Showing posts with label ಎತ್ತುವೆನು ಮುತ್ತಿನಾರತಿಯಾ others. Show all posts
Showing posts with label ಎತ್ತುವೆನು ಮುತ್ತಿನಾರತಿಯಾ others. Show all posts

Friday, 27 December 2019

ಎತ್ತುವೆನು ಮುತ್ತಿನಾರತಿಯಾ others

ಎತ್ತುವೆನು ಮುತ್ತಿನಾರತಿಯಾ
ಉಮಾ  ಮಹೇಶ್ವರಿಗೇ....
ಚಂದ್ರಶೇಖರನ ರಾಣಿ
ಕಾತ್ಯಾಯಿನಿಗೇ....||


ಎತ್ತುವೆನು ಚಂದದಾರತಿಯಾ
ಅಂಬಿಕೆಗೆ ನಿತ್ಯಪ್ರದಾಯಿನಿಗೇ...
ಸ್ಕಂದ ಮಾತೆ ಅಪರ್ಣಾದೇವಿ...
ದಾಕ್ಷಾಯಿಣಿಗೇ....||

ಎತ್ತುವೆನು ತುಪ್ಪದಾರತಿಯಾ
ಕಲ್ಯಾಣಿ ಸುಲೋಚನೆಗೆ...
ಹರನರ್ಧಾಂಗಿ ತ್ರಿಲೋಕವಂಧ್ಯೆಗೆ...
ಭಾಗ್ಯದಾತೆಗೇ....||

ಎತ್ತುವೆನು ರತ್ನಗಳಾರತಿಯಾ
ಭಗವತೀ ಭವಾನೀಗೆ...
ಶುಭ ಸ್ವರೂಪಿಣಿ ರುದ್ರಾಣೀಗೆ
ಸರ್ವಮಂಗಳೆಗೇ...||
*******