ಬಾಗೀನಮಿಪೆ ಬೇಗಬಾರೋ ಶ್ರೀ ನರಹರಿಯೇ ಪ
ಭಾಗವತರು ನಿನ್ನ ಕೂಗಿ ಕರೆವರಯ್ಯ ಅ.ಪ
ನಾಗಶಯನೆ ನಿನ್ನ ನಾಗರಾಜನು ಸ್ತುತಿಸೆ
ಬೇಗಸಲಹಿದಿ ಬಂದು ನಾಗಾರಿವಾಹನ 1
ಸ್ತಂಭದಿಂದಲಿ ಬಂದು ಡಿಂಭಗೊಲಿದವನೆಂದು
ನಂಬಿದ ಭಕುತರ ಹಂಬಲ ಪೂರ್ತಿಸಲು2
ಕಾರ್ಪರ ಋಷಿ ತಪಕೆ ಒಪ್ಪಿ ಭುವಿಯೊಳ್ ಬಂದು
ಪಿಪ್ಪಲ ತರುವಿನೊಳ್ ಇಪ್ಪ 'ಶ್ರೀನರಹರಿಯೇ' 3
****