ಶ್ರೀರಂಗನಾಟದ ಪರಿಯಾ
ತೋರುದು ನೋಡಚ್ಚರಿಯಾ ||ಪ||
ದೇವಕಿ ಕಂದಾ ದೇವ ಮುಕುಂದಾ
ಮಾವ ಕಂಸನ ಕೊಂದಾ
ಹಾವಿನ ಫಣಿ ಮೆಟ್ಯಾಡಿದ ಛಂದಾ
ಕಾವನಯ್ಯ ಶ್ರೀ ಗೋವಿಂದಾ ||೧||
ಪೊಸ ಪರಿ ಆದವು ಕುಲಶಿಖಮಣಿಯಾ
ಅಸು ಹೀರಿದಾ ಪೂತನಿಯಾ
ಶಿಶುವಾಗಿ ನಂದಯಶೋದೆಯಾ ಮನಿಯಾ
ಮೊಸರು ಹಾಲು ಬೆಣ್ಣಿಗೇ ದಣಿಯಾ ||೨||
ವಸುದೇವಾತ್ಮಜ ಪಶುಪತಿಪ್ರೀಯಾ
ಕುಸುಮನಾಭನೇ ಶೇಷಶಯ್ಯಾ
ಭಾಸ್ಕರ ಕೋಟಿಪ್ರಕಾಶ ನಮ್ಮಯ್ಯಾ
ಲೇಸಾಗಿ ಹೊರೆವಾ ಮಹಿಪತಿಯಾ ||೩||
***
ಶ್ರೀರಂಗನಾಟದ ಪರಿಯ ತೋರುದು ನೋಡಚ್ಚರಿಯ ದೇವಕಿಕಂದ ದೇವಮುಕುಂದ ಮಾವಕಂಸನ ಕೊಂದ ಪ
ಫಣಿ ಮೆಟ್ಯಾಡಿದ ಚಂದ ಕಾವನಯ್ಯ ಗೋವಿಂದ 1
ಆಸುಹೀರಿದ ಪೂತಣಿಯ ಮೊಸರು ಹಾಲು ಬೆಣ್ಣಿಗೆ ದಣಿಯ 2
ಕುಸುಮನಾಭನೆ ಶೇಷಶಯ್ಯ ಲೇಸಾಗ್ಹೊರೆವ ಮಹಿಪತಿಯ 3
***