ಶ್ರೀಪತಿಯು ನಮಗೆ ಸಂಪದವೀಯಲಿ ||ಪ||
ವಾಣೀಪತಿಯು ನಮಗೆ ಧೀರ್ಘಾಯು ಕೊಡಲಿ ||ಅ||
ವರವಿಬುಧರನು ಪೊರೆಯೆ ವಿಷವ ಕಂಠದಲಿಟ್ಟ
ಹರ ನಿತ್ಯ ನಮಗೆ ಸಹಾಯಕನಾಗಲಿ
ನರರೊಳುನ್ನತವಾದ ನಿತ್ಯಭೋಗಂಗಳನು
ಪುರುಹೂತ ಪೂರ್ಣ ಮಾಡಿಸಲಿ ನಮಗೆ ||
ವಿನುತಸಿದ್ಧಿಪ್ರದನು ವಿಘ್ನೇಶ ದಯದಿಂದ
ನೆನೆದ ಕಾರ್ಯಗಳೆಲ್ಲ ನೆರವೇರಿಸಲಿ
ದಿನದಿನದಿ ಧನ್ವಂತ್ರಿಯಾಪತ್ತುಗಳ ಕಳೆದು
ಮನಹರುಷವವಿತ್ತು ಮನ್ನಿಸಲಿ ಬಿಡದೆ ||
ನಿರತ ಸುಜ್ಞಾನವನು ಈವ ಮಧ್ವರಾಯ
ಗುರುಗಳಾಶೀರ್ವಾದ ನಮಗಾಗಲಿ
ಪುರಂದರವಿಠಲನ್ನ ಕರುಣದಿಂದಲಿ ಸಕಲ
ಸುರರೊಲುಮೆ ನಮಗೆ ಸುಸ್ಥಿರವಾಗಲಿ ||
***
ರಾಗ ಮುಖಾರಿ. ಛಾಪು ತಾಳ (raga tala may differ in audio)
sri pathiyu namage sampathaveeyali
vaani pathiyu namage dheergayu kodali||
vara vibutharanu poreya vishava kandadhalalitta
hara nithya namage sahaayavagali
nararolu unnathavatha nithya boggalannu
puruhuta poorna madisi namage||1||
vinutha siddhi prathanu vignesa dayadhindha
nenatha kaaryagalella neraverisalu
dina dinadhi dhanvanthri abatthugala kaledhu
manage harusha vitthu mannisali bidadhe||2||
nerutha sugnanavanu eeva madhvaraaya
gurugaalasirvadha nama gagali
purandara vittalana karunda dhindhali
surarolume namage susthrivaagali||3||
***
pallavi
shrIpatiyu namage sampadavIyali
anupallavi
vANIpatiyu namage dhIrgAyu koDali
caraNam 1
varavibudharanu poreya viSava kaNThadaliTTa hara nitya namage sahAyakanAgali
nararoLunnatavAda nitya bhOgangaLanu puruhUta pUrNa mADisali namage
caraNam 2
vinuta siddhi pradanu vighnEsha dayadinda neneda kAryagaLella neravErisali
dinadinadi dhanvantriyApattugaLa kaLedu mana haruSavavittu mannisali biDade
caraNam 3
nirata su-jnAnavanu Iva madhvarAya gurugaLAshIrvAda namagAgali
purandara viTTalanna karuNadindali sakala surarolume namage su-sthiravAgali
****
ವಾಣೀಪತಿಯು ನಮಗೆ ದೀರ್ಘಾಯು ಕೊಡಲಿ||ಪ||
ವರಬುಧರನು ಪೊರೆಯೆ ವಿಷವ ಕ೦ಠದಲಿಟ್ಟ ಹರ ನಿತ್ಯ
ನಮಗೆ ಸಹಾಯ ಮಾಡಲಿ ನರರೊಳುನ್ನತವಾದ ನಿತ್ಯ
ಭೋಗ೦ಗಳನು ಪುರುಹೂತ ಪೂರ್ಣ ಮಾಡಿಸಲಿ ನಮಗೆ ||೧||
ವಿನುತ ಸಿದ್ಧಿಪ್ರದ ವಿಘ್ನೇಶನ ದಯದಿ೦ದ ನೆನೆದ ಕಾರ್ಯಗಳೆಲ್ಲ
ನೆರವೇರಲಿ ದಿನದಿನದಿ ಧನ್ವ೦ತ್ರಿ ಆಪತ್ತುಗಳ ಕಳೆದು
ಮನಹರುಷವಿತ್ತು ಮನ್ನಿಸಲಿ ಬಿಡದೆ||೨||
ನಿರುತ ಸುಜ್ಞಾನವನು ಈವ ಗುರು ಮಧ್ವರಾಯ
ಗುರುಗಳಾಶೀರ್ವಾದ ನಮಗಾಗಲಿ ಪುರಂದರವಿಠಲನ
ಕರುಣೆಯೆ೦ದಲಿ ನಿತ್ಯ ಸುರರೊಲುಮೆ ನಮಗೆ ಸುಸ್ಥಿರವಾಗಲಿ ||೩||
*********