Showing posts with label ಳಳ- RSS- ನವ ಯುವ ಜನರೇ ನೀಡಲು others rss. Show all posts
Showing posts with label ಳಳ- RSS- ನವ ಯುವ ಜನರೇ ನೀಡಲು others rss. Show all posts

Friday, 24 December 2021

ನವ ಯುವ ಜನರೇ ನೀಡಲು others rss

   

RSS song .

ನವಯುವ ಜನರೇ ನೀಡಲು ಬನ್ನಿ

ನಿಮ್ಮಯ ಬಿಸಿ ಬಿಸಿ ಹರೆಯ... ಮೇಲೆತ್ತಲು ಈ ಧರೆಯ ||ಪ||


ಅಡಿಗಡಿಗೆದುರಾಗಿಹ ಆಕರ್ಷಣೆ

ಸ್ವಾರ್ಥದ ಚಿಂತನೆ ಸುಖದನ್ವೇಷಣೆ

ಮೈಮನ ಮರೆಸುವ ಸಾಸಿರ ಘೋಷಣೆ

ವಿಚಲಿತಗೊಳಿಸದೆ ಇರಲಿ... ಭ್ರಮೆಯಲಿ ಮುಳುಗಿಸದಿರಲಿ

ಕೇಳಿರಿ ಕಾಲದ ಕರೆಯ ಮೇಲೆತ್ತಿರಿ... ಈ ಧರೆಯ ||೧||


ಗತ ಇತಿಹಾಸದ ವೈಭವಗಾಥೆಯ

ಪುಟ ಪುಟ ತುಂಬಿಹ ಸಾಹಸ ಚರಿತೆಯ

ಪ್ರೇರಣೆ ನೀಡುವ ಗೆಲುವಿನ ಗೀತೆಯ

ಅಕ್ಷಯ ಅನುಪಮ ಆದರ್ಶ... ಅದರಾನಾಡಿನ ಉತ್ಕರ್ಷ

ತೆರೆಯಿರಿ ಭ್ರಾಂತಿಯ ತೆರೆಯ... ಮೇಲೆತ್ತಿರಿ ಈ ಧರೆಯ ||೨||


ಕಾಶ್ಮೀರದ ಕರುಳಿನ ಆಕ್ರಂದನ

ಈಶಾನ್ಯದಿ ಉರಿಬೆಂಕಿಯ ನರ್ತನ

ಇದು ಇತಿಹಾಸದ ಪುನರಾವರ್ತನ

ಮೆರೆದಿರಲು ವಿಚ್ಛಿದ್ರತೆಯು... ಎಲ್ಲಿದೆ ನಾಡಿಗೆ ಭದ್ರತೆಯು

ಆಲಿಸಿ ಮಾತೆಯ ನೊರೆಯ... ಮೇಲೆತ್ತಿರಿ ಈ ಧರೆಯ ||೩||


ಹರೆಯದ ಚೇತನ ಇಂಗುವ ಮುನ್ನ

ಬಿಸಿನೆತ್ತರು ತಂಪಾಗುವ ಮುನ್ನ

ತಾರುಣ್ಯವು ತಲೆಬಾಗುವ ಮುನ್ನ

ಕಟ್ಟಲು ಬನ್ನಿ ಹೊಸನಾಡು... ಮೆಟ್ಟಲು ಬನ್ನಿ ಹೊಸ ಜಾಡು

ಅರ್ಥೈಸಿರಿ ಈ ತ್ವರೆಯ... ಮೇಲೆತ್ತಿರಿ ಈ ಧರೆಯ ||೪||

***

navayuva janarE nIDalu banni

nimmaya bisi bisi hareya... mElettalu I dhareya ||pa||


aDigaDigedurAgiha AkarShaNe

svaarthada ciMtane suKadanvEShaNe

maimana maresuva sAsira GOShaNe

vicalitagoLisade irali... Brameyali muLugisadirali

kELiri kAlada kareya mElettiri... I dhareya ||1||


gata itihAsada vaiBavagAtheya

puTa puTa tuMbiha sAhasa cariteya

prEraNe nIDuva geluvina gIteya

akShaya anupama AdarSa... adaraanADina utkarSha

tereyiri BrAMtiya tereya... mElettiri I dhareya ||2||


kASmIrada karuLina AkraMdana

ISAnyadi uribeMkiya nartana

idu itihAsada punarAvartana

merediralu vicCidrateyu... ellide nADige Badrateyu

Alisi mAteya noreya... mElettiri I dhareya ||3||


hareyada cEtana iMguva munna

bisinettaru taMpAguva munna

tAruNyavu talebAguva munna

kaTTalu banni hosanADu... meTTalu banni hosa jADu

arthaisiri I tvareya... mElettiri I dhareya ||4||

***