Showing posts with label ಬೇಗನೆ ಬಾರೊ ಶ್ರೀ ಹರಿಯನೆ ತೊರೋ gopalakrishna vittala. Show all posts
Showing posts with label ಬೇಗನೆ ಬಾರೊ ಶ್ರೀ ಹರಿಯನೆ ತೊರೋ gopalakrishna vittala. Show all posts

Monday 2 August 2021

ಬೇಗನೆ ಬಾರೊ ಶ್ರೀ ಹರಿಯನೆ ತೊರೋ ankita gopalakrishna vittala

ಬೇಗನೆ ಬಾರೊ ಶ್ರೀ ಹರಿಯನೆ ತೊರೋ

ಶ್ರೀ ಗುರುವೇ ದಯದಿ ಪ.


ಬೇಗನೆ ಬಾರೊ ಯೊಗಿಗಳೊಡೆಯ

ನಾಗಶಯನ ಪ್ರೀತ ತ್ವರಿತದಿ ಅ.ಪ.


ಭಕ್ತರೆಲ್ಲರು ನಿಮ್ಮ ದಾರಿಯನೆ ನೋಡುತಾ-

ಸಕ್ತಿಯಿಂದಿರುತಿಹರೊ

ಮುಕ್ತಿ ಮಾರ್ಗ ತೋರ್ವ ಮೋದ ಗುರುವೆ ನಿಮ್ಮ

ಶಕ್ತಿಗೆ ಎದುರ್ಯಾರೊ ಧರೆಯೊಳು 1

ಕಾಣದೆ ಕಂಗಳು ಕಾತರಗೊಳ್ಳುತ

ತ್ರಾಣಗೆಡುತಲಿಹವೊ

ಪ್ರಾಣವ ರಕ್ಷಿಪ ಪ್ರಾಣಪತಿಯ ಪ್ರಿಯ

ಕಾಣೆ ನಾನನ್ಯರನಾ ಜಗದೊಳು 2

ಪರಮಪ್ರಿಯರು ಎಂದು ಪರಮ ಬಿರುದು ಪೊಂದಿ

ಪರಮಾತ್ಮನನು ಕಂಡು

ಪರಮಾತ್ಮ ತತ್ವ ಪರಮಯೊಗ್ಯರಿಗರುಹಿ

ಪರಿಹರಿಸುವಿ ದುರಿತ ತ್ವರಿತದಿ 3

ಕಮಲಾಕ್ಷನನು ಹೃತ್ಕಮಲದಲಿ ಕಾಂಬ

ಕಮಲಾಪ್ತ ಅತಿ ಪ್ರೀತ

ಕಮಲಸಂಭವಪಿತ ಕಮಲಾಕ್ಷ ಹರಿಯ ಹೃ

ತ್ಕಮಲದಲಿ ತೋರೋ ಗುರುವರ 4

ಗೋಪಾಲಕೃಷ್ಣವಿಠ್ಠಲನ ಸೌಂದರ್ಯದ

ರೂಪವೆನಗೆ ತೋರೊ

ತಾಪವ ಹರಿಸುತ ಕಾಪಾಡಬೇಕೆಂದು

ನಾ ಪ್ರಾರ್ಥಿಸುವೆ ಗುರುವೆ ತ್ವರಿತದಿ 5

****