Showing posts with label ಆದಿತ್ಯದೇವ ಗ್ರಹಸ್ತೋತ್ರಗಳು ತತ್ತ್ವಸುವ್ವಾಲಿ jagannatha vittala ADITYADEVA GRAHA STOTRAS TATWA SUVVALI. Show all posts
Showing posts with label ಆದಿತ್ಯದೇವ ಗ್ರಹಸ್ತೋತ್ರಗಳು ತತ್ತ್ವಸುವ್ವಾಲಿ jagannatha vittala ADITYADEVA GRAHA STOTRAS TATWA SUVVALI. Show all posts

Saturday, 14 December 2019

ಆದಿತ್ಯದೇವ ಗ್ರಹಸ್ತೋತ್ರಗಳು ತತ್ತ್ವಸುವ್ವಾಲಿ ankita jagannatha vittala ADITYADEVA GRAHA STOTRAS TATWA SUVVALI

Audio by Mrs. Nandini Sripad

ಶ್ರೀ ಜಗನ್ನಾಥದಾಸಾರ್ಯ ವಿರಚಿತ  ತತ್ತ್ವಸುವ್ವಾಲಿ

ಗ್ರಹಸ್ತೋತ್ರಗಳು

ಶ್ರೀ ಸೂರ್ಯದೇವರ ಸ್ತೋತ್ರ

ಆದಿತ್ಯದೇವ ತ್ವತ್ಪಾದಯುಗಳಕೆ ಅಭಿ -
ವಾದನವ ಮಾಳ್ಪೆ ಅನುದಿನ । ಅನುದಿನದಿ ಸಜ್ಜನರ 
ವ್ಯಾಧಿಗಳ ಕಳೆದು ಸುಖವೀಯೋ ॥ 1 ॥ ॥ 6 ॥

ಸಂಜ್ಞಾರಮಣ ನಿನಗೆ ವಿಜ್ಞಾಪಿಸುವೆನು ಸ -
ರ್ವಜ್ಞ ನೀನೆಂದು ಸರ್ವತ್ರ । ಸರ್ವತ್ರ ಎನಗೆ ಬ್ರ -
ಹ್ಮಜ್ಞಾನ ಭಕುತಿ ಕರುಣಿಸೋ ॥ 2 ॥ ॥ 7 ॥

ಸೂರಿಗಮ್ಯನೆ ವಾಕ್‍ ಶರೀರ ಬುದ್ಧಿಜವಾದ -
ಪಾರದೋಷಗಳ ಎಣಿಸದೆ । ಎಣಿಸದೆ ಭಗವಂತ - 
ನಾರಾಧನೆಯನಿತ್ತು ಕರುಣಿಸೊ ॥ 3 ॥ ॥ 8 ॥

ಶ್ರೀ ಚಂದ್ರದೇವರ ಸ್ತೋತ್ರ

ರೋಹಿಣೀರಮಣ ಮದ್ದೇಹಗೇಹಾದಿಗಳ 
ಮೋಹ ಪರಿಹರಿಸಿ ಮನದಲ್ಲಿ । ಮನದಲ್ಲೆನಗೆ ಗರುಡ -
ವಾಹನನ ಸ್ಮರಣೆಯನು ಕರುಣಿಸೋ ॥ 4 ॥ ॥ 9 ॥

ಕ್ಷೀರಾಬ್ಧಿಜಾತ ಮಾರಾರಿ ಮಸ್ತಕಸದನ 
ವಾರಿಜೋದ್ಭವನ ಆವೇಶ । ಆವೇಶಪಾತ್ರ ಪರಿ -
ಹಾರ ಗೈಸೆನ್ನ ಭವತಾಪ ॥ 5 ॥ ॥ 10 ॥

ದತ್ತ ದೂರ್ವಾಸಾನುಜಾತ್ರಿ ಸಂಭವನೆ ತ್ವ -
ದ್ಭೃತ್ಯನಾನಯ್ಯ ಎಂದೆಂದೂ । ಎಂದೆಂದು ಪ್ರಾರ್ಥಿಸುವೆ 
ಹೃತ್ತಿಮಿರ ಕಳೆದೆನ್ನ ಸಂತೈಸೋ ॥ 6 ॥ ॥ 11 ॥

