ರಾಗ - : ತಾಳ -
ಉದಯವಾಗೈಯ್ಯ ಶ್ರೀ ಹರಿಯೆ ಯಂನಾ ಧೊರಿಯೆ l
ಸದಮಲ ಚರಿತಾನೆ ಯದಿಯದಾವರಿಯಲ್ಲಿ ll ಪ ll
ತತುವಮಾನಿಗಳಿಂದ ಕೂಡೀ l ಕೂಡಿ l
ಅತಿ ಕರುಣಿ ತತ್ಸವಿತರ ವರೇಂಣ್ಯ ಮಾ l
ರುತನಿಂದಾ ಸಹಿತ ನಿರುತಾ ಯನ್ಮನದಲ್ಲಿ ll 1 ll
ಜೀವಾ ನಿಯಾಮಕ ಕೇಳೊ ನೀ ಕೇಳೊ ಯಂನಾ l
ಭಾವಮಾಡಿ ಅಜ್ಞಾವ ಶೀಳೊ l
ಆವಾಗು ನಿನ್ನ ಪಾದ ಸ್ಮೃತಿಯಿತ್ತು ಹೇ l
ದೇವಾದಿದೇವನೆ ಪರಮ ದಯಾಳೊ ll 2 ll
ನಂಬಿದೆ ನಿನ್ನ ಚರಣವಾ ಚರಣವಾ ಜಗ l
ತುಂಬಿಕೊಂಡಿರುವಿ ನೀ ಯಂಬೊ ಚಿಂತನವಾ l
ಬಿಂಬಮೂರುತಿ ರಮಾಪತಿವಿಟ್ಠಲನೆ ನಿಂನಾ l
ಕಾಂಬುವ ಸುಖವನು ಕರುಣಿಸು ತ್ವರದಿಂದ ll 3 ll
***
No comments:
Post a Comment