Showing posts with label ಶರಣು ಪಾಲಿಸೋ ಹನುಮ ಕರುಣಾಳು prasannashreenivasa. Show all posts
Showing posts with label ಶರಣು ಪಾಲಿಸೋ ಹನುಮ ಕರುಣಾಳು prasannashreenivasa. Show all posts

Thursday 5 August 2021

ಶರಣು ಪಾಲಿಸೋ ಹನುಮ ಕರುಣಾಳು ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀ ಸೌಭಾಗ್ಯ ಪ್ರದ ಹನುಮಂತ

(ಅಣು ಸುಂದರ ಕಾಂಡ)


ಶರಣು ಪಾಲಿಸೋ ಹನುಮ |

ಕರುಣಾಳು ಅಂಜನಾಸೂನು ನಿನ್ನ ಮಹಿಮೆ

ವರ್ಣಿಸಲು ನಾಬಲ್ಲೆನೆ ಹೇ ವಾಯು ಪುತ್ರನೇ ಅಸಮ

ಬಲಜ್ಞಾನ ರೂಪನೆ ನಿನಗೆ ಇಷ್ಟ ಶ್ರೀರಾಮ

ಜೀವರಲಿ ನೀ ಉತ್ತಮ |

ಶರಣು ಫಲ್ಗುಣ ಸಖ ಪಿಂಗಾಕ್ಷನೇ

ಶರಿಧಿ ದಾಟಿದಿ ಅಮಿತ ವಿಕ್ರಮ

ವಾರ್ತೆ ಸೀತೆಗೆ ಪೇಳಿ ದಶಮುಖ

ಸರ್ವತರದಿ ಸೌಮಿತ್ರಿ ಪ್ರಾಣ ಪ್ರ -

ದಾತ ಹರಿ ವರ ಶರಣು ಶರಣು ಮಹಾತ್ಮ ಸಹೃದನೇ

ಶರಣು ಪಾಲಿಸೋ ಹನುಮ ಪ


ಪೂರ್ಣಪ್ರಜ್ಞ ನೀನೆಂದು ಬಹು ಹರುಷ ತೋರಿದ |

ರಾಘವನ ಕರೆತಂದು ರವಿಜನಿಗೆ ಸಖ್ಯ | ಮಾಡಿಸಿ ನೀ ಸಿಂಧು |

ದಾಟುತ್ತ ಮೈನಾಕನ್ನೇ | ಶ್ಲೇಷಿಸಿ ನಿಂದು

ವಿಶ್ರಾಂತಿ ಕೊಳ್ಳದೆ ಮುಂದು |

ಹಾರಿ ಸುರ ಸೆಯೊಳ್ ಲೀಲೆಯಿಂದಲಿ ಹೊಕ್ಕು ಹೊರಟು -

ಸುರರು ಪೂಮಳೆ

ಕರಿಯೇ ಸಿಂಹಿಕಾ ಉದರ ಸೀಳಿ ದ್ವಾರ ಪಾಲಕೆಯನ್ನ ಜಯಿಸಿ

ಪುರಿ ಪ್ರವೇಶವ ಮಾಡಿ ಸೀತಾಕೃತಿಯ ಕಂಡುಂಗರುವ ಕೊಟ್ಟು

ಕ್ರೂರ ರಾಕ್ಷಸ ಅಕ್ಷಾದಿಗಳ ಕೊಂದು ಲಂಕಾಪುರಿಯ ಸುಟ್ಟು

ಭರದಿ ತಿರುಗಿ ಬಂದು ರಾಘವನಂಘ್ರಿಯಲಿ ಸನ್ನಮಿಸಿ ಸೀತೆಯ