ಶ್ರೀ ಅಂಗಾರಕ ಸ್ತುತಿ

ಕೋಲಭೂನಂದನ ಪ್ರವಾಳ ಸಮವರ್ಣ ಕರ -
ವಾಳ ಸಮಖೇಟ ನಿಶ್ಶಂಕ । ನಿಶ್ಶಂಕ ಪಾಣಿ ಗುರು -
ಮೌಳಿ ನೀ ಎನ್ನ ಸಂತೈಸೊ ॥ 7 ॥ ॥ 12 ॥

ಮಂಗಳಾಹ್ವಯನೆ ಸರ್ವೇಙ್ಗಿತಜ್ಞನೆ ಅಂತ -
ರಂಗದಲಿ ಹರಿಯ ನೆನೆವಂತೆ । ನೆನೆವಂತೆ ಕರುಣಿಸೊ 
ಅಂಗಾರವರ್ಣ ಅನುದಿನ ॥ 8 ॥ ॥ 13 ॥

ಭೌಮರಾಜನೆ ತ್ವನ್ಮಹಾಮಹಿಮೆ ತುತಿಸಲ್ಕೆ 
ಪಾಮರನಿಗಳವೇ ಎಂದೆಂದು । ಎಂದೆಂದು ಸಜ್ಜನರ 
ಕಾಮಿತಾರ್ಥವನು ಕರುಣಿಸೊ ॥ 9 ॥ ॥ 14 ॥

ಶ್ರೀ ಬುಧ ಸ್ತುತಿ

ಬುಧನೆ ನೀ ಸುಗುಣವಾರಿಧಿ ಎಂದು ಬಿನ್ನೈಪೆ 
ಕ್ಷುಧೆಯ ಪರಿಹರಿಸಿ ಸುಜ್ಞಾನ । ಸುಜ್ಞಾನ ಸದ್ಭಕ್ತಿ -
ಸುಧೆಯ ಪಾನವನು ಕರುಣಿಸೊ ॥ 10 ॥ ॥ 15 ॥

ಚಂದ್ರನಂದನ ಸತತ ವಂದಿಸುವೆ ಮನ್ಮನದ 
ಸಂದೇಹ ಬಿಡಿಸಯ್ಯ ಮಮದೈವ । ಮಮದೈವ ಸರ್ವ ಗೋ -
ವಿಂದನಹುದೆಂದು ತಿಳಿಸಯ್ಯ ॥ 11 ॥ ॥ 16 ॥

ತಾರಾತ್ಮಜನೆ ಮಚ್ಛರೀರದೊಳು ನೆಲೆಗೊಂಡು 
ತೋರೊ ಸಜ್ಜನರ ಸನ್ಮಾರ್ಗ । ಸನ್ಮಾರ್ಗ ತೋರಿ ಉ -
ದ್ಧಾರಗೈಸೆನ್ನ ಭವದಿಂದ ॥ 12 ॥ ॥ 17 ॥

ಶ್ರೀ ಗುರು ಸ್ತುತಿ

ನುತಿಸಿ ಬೇಡುವೆ ಬೃಹಸ್ಪತಿ ಗುರುವೆ ಎನ್ನ ದು -
ರ್ಮತಿಯ ಪರಿಹರಿಸಿ ಸುಜ್ಞಾನ । ಸುಜ್ಞಾನವಿತ್ತು ಶ್ರೀ -
ಪತಿಯ ತೋರೆನ್ನ ಮನದಲ್ಲಿ ॥ 13 ॥ ॥ 18 ॥

ಸುರರಾಜ ಗುರುವೆ ತ್ವಚ್ಚರಣಾರವಿಂದಗಳಿ -
ಗೆರಗಿ ಬಿನ್ನೈಪೆ ಇಳೆಯೊಳು । ಇಳೆಯೊಳುಳ್ಳಖಿಳ ಬ್ರಾಹ್ಮ -
ಣರ ಸಂತೈಸೋ ದಯದಿಂದ ॥ 14 ॥ ॥ 19 ॥

ತಾರಾರಮಣನೆ ಮದ್ಭಾರ ನಿನ್ನದು ಮಹಾ -
ಕಾರುಣಿಕ ನೀನೆಂದು ಬಿನ್ನೈಪೆ । ಬಿನ್ನೈಪೆ ದುರಿತವ ನಿ -
ವಾರಿಸಿ ತೋರೋ ತವ ರೂಪ ॥ 15 ॥ ॥ 20 ॥

