Showing posts with label ತತು ಪೂರ್ವದಲ್ಲಿ vijaya vittala ankita suladi ಚತುರ್ವಿಂಶತಿ ತತ್ವ ಸುಳಾದಿ TUTU PURVADALLI CHATURVIMSHATI TATVA SULADI. Show all posts
Showing posts with label ತತು ಪೂರ್ವದಲ್ಲಿ vijaya vittala ankita suladi ಚತುರ್ವಿಂಶತಿ ತತ್ವ ಸುಳಾದಿ TUTU PURVADALLI CHATURVIMSHATI TATVA SULADI. Show all posts

Sunday 13 June 2021

ತತು ಪೂರ್ವದಲ್ಲಿ vijaya vittala ankita suladi ಚತುರ್ವಿಂಶತಿ ತತ್ವ ಸುಳಾದಿ TUTU PURVADALLI CHATURVIMSHATI TATVA SULADI

Audio by SmtNandiniSripad
 


ಶ್ರೀವಿಜಯದಾಸಾರ್ಯ ವಿರಚಿತ  ಚತುರ್ವಿಂಶತಿ ತತ್ವ ಸುಳಾದಿ 


(ಚತುರ್ವಿಂಶತಿ ತತ್ವಗಳ ಮೂಲ ಸ್ವರೂಪ ಮತ್ತು ಸೃಷ್ಟಿಗೆ ಬಂದ ನಂತರ ಅವುಗಳ ಕಾರ್ಯಗಳ ವಿವರ.) 


