Showing posts with label ನಾರಾಯಣ ನರಹರಿ ಪರಬ್ರಹ್ಮನಿರ್ವಿಕಾರಿ shanti. Show all posts
Showing posts with label ನಾರಾಯಣ ನರಹರಿ ಪರಬ್ರಹ್ಮನಿರ್ವಿಕಾರಿ shanti. Show all posts

Sunday, 1 August 2021

ನಾರಾಯಣ ನರಹರಿ ಪರಬ್ರಹ್ಮನಿರ್ವಿಕಾರಿ ankita shanti

 ..

kruti by shantibai dasaru ಶಾಂತಿಬಾಯಿ ದಾಸರು


ನಾರಾಯಣ ನರಹರಿ ಪರಬ್ರಹ್ಮನಿರ್ವಿಕಾರಿ ಪ


ದ್ರುಕ್ ದೃಶ್ಯ ಮಧ್ಯದಲ್ಲಿ ಚೊಕ್ಕಟ್ಟಾಗಿರುವನಲ್ಲಿ

ಪ್ರಕಟವಾಗಿ ತ್ರಿಕೊಟ ನಿಜ ಸ್ಥಾನದಲ್ಲಿ ತೋರುವನಲ್ಲಿ 1


ಏನೊಂದು ತಿಳಿಯದದನೆ ತಾನೆಂದು ತಿಳಿಯಲವನೆ

ಧ್ಯಾನದರುವಿನಲ್ಲಿ ಮನ ತಾನೆ ಚಿನ್ಮೂರ್ತಿ ಘನ 2


ತನುವಿನೊಳ ಹೊರಗಿರ್ಪ ತನ್ನ ತಾನೆ ಕಾಣುತಿರ್ಪ

ಚಿನುಮಯಾತ್ಮ ಪರಂಜ್ಯೋತಿ ಘನಪರಾತ್ಪರ ಮೂರ್ತಿ 3


ಅಂತರಾತ್ಮ ಗುರು ಪೂರ್ಣನಂತ ಮಹಿಮ ನಾರಾಯಣ

ಸಂತ ಸಾಧು ಸಾಧ್ಯ ಜ್ಞಾನ ಶಾಂತಿ ಪಾಲಿಪ ಘನ 4

***