RAO COLLECTIONS SONGS refer remember refresh render DEVARANAMA
ankita ರಘುನಾಥವಿಠಲ
ರಾಗ: ಕೇದಾರಗೌಳ ತಾಳ: ಅಟ
ನೋಡು ಕೊಂಡಾಡುತ ಮಾಡುನತಿ ವರ
ಬೇಡೊ ಶ್ರೀ ಗುರು ರಾಘವೇಂದ್ರರನಾ ಪ.
ಶ್ರೀಕರ ಪರಮಕೃಪಾಕರ ಪ್ರಣತ ರ-
ತ್ನಾಕರ ಪೂರ್ಣಸುಚಂದ್ರನ 1
ರಾಜವದನಹಂಸ ರಾಜಕುಜನ ಗಜ-
ರಾಜಭಂಜಕಸುಮೃಗೇಂದ್ರನ 2
ಪಟುತರ ರಘುನಾಥವಿಠಲಪದಾಂಬುಜ
ಷಟ್ಪದ ರಾಯಮುನೀಂದ್ರನ 3
***