ಶ್ರೀ ಶುಕ್ರ ಸ್ತುತಿ

ಶಕ್ರಾರಿಗಳ ಗುರುವೆ ಶುಕ್ರಮುನಿರಾಯ ದರ - 
ಚಕ್ರಾಬ್ಜಪಾಣಿ ಗುಣರೂಪ । ಗುಣರೂಪ ವ್ಯಾಪಾರ 
ಪ್ರಕ್ರಿಯವ ತಿಳಿಸೋ ಪ್ರತಿದಿನ ॥ 16 ॥ ॥ 21 ॥

ಕವಿ ಕುಲೋತ್ತಂಸ ಭಾರ್ಗವ ಬೇಡಿಕೊಂಬೆ ಭಾ -
ಗವತ ಭಾರತವೆ ಮೊದಲಾದ । ಮೊದಲಾದ ಶಾಸ್ತ್ರಗಳ 
ಶ್ರವಣ ಸುಖವೆನಗೆ ಕರುಣಿಸೋ ॥ 17 ॥ ॥ 22 ॥

ನಿಗಮಾರ್ಥ ಕೋವಿದನೆ ಭೃಗುಕುಲೋತ್ತಂಸ ಕೈ -
ಮುಗಿದು ಬೇಡುವೆನೋ ದೈವಜ್ಞ | ದೈವಜ್ಞ ಹರಿಯ ಓ -
ಲಗದಲ್ಲಿ ಬುದ್ಧಿ ಇರಲೆಂದೂ ॥ 18 ॥ ॥ 23 ॥

ಶ್ರೀ ಶನಿ ಸ್ತುತಿ

ತರಣಿನಂದನ ಶನೈಶ್ಚರ ನಿನ್ನ ಪಾದಾಬ್ಜ -
ಕೆರಗಿ ಬಿನ್ನೈಪೆ ಬಹುಜನ್ಮ । ಬಹುಜನ್ಮಕೃತ ಪಾಪ -
ಪರಿಹಾರ ಮಾಡಿ ಸುಖವೀಯೋ ॥ 19 ॥ ॥ 24 ॥

ಛಾಯಾತನುಜ ಮನ:ಕಾಯ ಕ್ಲೇಶಗಳಿಂದ 
ಆಯಾಸ ಪಡುವಂಥ ಸಮಯದಿ । ಸಮಯದಲಿ ಲಕ್ಷ್ಮಿನಾ -
ರಾಯಣನ ಸ್ಮರಣೆ ಕರುಣಿಸೋ ॥ 20 ॥ ॥ 25 ॥

ಇದನೆ ಬೇಡುವೆ ಪದೋಪದಿ ಪುಷ್ಕರನ ಗುರುವೆ 
ಹೃದಯ ವದನದಲಿ ಹರಿಮೂರ್ತಿ । ಹರಿಮೂರ್ತಿ ಕೀರ್ತನೆಗ -
ಳೊದಗಲೆನಗೆಂದು ಬಿನ್ನೈಪೆ ॥ 21 ॥ ॥ 26 ॥

ಅಹಿಕಪಾರತ್ರಿಕದಿ ನೃಹರಿದಾಸರ ನವ -
ಗ್ರಹ ದೇವತೆಗಳು ದಣಿಸೋರೇ । ದಣಿಸೋರೆ ಇವರನ್ನ 
ಅಹಿತರೆಂದೆನುತ ಕೆಡಬೇಡಿ ॥ 22 ॥ ॥ 27 ॥

ಜಗನ್ನಾಥವಿಠ್ಠಲನ ಬದಿಗರಿವರಹುದೆಂದು
ಹಗಲಿರಳು ಬಿಡದೆ ನುತಿಸುವ । ನುತಿಸುವ ಮಹಾತ್ಮರಿಗೆ

ಸುಗತಿಗಳನಿತ್ತು ಸಲಹೋರು ॥ 23 ॥ ॥ 28 ॥
***


Sri soorya stuti
Aadityadeva twatpaadayugalake abhivandaneya maalpe anudina |
Anudinadi sajjanara vyaadhigala kaledu sukhaveeyo ||
Soorigamyane vaak shareera buddhijavaadapaaradoshagala enisade |
Enisade bhagavantanaaraadhaneyanittu karuniso ||

Sri Chandra stuti
rohini ramana maddehagehaadigala moha pariharisi manadalli |
Manadalli garudavaahanana smaraneyanu karuniso || 1 ||

