ್ಕುಮಿಪತಿ l
ನಿನ್ನ ಹೊರ್ತು ಉಬ್ಬರ ತೋರೊ ll ಪ ll
ವಡಿವೆ ವಸ್ತುವು ಆರೊ ಮಡದಿ ಮಕ್ಕಳು ಆರೊ l
ಹಡದ ತಾಯಿ ತಂದಿನ್ನವರು ಆರೊ l
ಸಡಗರದಲಿ ಎಡಬಿಡದೆ ಬಾಧಿಸಿ ತ್ವರ l
ಕಡುಪಾಪಿ ಯಮ ಜಲ್ಮ ಹಿಡಿದು ಕೊಂಡೊಯಿವಾಗಾ ll 1 ll
ಹೊನ್ನು ಹಣವು ಆರೊ ತನ್ನ ನನ್ನವರಾರೊ l
ಬೆನ್ನಿಲಿ ಬಿದ್ದನುಜ ತನುಜರಾರೊ l
ಕಣ್ಣ ತಿರುವಿ ಕಾಯ ಬಣ್ಣಗೆಡಿಸಿ ತ್ವರ l
ಘನ್ನ ಘಾತಕ ಯಮ ಜಲ್ಮ ಕೊಂಡೊಯಿವಾಗ ll 2 ll
ಉಂಡ ಉಟ್ಟವರಾರೊನಂದಬಟ್ಟವರಾರೊ l
ಬಂದ ಕಂಟಕ ಪರಿಹರಿಪರಾರೊ l
ಹೊಂದಿದವಿವನೆಂದು ಕುಂದದೆ ಪ್ರದ್ಯುಮ್ನ l
ತಂದೆ ವಿಟ್ಠಲ ವಂದು ನೀ ಕಾಯ್ದಿಯಲ್ಲದೆ ll 3 ll
***