ಚೂಡಾರತ್ನವನಿಟ್ಟು ರಾಮಾಲಿಂಗನ ನೀ

ಕೊಂಡಿಯೋ ಸೌಭಾಗ್ಯ ನಿಧಿಯೇ

ಶರಣು ಪಾಲಿಸೋ ಹನುಮ 1

ಜಯತು ಶರಣು ಶ್ರೀರಾಮ | ಶರಣೆಂದ

ವಿಭೀಷಣನನ್ನ | ಅತಿ ಪ್ರೇಮ

ದಿಂದ ನೀ ಸ್ವೀಕರ್ಯನೆನಲು ಶ್ರೀರಾಮ |

ಬಂದು ಅಭಯವ ನಿತ್ತ ಪೂರ್ಣಕಾಯ |

ಅಮಿತ ಸುಗುಣ ಸುಧಾಮ|

ಮಾರ್ಜಗಾರಿ ಸಸೈನ್ಯ ರಾವಣ ನನ್ನ ಜಹಿಯಲು | ಸೇತು ಕಟ್ಟಿಸಿ |

ಸುಜನ ರಕ್ಷಕ ಉರುಪರಾಕ್ರಮ ಅಜಿತರಾಮನು ಪೋಗೆ ಲಂಕೆಗೆ |

ಜಾಂಬವಾನ್ ಸುಗ್ರೀವ ಸಹ ನೀ ಜಾನಕೀಶಗೆ ಸೇವೆ ಸಲ್ಲಿಸಿ |

ಸಂಜೀವಿನಿಗಳ ತಂದು ರಾಮಾನುಜಗೆ ಪ್ರಾಣವನಿತ್ತು ರಾವಣ

ಭಂಜನವ ರಘುರಾಮ ಮಾಡಿ ಅಯೋಧ್ಯೆ

ಬರುವುದು ಪೇಳಿ ಭರತಗೆ |

ನಿಜ ಸಂತೋಷದಿ ಸೀತಾರಾಮಗೆ ರಾಜ್ಯ ಪಟ್ಟಾಭಿಷೇಕ ಗೈಸಿದಿ -

ಶುಭ ಸುಚರಿತನೆ ಶರಣು ಪಾಲಿಸೋ ಹನುಮ 2


ರಾಮಭದ್ರನು ನಿನ್ನ | ಅನುಪಮೋತ್ತಮ ಸೇವೆ ಮೆಚ್ಚಿ ಏನನ್ನ |

ನೀನಗೀವುದು ನಿನ್ನ ಸೇವೆ ಸಮ ಬಹುಮಾನ |

ಮೋಕ್ಷ ಸಾಲದು ಪೇಳು ಬೇಕಾದ್ದನ್ನ | ಎನಲು ನೀ ರಾಮನ್ನ |

ನಮಿಸಿ ಪ್ರೇಮದಿ ರಾಮಚಂದ್ರನೆ ನಿನಗೆ ಇಷ್ಟ ಸರ್ವಜೀವರು

ರಾಮನಲ್ಲಿ ಮಾಳ್ಪ ಭಕ್ತಿಗೆ ಅಧಿಕ ನಿತ್ಯ ಪ್ರವೃದ್ಧವಾದ

ಪರಮ ಭಕ್ತಿವೊಂದನ್ನೇ ಈವುದು ಎಂದು ನೀ ಕೇಳೆ ವಿನಯದಿ

ಪ್ರೇಮದಿಂದ ತಥಾಸ್ತು ಎನ್ನುತ ಬ್ರಹ್ಮಪದ ಸಹಭೋಗ ಸಾಂಪ್ರತ

ಸಮಸ್ತವಾದ ಸೌಭಾಗ್ಯ ಸಮೃದ್ಧಿಯ ಇತ್ತು ಒಲಿದನು ಅಜನಪಿತ ಶ್ರೀ

ರಮೆಯ ಅರಸ ಪ್ರಸನ್ನ ಶ್ರೀನಿವಾಸ ಭೂಮ ಏಕಾತ್ಮ ರಾಮ

ಪ್ರಮೋದಿ ವಿಭುವು _ ಶರಣು ಪಾಲಿಸೋ ಹನುಮ 3

***