Showing posts with label ಪರಾಕುಮಾಡಿ ಪರಾಂಬರಿಸದಿರೆ ಅರುಹಲ್ಯಾರಿಗೊ karigirisha. Show all posts
Showing posts with label ಪರಾಕುಮಾಡಿ ಪರಾಂಬರಿಸದಿರೆ ಅರುಹಲ್ಯಾರಿಗೊ karigirisha. Show all posts

Monday, 1 November 2021

ಪರಾಕುಮಾಡಿ ಪರಾಂಬರಿಸದಿರೆ ಅರುಹಲ್ಯಾರಿಗೊ ankita karigirisha

 ರಾಗ –  :  ತಾಳ – 


ಪರಾಕುಮಾಡಿ ಪರಾಂಬರಿಸದಿರೆ ಅರುಹಲ್ಯಾರಿಗೊ ಕೃಷ್ಣಾ ll ಪ ll


ಶಿರಿ ಮಾರುತರಿಂ ಮೆರೆವ ನಿನಗೆನ್ನ ಮೊರೆ ಕೇಳುವುದೇನೋ ll ಅ ಪ ll


ನರಜನ್ಮದಿಬಂದು ಮೆರೆದು ಧರೆಯಲ್ಲಿ ಕೊರಗುತಿರುವೆನೊ

ಪರಮಪುರುಷನೆ ಸರಿ ಯಾರನೆಕಾಣೆ ತೊರೆಯ ಬೇಡೆನ್ನಾ ll 1 ll


ಬಲೇ ಸಿಟ್ಟಿನಲಿ ಚಲಾದಿಬಿದ್ದು ತೊಳಲುತಿರುವೆನೋ

ಕಲಿಯನೋಡಿಸೋ ಹಲಧರಾನುಜ ಭಳಿಭಳಿರೆಯೆಂಬೆ ll 2 ll


ಕರಿಗಿರೀಶನೆ ಧರಾಧರಾರ್ಚಿತ ಸಿರಿ ನಿತ್ಯಾನಂದವಿಟ್ಠಲ

ಹರಿಗುರುಗಳ ಚರಣಕಮಲದಿ ನಿರುತಮನ ಇರಿಸೋ ll 3 ll

***