 ರಾಗ ಆರಭಿ 


 ಧ್ರುವತಾಳ 


ತತು ಪೂರ್ವದಲ್ಲಿ ಯನಗೆ ಹಿತವಾದ ಹಿರಿಯರು 

ಪ್ರತಿಯಿಲ್ಲದ ಧನ ಸ್ಥಾಪಿಸಿರಲು 

ಕ್ಷಿತಿಯ ಶೋಧಿಸಲಿಲ್ಲ ಕಂಡ ಕಡೆ ತಿರುಗಿ 

ಮತಿ ಭ್ರಮಣನಾಗಿ ಅರಸಲಿಲ್ಲ 

ಸಥೆಯಲ್ಲಿಟ್ಟಂತೆ ಬರುತಲೆ ಗುರುತ ಕಂಡೆ 

ಮಿತಿ ಯಾವುದು ಯೆನ್ನ ಅತಿಶಯಕೆ 

ಚತುರಬಾಹು ನಾಮ ವಿಜಯವಿಟ್ಠಲನ್ನ 

ನುತಿಸುವ ಭಾಗ್ಯ ಸುಕೃತ ಧನವೆಂತೊ ॥ 1 ॥ 


 ಮಟ್ಟತಾಳ 


ಚತುರವಿಂಶತಿ ಹಳೆ ನಾಣ್ಯಗಳಯ್ಯ 

ಪ್ರತಿ ಪ್ರತಿ ಪೆಸರುಗಳು ಒಂದೊಂದರ ಮ್ಯಾಲೆ 

ಪೃಥುವಿಗೆ ನೂತನದ ಶುದ್ಧ ಮುದ್ರೆ ಪಡಿ 

ಶ್ರುತಿಯಲ್ಲಿ ಶೋಧಿಸಲು ಆದಿಯಲ್ಲಿ ಉಂಟು 

ಚತುರಮೂರುತಿ ನಾಮ ವಿಜಯವಿಟ್ಠಲನ್ನ 

ನತಜನಾಶ್ರಯವೊ ಎನ್ನ ಪುಣ್ಯಭಾಗ್ಯವೊ ॥ 2 ॥ 


 ರೂಪಕತಾಳ 


ಬಣ್ಣ ನೋಡಲು ಷೋಡಶ ಬಣ್ಣಾಧಿಕಾನೇಕ 

ಚಿನ್ನವಾದರು ವರೆಗಲ್ಲಿಲಿ ನೋಡಲಿ ಸಲ್ಲ 

ಚಿನ್ನಿವಾರರು ಇವಕೆ ಬೆಲೆಗಟ್ಟಲಾರರು 

ಕಣ್ಣಿಂದ ನೀಕ್ಷಿಸೆ ಪರಿಪರಿ ವರ್ನಗಳು 

ತನ್ನಿಂದ ತಾನೆ ಉದ್ಭವವಾದುದಲ್ಲದೆ 

ಅನ್ಯರಿಂದಲಿ ನಾಣ್ಯ ಕಲ್ಪಿತವಾದುದಲ್ಲ 

ಚನ್ನ ಸುವರ್ನ ವರ್ನ ವಿಜಯವಿಟ್ಠಲ 

ಚಿನ್ನಿವಾರನೆ ಇದರ ಮೂಲಾಗ್ರವನು ಬಲ್ಲ ॥ 2 ॥ 


 ಝಂಪಿತಾಳ 


ಕಾಸುವದಲ್ಲ ಕಂಡವರು ಆಲ್ಪರಿದರೆ 

ಕಾಶಿನಷ್ಟು ಕಡಿದು ಕೊಡುವದಲ್ಲ 

ಕಾಶಿ ರಾಮೇಶ್ವರ ದೇಶವನು ತಿರುಗಿದರೆ 

ಬ್ಯಾಸತ್ತು ಹೊರಲಾರೆನೆಂಬೊದಲ್ಲ 

ಏಸು ದಿನ ಇದ್ದರು ಭಾರ ಕಿಂಚಿತು ಇಲ್ಲ 

ಬೀಸಿ ಬಿಸುಟರೆ ಕೆಳಗೆ ಬೀಳುವದಲ್ಲ 

ವಿಶೋಧನನಾಮ ವಿಜಯವಿಟ್ಠಲ 

ಪೋಷಿಸುವ ನೀ ನಾಣ್ಯ ಸೇರಿದವರ ॥ 4 ॥ 


 ತ್ರಿವಿಡಿತಾಳ 


ಒಂದು ನಾಣ್ಯದಿಂದ ಇಂದ್ರಾದಿ ನಿರ್ಜರರ 

ಮಂದಿರ ಸಹಿತ ಬೆಲೆಗೊಳ್ಳಲಿಬಹುದು 

ಹಿಂದೆ ಮುಂದೆನ್ನ ನೂರೊಂದು ಕುಲದವರಿಗೆ 

ಬಂದ ದೋಷ ದಾರಿದ್ರ ಕಳೆಯಬಹುದು 

ಮಂದಮತಿ ಯೆಂಬೊ ಬಡತನ ಬಿಡದಿರೆ 

ಒಂದು ಕ್ಷಣದಲ್ಲಿ ಬಿಡಿಸಬಹುದು 

ಸಂದೇಹವಿದಕಿಲ್ಲ ಸಮ ವಿಜಯವಿಟ್ಠಲ 

ಬಂಧು ಬಾಂಧವನಾಗುವ ಇದರ ದೆಶೆಯಿಂದ ॥ 5 ॥ 


 ಅಟ್ಟತಾಳ 


ನೃಪತಿ ಚೋರ ಪಾವಕನ ಭಯವೆ ಯಿಲ್ಲ 

ಸ್ವಪನದಲ್ಲ್ಯಾದರು ತೊಲಗಿ ಪೋಗುವದಲ್ಲ 

ತಪಶಿಗೆಯಾದರು ವೇಗ ಸಿಗುವದಲ್ಲ 

ಜಪಿಸಿದ ಹಾಗೆಲ್ಲ ಸಾಧ್ಯವೆ ಪುಶಿಯಲ್ಲ 

ತಪಿಸುವ ದುರಿತಾನಲಕೆ ಶಾಂತನಾಗಿ 

ಉಪಕಾರವೆಂಬೋ ಸೋನೆಗರೆವುದು

ಸ್ವಪನ ನಾಮ ವಿಜಯವಿಟ್ಠಲನ ಚರಣ ಸೇ -

ವಿಪ ಮನುಜರಿಗೆ ಸವಿೂಪದಲ್ಲಿಪ್ಪುದು ॥ 6 ॥ 


 ಆದಿತಾಳ 


ಸಂಚಿತಾರ್ಥ ಪುಣ್ಯದಿಂದ ವಂಚನೆಯಿಲ್ಲದ ಹಾಗೆ 

ಸಂಚಿತಾದ ಮಂಗಳ ಧನ ಕೊಂಚವಾಗದಂತೆ ಮನಕೆ

ಹಂಚಿಕೆ ಬೇಡುವದಿಲ್ಲ ಪಂಚರಾತ್ರಿಯನಸಲ್ಲ

ಅಂಚೆ ಅಂಚೆ ಜನುಮಕ್ಕೆ ಪ್ರಾಪಂಚ ಬಿಡದಲ್ಲಿಪ್ಪುದು 

ಮುಂಚೆ ಇದ್ದಲ್ಲಿದರ ಮಹಿಮೆ ಕಿಂಚಿತಾದರು ತಿಳಿಯದಿದ್ದೆ 

ಹಿಂಚಿನ ಸುಕೃತದಿಂದ ಸಂಚಾರ ಫಲಿಸಿತು 

ಪಂಚಮೊಗವದನ ವಿಷ್ಣು ವಿಜಯವಿಟ್ಠಲನ್ನ 

ಪಂಚ್ಯೆದಲ್ಲಿ ಸೇರುವಂಥ ಚಂಚಲ ಘನವಾಯಿತು ॥ 7 ॥ 


 ಜತೆ 


ಕುಕ್ಷಿಯೊಳು ಸ್ಥಾಪಿಸಿ ಈ ಕ್ಷಿತಿಯೊಳು ಬೀರಿ 

ಅಕ್ಷಯಾ ವಿಜಯವಿಟ್ಠಲನು ಬಡ್ಡಿಗೆ ಈವ ॥

*****