Showing posts with label ಕೃಷ್ಣನ ಮೂರ್ತಿಯ ಮನದಿ ನೆನೆವುದುತೃಷ್ಣೆಯ ಬಿಡಿಸುವುದು hayavadana. Show all posts
Showing posts with label ಕೃಷ್ಣನ ಮೂರ್ತಿಯ ಮನದಿ ನೆನೆವುದುತೃಷ್ಣೆಯ ಬಿಡಿಸುವುದು hayavadana. Show all posts

Wednesday, 1 September 2021

ಕೃಷ್ಣನ ಮೂರ್ತಿಯ ಮನದಿ ನೆನೆವುದುತೃಷ್ಣೆಯ ಬಿಡಿಸುವುದು ankita hayavadana

 ..

ಕೃಷ್ಣನ ಮೂರ್ತಿಯ ಮನದಿ ನೆನೆವುದುತೃಷ್ಣೆಯ ಬಿಡಿಸುವುದು ಎನ್ನ ಘನ್ನ ತೃಷ್ಣೆಯ ಪ.


ಮುದ್ದು ಮೊಗದ ಸುಲಿಪಲ್ಲಿನ ಗಲ್ಲದವಿದ್ರುಮಾಧರದ ನಾಸಿಕದಪದ್ಮದೆಸಳ ಪೋಲ್ವ ನಯನದ ನೊಸಲಿನೊ-ಳಿರ್ದ ಕುಂತಳತತಿಯ ಪುರ್ಬುಗಳೆಂಬ ಸದ್ಧನುವಿನ ಸ್ಥಿತಿಯಕರ್ಣದಲ್ಲಿ ಸಂಬದ್ಧ ಕುಂಡಲ ತತಿಯ ಈ ಚೆಲ್ವಿನಸದ್ರತ್ನತಿಲಕದ ಸೊಬಗನ ಕಂಡೆರಗದವನಾವ ಸುಖಿ ಗೋಕುಲದೊಳಗಿದ್ದ ಮಾನವನೆ ಸುಖಿ ಅಮ್ಮ ನಮ್ಮ 1


ಕಡೆವ ಶಂಖದಂದದಿ ಕೊರಳ ಕೌಸ್ತುಭಹಾರಬಡನಡು ಜಠರ ಪೇರುರದಉಡಿಗಂಟೆ ಕಿರುಗೆಜ್ಜೆ ಎಸೆವ ಕಟಿಯ ಪಾದಒಡೆದು ಮೂಡಿದ ಚಂದ್ರನಂತಿಹ ಕೈಯ್ಯೊಳ್ಪಿಡಿದ ಬೆಣ್ಣೆಯ ಚಂದದಿಂದ ಮೆ-ಲ್ಲಡಿಯಿಡುತಲೆ ಬಂದ ಇವನು ನಮ್ಮಮೃಡಮುಖ್ಯ ಸುರರೆಲ್ಲ ಅಂಬರದಲಿ ತ-ನ್ನೊಡೆಯನೆಂದೆಂಬರಮ್ಮ ಈ ದೇವನಅಡಿಗಳಿಗೆರಗುವ ಬೊಮ್ಮ ನೋಡು ನೋಡು2


ವರ್ತುಳೋರು ಜಾನು ಜಂಘಗಳ ಸಂ-ಪತ್ತ ನೋಡು ಕರಿಕರದರತ್ನದರ್ಪಣದ ಕಾಮನ ಬೆನ್ನಿಲೊಪ್ಪುವಬತ್ತಳಿಕೆಯ ಚೆಲುವ ಪೋಲುವ ಬೆರ-ಳರ್ಥಿಯಿಂದಲಿ ಪೊಳೆವ ಚಿತ್ರ ಚಾರಿತ್ರಚಿತ್ತಜನಯ್ಯನ ಚರಣಕಮಲವೆನ್ನಚಿತ್ತದಿ ನೆಲೆಸಿಪ್ಪುದು ಅದರಿಂದ ಸ-ರ್ವತ್ರ ಸುಖವು ತಪ್ಪದು ಹಯವದನ್ನ3

***