Showing posts with label ಮುರಳಿಧರನು ಕೊಳಲನೂದುವ ಸೊಬಗ ನೋಡಿದ್ಯಾ ಮನವೇ ramavallabha vittala. Show all posts
Showing posts with label ಮುರಳಿಧರನು ಕೊಳಲನೂದುವ ಸೊಬಗ ನೋಡಿದ್ಯಾ ಮನವೇ ramavallabha vittala. Show all posts

Friday, 6 August 2021

ಮುರಳಿಧರನು ಕೊಳಲನೂದುವ ಸೊಬಗ ನೋಡಿದ್ಯಾ ಮನವೇ ankita ramavallabha vittala

 ..

Kruti by ಸರಸಾಬಾಯಿ Sarasabai 

ಮುರಳಿಧರನು ಕೊಳಲನೂದುವ ಸೊಬಗ

ನೋಡಿದ್ಯಾ ಮನವೇ ಪ.

ನಾರಿಯರ ಮನವಾ ಸೆಳೆದು ಊದುತಲಿರುವನು ಅ.ಪ.

ಇಂದು ಈ ಗೋವಿನ ಆನಂದವ ನೋಡಿದ್ಯಾ

ಇಂದಿರೇಶನ ಪಾದಾಮೃತ ಸವಿಯುತಿರುವುದು 1

ಕಾಮಧೇನು ಕಲ್ಪವೃಕ್ಷದ ಕಾಯ ಜನಕನ

ಕೊಳಲ ಧ್ವನಿಯು ಕೇಳುತಲಿರುವುದು 2

ರಮಾವಲ್ಲಭ ವಿಠಲನು ಮುರಳಿಸ್ವರದಿಂದ

ಮಾರ ಜನಕ ರಾಗದಿಂದ ಊದುತಲಿರುವನು 3

***