ಶ್ರೀ ಗುರುರಾಮವಿಠಲ ದಾಸರ ರಚನೆ
ಹಸೆಗೇಳೈ ಶ್ರೀನಿವಾಸ ಮೂರ್ತಿ ನೀ
ಬಿಸಜಾಲಯೆ ಸಹಿತ ಪ
ಎಸೆವ ಪೀಠಕೆ ನಸುನಗುತೀಗಲು
ಕುಸುಮಾಸ್ತ್ರನ ತಾತ ಅ.ಪ
ಬ್ರಹಾದಿ ಸುರರ್ ಪ್ರಾರ್ಥನೆ ಗೈವರ್
ನಿಮ್ಮಡಿಗಳ ಬೇಡಿ
ಧರ್ಮಾನುಜ ಸಾರಥಿ ಮನವಲಿದು
ತ್ವರಿತದಿ ದಯಮಾಡಿ
1
ಓಲೆ ಬರೆದು ತಾ ಒಲಿಸಿಕೊಂಡ
ಳಾಲೋಲ ನಯನೆ ನಿನ್ನಾ
ಫಾಲಾಕ್ಷನ ಸಖ ಪುರಷೋತ್ತಮ ಜಗ
ತ್ಪಾಲನ ಸಂಪನ್ನ
2
ಸಾಮಜ ರಾಜ ವರದ ಸುರ
ಪಾನುಜ ಸರ್ವಾಂತರ್ಯಾಮಿ
ರಮಣೀಯ ಮಹಿಮಾರ್ಣವ ಶ್ರೀಗುರು
ರಾಮವಿಠಲ ಸ್ವಾಮಿ
3
***