..
kruti: tandevaradagopala vittala (ಪ್ರಹ್ಲಾದಗೌಡರು)
ಇಂದು ನಿನಗಿಷ್ಟ ವಂದಿಸಿ ಬಾಯ್ತೆರದು ಬೇಡಿದೆ ಪ
ಮುಂದೆ ನೀ ಮನ ಬಂದಂತ್ಯದ ಮಾಳ್ಪುದು ಕಂದು ಕಂಠನ ಪದ ತೀವ್ರಗಮನ ಬಾಲಾ ಅ.ಪ.
ಆರು ಅರಿಯದೆ ಇದು ಒಂದು ಬಾರಿ ಸೇವೆಮಾಡಲು ನಿನ್ನ ಘೋರ ದಾರಿಯಲಿಂದ ಪಾರುಗಾಣಿಸುವಾ 1
ಹಿಂದೆ ಪೇಳಿದನು ಕಳುಹಿ ಪೂರ್ಣಾನಂದ ಪಡಿಸೊ ಇಂದುಧರ ಪಿತನಾಣೆ ಸುಖ ಸಿಂಧುವಿನೊಳಗಿಟ್ಟು ಪೊರೆವಾ 2
ಪುಸಿಯಲ್ಲ ಪುಶಿಯಲ್ಲ ಈಶನಾಣೆ ಮಧ್ವದಾಸನೆ ಕೇಳು ತಂದೆವರದಗೋಪಾಲವಿಠಲನಾಣೆ 3
***