Dattadoorvaasaanujaatri sambhavane twadbhrutya naanayyaa endendu |
Endendu praarthisuve hruttimira kaledenna santaiso || 2 ||

Sri angaaraka stuti
Kolabhoonandana pravaala samavarna karavaala samakheta nishyanka |
Nishyankanaakhya suramouli ni enna santaiso || 1 ||

Mangalaahvaya sarvengitaj~jane anta rangadali hariya nenevante |
Nenevante karuniso angaaravarna anudina || 2 ||

Sri budha stuti
Budha neenu sugunavaaridhiyendu binnaipe kshudheya pariharisi suj~jaana |
Suj~jaana sadbhaktisudheya paanavane karuniso || 1 ||

Chandranandana satata vandisuve manmanada sandeha bidisayya mama daiva |
Mama daiva sarvagovindanahudendu tilisayyaa || 2 ||

Sri guru stuti
Nutisi beduve bruhaspati guruve ennadurmatiya pariharisi suj~jaana |
Suj~jaanavittu shreepatiya torenna manadalli || 1 ||

Taaraaramanane madbhaara ninnadu mahaakaarunika neenemdu binnaipe |
Binnaipe duritava nivaarisi toro tava roopa || 2 ||

Sri shukra stuti
Shakraarigala guruve shukramuniraaya daracakraabjapaani gunaroopa |
Gunaroopa vyaapaaraprakriyava tiliso pratidina || 1 ||

Nigamaartha kovidane bhrugukulottamsa kaimugidu beduvenu daivaj~ja |
Daivaj~ja hariya Olagadalli buddi iralendu || 2 ||

Sri shani stuti
Taninandana shanaishcara ninna paadaabjakeragi binnaipe bahujanma |
Bahujanma kruta paapa twaritadindalisi parihaara maadi sukhaveeyo || 1 ||

Idane beduve pade padege pushkarana guruve hrudaya vadanadali harimoorti |
Harimoorti keertanegalodagalenagendu binnaipe || 2 ||

Phalastuti
Ahika paaratrikadi nruharidaasara navagrahadevategalu danisore |
Danisore ivarannu ahitarendenuta kedabedi || 1 ||

Jagannaathaviththalana badigarivarahudendu hagalirulu bidade nutisuva |
Mahaatmarige sugatigalanittu salahoru || 2 ||
***



ಜಗನ್ನಾಥದಾಸರು

ಆದಿತ್ಯದೇವ ತ್ವತ್ಪಾದಯುಗಳಕಭಿ
ವಾದನವ ಮಾಳ್ಪೆ ಅನುದೀನ | ಅನುದೀನ ಸಜ್ಜನರ
ವ್ಯಾಧಿಯ ಕಳೆದು ಸುಖವೀಯೊ 1

ಸಂe್ಞÁರಮಣ ನಿನಗೆ ವಿe್ಞÁಪಿಸುವೆನೊ ಸ
ರ್ವಜ್ಞ ನೀನೆಂದು ಸರ್ವತ್ರ | ಸರ್ವತ್ರ ಎನಗೆ ಬ್ರ
ಹ್ಮe್ಞÁನ ಭಕುತಿ ಕರುಣೀಸೊ 2

ಸೂರಿಗಮ್ಯನೆ ವಾಕ್ಶರೀರ ಬುದ್ಧಿಜವಾದ
ಪಾರ ದೋಷಗಳನೆಣಿಸಾದೆ | ಎಣಿಸಾದೆ ಭಗವಂತ
ನಾರಾಧನೆಯನಿತ್ತು ಕರುಣೀಸೊ 3

ರೋಹಿಣೀರಮಣ ಮದ್ದೇಹಗೇಹಾದಿಗಳ
ಮೋಹ ಪರಿಹರಿಸಿ ಮನದಲ್ಲಿ | ಮನದಲ್ಲಿ ಎನಗೆ ಗರುಡ
ವಾಹನನ ಸ್ಮರಣೆಯನು ಕರುಣೀಸೊ 4

ಕ್ಷೀರಾಬ್ದಿಜಾತ ಮಾರಾರಿಮಸ್ತಕಸದನ
ವಾರಿಜೋದ್ಭವನ ಆವೇಶ | ಆವೇಶಪಾತ್ರ ಪರಿ
ಹಾರ ಗೈಸೆನ್ನ ಭವತಾಪ 5

