Showing posts with label ಉದಯವಾಗೈಯ್ಯ ಶ್ರೀ ಹರಿಯೆ ramapati vittala. Show all posts
Showing posts with label ಉದಯವಾಗೈಯ್ಯ ಶ್ರೀ ಹರಿಯೆ ramapati vittala. Show all posts

Wednesday, 13 October 2021

ಉದಯವಾಗೈಯ್ಯ ಶ್ರೀ ಹರಿಯೆ ankita ramapati vittala

 ರಾಗ - : ತಾಳ -


ಉದಯವಾಗೈಯ್ಯ ಶ್ರೀ ಹರಿಯೆ ಯಂನಾ ಧೊರಿಯೆ l

ಸದಮಲ ಚರಿತಾನೆ ಯದಿಯದಾವರಿಯಲ್ಲಿ ll ಪ ll


ತತುವಮಾನಿಗಳಿಂದ ಕೂಡೀ l  ಕೂಡಿ l

ಅತಿ ಕರುಣಿ ತತ್ಸವಿತರ ವರೇಂಣ್ಯ ಮಾ l

ರುತನಿಂದಾ ಸಹಿತ ನಿರುತಾ ಯನ್ಮನದಲ್ಲಿ ll 1 ll


ಜೀವಾ ನಿಯಾಮಕ ಕೇಳೊ ನೀ ಕೇಳೊ ಯಂನಾ l

ಭಾವಮಾಡಿ ಅಜ್ಞಾವ ಶೀಳೊ l

ಆವಾಗು ನಿನ್ನ ಪಾದ ಸ್ಮೃತಿಯಿತ್ತು ಹೇ l

ದೇವಾದಿದೇವನೆ ಪರಮ ದಯಾಳೊ ll 2 ll


ನಂಬಿದೆ ನಿನ್ನ ಚರಣವಾ ಚರಣವಾ ಜಗ l

ತುಂಬಿಕೊಂಡಿರುವಿ ನೀ ಯಂಬೊ ಚಿಂತನವಾ l

ಬಿಂಬಮೂರುತಿ ರಮಾಪತಿವಿಟ್ಠಲನೆ ನಿಂನಾ l

ಕಾಂಬುವ ಸುಖವನು ಕರುಣಿಸು ತ್ವರದಿಂದ ll 3 ll

***