Monday 6 September 2021

ನೋಡು ಕೊಂಡಾಡುತ ಮಾಡುನತಿ ವರ ಬೇಡೊ ಶ್ರೀ ಗುರು ರಾಘವೇಂದ್ರರನಾ ankita raghunatha vittala

ankita ರಘುನಾಥವಿಠಲ 

ರಾಗ: ಕೇದಾರಗೌಳ ತಾಳ: ಅಟ


ನೋಡು ಕೊಂಡಾಡುತ ಮಾಡುನತಿ ವರ

ಬೇಡೊ ಶ್ರೀ ಗುರು ರಾಘವೇಂದ್ರರನಾ ಪ.


ಶ್ರೀಕರ ಪರಮಕೃಪಾಕರ ಪ್ರಣತ ರ-

ತ್ನಾಕರ ಪೂರ್ಣಸುಚಂದ್ರನ 1

ರಾಜವದನಹಂಸ ರಾಜಕುಜನ ಗಜ-

ರಾಜಭಂಜಕಸುಮೃಗೇಂದ್ರನ 2

ಪಟುತರ ರಘುನಾಥವಿಠಲಪದಾಂಬುಜ

ಷಟ್ಪದ ರಾಯಮುನೀಂದ್ರನ 3

***

 

No comments:

Post a Comment