Showing posts with label ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ ಜಗದೇಕ neleyadikeshava YAAKE NEENILLI PAVADISIDE HARIYE JAGADEKA. Show all posts
Showing posts with label ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ ಜಗದೇಕ neleyadikeshava YAAKE NEENILLI PAVADISIDE HARIYE JAGADEKA. Show all posts

Monday 6 December 2021

ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ ಜಗದೇಕ ankita neleyadikeshava YAAKE NEENILLI PAVADISIDE HARIYE JAGADEKA

ರಾಗ:ಬಾಗೇಶ್ವರಿ   ತಾಳ:ಆದಿ 


ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ – ಜಗ ||pa||

ದೇಕ ವಿಖ್ಯಾತ ಪಶ್ಚಿಮ ರಂಗಧಾಮ ||a.pa||

ತಮನೊಡನೆ ಹೋರಿ ಬೆಟ್ಟವನು ಬೆನ್ನಲಿ ಪೊತ್ತುರಮಣಿ ಭೂಮಿಯನು ತಂದಾಯಾಸವೂ
ಅಮರವೈರಿಯ ಕರುಳ ಕಿತ್ತ ಕಡು ಧಾವತಿಯೊಕ್ಷಮೆಯನಳೆದೀ ಪಾದಕಮಲ ನೊಂದವೊ ||1||

ಪೊಡವಿಪಾಲಕರ ವಂಶವನು ವಪನ ಮಾಡಿಕೊಡಲಿಯನು ಬಿಸುಟು ಮಲಗಿದ ಭಾವವೊ
ಮಡದಿಯನು ಕದ್ದೊಯ್ದವನ ಶಿರವನೆ ತರಿದುಒಡಲಿನಾಯಾಸದಲಿ ಪವಡಿಸಿದ ಪರಿಯೋ ||2||

ವಾಲಿ ಮೊದಲಾದ ಎದುರಾಂತ ವೀರರ ಕೊಂದುಕಾಳಿಯ ಹೆಡೆಯ ತುಳಿತುಳಿದು ಮೈಯಲಸಿತೊಲೀಲೆಗೋಸುಗ ಬಂದು ನಿರ್ವಾಣದಲಿ ನಿಂದುಆ ಲಜ್ಜೆಗಾಗಿ ತಲೆ ಬಾಗಿ ಮಲಗಿದೆಯೊ ||3||

ನಾಲ್ಕು ಯುಗದಾಧಾರಿ ಕಡೆಗೆ ತುರಗವನೇರಿಸಾಕಾಗಿ ದಣಿದು ನೀನಿಲ್ಲಿ ಮಲಗಿದೆಯೊ
ಸಾಕಾರಿಯಾಗಿ ಗೌತಮ ಮುನೀಶ್ವರನಿಗೆಬೇಕೆಂದು ನೀ ಕೊಟ್ಟ ವರಕೆ ಮಲಗಿದೆಯೊ ||4||

ಇನ್ನೆಷ್ಟು ಕಾಲ ನೀನಿಲ್ಲಿ ಮಲಗಿದ್ದರೂನಿನ್ನನೆಬ್ಬಿಸುವವರನೊಬ್ಬರನು ಕಾಣೆ
ಉನ್ನಂತ ಕಾಗಿನೆಲೆಯಾದಿಕೇಶವರಾಯಚೆನ್ನ ಶ್ರೀರಂಗಪಟ್ಟಣದ ರಂಗಧಾಮ ||5||
***

Yake ninilli pavadiside hariye jaga
Deka vikyata shri ranganatha||pa||

Tammanodane horadi bettava pottu
Ramani bhumiyanu tandayasavo
Vali modalada virara kondu
Kaliya hedetulidu ayasavo ||1||

Podavipalakara vamshavanu vapana madi
Kodaliyanu bisutu malagida bhavavo
Madadiyanu kaddoyvana shiravane taridu
Odalinayasadali pavadisida pariyo ||2||

Nalku yugadadhari kadege turagavaneri
Sakagi danidu ninnilli malagideyo
Sakariyagi gautama munishvaranige
Bekemdu ni kotta varake malagideyo ||3||

Inneshtu kaladi malagidarilli
Ninnanebbisuvavaranobbaranu kane
Unnata kagineleyadikeshavaraya
Cenna shrirangada rangadhama ||4||
***