Showing posts with label ಮುಯ್ಯ ಒಯ್ಯೋಣು ಬಾರೆ ಮಾನಿನಿಯರೆಲ್ಲರು ನೀರೆಮೈ ಮರೆದೇನೆ ramesha. Show all posts
Showing posts with label ಮುಯ್ಯ ಒಯ್ಯೋಣು ಬಾರೆ ಮಾನಿನಿಯರೆಲ್ಲರು ನೀರೆಮೈ ಮರೆದೇನೆ ramesha. Show all posts

Wednesday, 4 August 2021

ಮುಯ್ಯ ಒಯ್ಯೋಣು ಬಾರೆ ಮಾನಿನಿಯರೆಲ್ಲರು ನೀರೆಮೈ ಮರೆದೇನೆ ankita ramesha

 ..

ಮುಯ್ಯ ಒಯ್ಯೋಣು ಬಾರೆ ಮಾನಿನಿಯರೆಲ್ಲರು ನೀರೆಮೈ ಮರೆದೇನೆ ನಾರಿ ಮಾರನಯ್ಯನ ತೋರೆ ಪ.


ಹರದಿ ಸುಭದ್ರಾ ತಮ್ಮ ದೊರೆಗಳಿಗೆ ಅರುಹಲು ಪರಮ ಹರುಷರಾಗಿ ಐವರು ಚಪಲಾಕ್ಷಿ ಪರಮ ಹರುಷರಾಗಿ ಐವರು ಮುಯ್ಯಕ್ಕದುರದಿಂದ ಭೇರಿ ಹೊಯ್ಸಿದರ ಚಪಲಾಕ್ಷಿ1

ಹಸ್ತಿನಾಪುರದರಸು ಮತ್ತೆ ಜೋಯಿಸರ ಕರೆಸಿ ಮುತ್ತು ತುಂಬಿಡಿಸಿ ಮರದಾಗ ಚಪಲಾಕ್ಷಿಮುತ್ತು ತುಂಬಿಡಿಸಿ ಮರದಾಗ ಮುಯ್ಯಕ್ಕಉತ್ತಮ ತಿಥಿಯು ಬರಬೇಕು ಚಪಲಾಕ್ಷಿ 2

ಧರ್ಮನ ಪ್ರಶ್ನೆಯ ಪ್ರೇಮದಿಂದಲೆ ಕೇಳಿ ಅಮ್ಮಯ್ಯ ಶ್ರೀ ರಮಣನ ನೆನೆಯುತ ಚಪಾಲಾಕ್ಷಿ ಶ್ರೀ ರಮಣನ ನೆನೆಯುತ ಬೃಹಸ್ಪತಿಜಮ್ಮನೆ ತೆಗೆದಾ ಶುಭತಿಥಿಚಪಲಾಕ್ಷಿ3

ಈಗಿನ ವ್ಯಾಳ್ಯಕ್ಕ ಜಾಗು ಮಾಡದೆ ಕೃಷ್ಣಿಹೋಗ ನೀಗೆದ್ದು ಬರತೀಯೆ ಚಪಲಾಕ್ಷಿಹೋಗ ನೀಗೆದ್ದು ಬರತೀಯೆ ಎನುತಲೆ ಆಗಬೃಹಸ್ಪತಿಯು ನುಡಿದಾನೆ ಚಪಲಾಕ್ಷಿ 4

ಇಂದಿನ ದಿವಸÀಕ್ಕ ಸಂದೇಹ ಬ್ಯಾಡವ್ವಾ ತಂದೆರಾಮೇಶನ ಮಡದೇರ ಚಪಲಾಕ್ಷಿತಂದೆ ರಾಮೇಶನ ಮಡದೇರ ನಾಚಿಸಿ ಬಂದಿಯೆಕೃಷ್ಣಿ ನಗುತಲೆ ಚಪಲಾಕ್ಷಿ5

****