ದತ್ತದೂರ್ವಾಸನನುಜ ಅತ್ರಿಸಂಭವನೆ ತ್ವ
ದ್ಭøತ್ಯ ನಾನಯ್ಯ ಎಂದೆಂದು | ಎಂದೆಂದು ಪ್ರಾರ್ಥಿಸುವೆ
ಹೃತ್ತಿಮಿರ ಕಳೆದು ಸಂತೈಸೊ 6

ಕೋಲ ಭೂನಂದನ ಪ್ರವಾಳ ಸಮವರ್ಣ ಕರ
ವಾಳ ಸಮಖೇಟ ನಿಶ್ಯಂಕ | ನಿಶ್ಯಂಕನಾಖ್ಯ ಸುರ
ಮೌಳಿ ನೀಯೆನ್ನ 7

ಮಂಗಳಾಹ್ವಯನೆ ಸರ್ವೇಂಗಿತಜ್ಞನೆ ಅಂತ
ರಂಗದಲಿ ಹರಿಯ ನೆನೆವಂತೆ | ನೆನೆವಂತೆ ಕರುಣಿಸೊ
ಅನುದಿನ 8

ಭೌಮರಾಜನೆ ತ್ವನ್ಮಹಾಮಹಿಮೆ ತುತಿಸಲ್ಕೆ
ಪಾಮರನಿಗಳವೆ ಎಂದೆಂದು | ಎಂದೆಂದು ಸಜ್ಜನರ
ಕಾಮಿತಾರ್ಥವನೆ ಕರುಣೀಸೊ 9

ಬುಧನೆ ನೀ ಸುಗುಣವಾರಿಧಿಯೆಂದು ಬಿನ್ನೈಪೆ
ಕ್ಷುಧೆಯ ಸಂಹರಿಸಿ ಸುe್ಞÁನ | ಸುe್ಞÁನ ಸದ್ಭಕ್ತಿ
ಸುಧೆಯ ಪಾನವನೆ ಕರುಣೀಸೊ 10

ಚಂದ್ರನಂದನ ಸತತ ವಂದಿಸುವೆ ಮನ್ಮನದ
ಮಮದೈವ ಸರ್ವ ಗೋ
ವಿಂದನಹುದೆಂದು ತಿಳಿಸಯ್ಯಾ 11

ತಾರಾತ್ಮಜನೆ ಮಚ್ಛರೀರದೊಳು ನೆಲೆಗೊಂಡು
ತೋರು ಸಜ್ಜನರ ಸನ್ಮಾರ್ಗ | ಸನ್ಮಾರ್ಗ ತೋರಿ ಉ
ದ್ಧಾರಗೈಸೆನ್ನ ಭವದಿಂದ 12

ನತಿಸಿ ಬೇಡುವೆ ಬೃಹಸ್ಪತಿ ಗುರುವೆ ಎನ್ನದು
ರ್ಮತಿಯ ಪರಿಹರಿಸಿ ಸುe್ಞÁನ ಸುe್ಞÁನವಿತ್ತು ಶ್ರೀ
ಪತಿಯ ತೋರೆನ್ನ ಮನದಲ್ಲಿ 13

ಸುರರಾಜಗುರುವೆ ತ್ವಚ್ಚರಣಾರವಿಂದಗಳಿ
ಗೆರಗಿ ಬಿನ್ನೈಪೆ ಇಳೆಯೊಳು ಇಳೆಯೊಳುಳ್ಳಖಿಳ ಬ್ರಾಹ್ಮ
ಣರ ಸಂತೈಸೋ ದಯದಿಂದ 14

ತಾರಾರಮಣನೆ ಮದ್ಬಾರ ನಿನ್ನದೊ ಮಹೋ
ದಾರ ನೀನೆಂದು ಬಿನ್ನೈಪೆ | ಬಿನ್ನೈಪೆ ದುರಿತವ ನಿ
ವಾರಿಸಿ ತೋರೊ ತವರೂಪ 15

ಶಕ್ರಾರಿಗಳ ಗುರುವೆ ಶುಕ್ರಮುನಿರಾಯ ದರ
ಚಕ್ರಾಬ್ಜಪಾಣಿ ಗುಣರೂಪ | ಗುಣರೂಪ ವ್ಯಾಪಾರ
ಪ್ರಕ್ರಿಯವ ತಿಳಿಸೊ ಪ್ರತಿದೀನ 16

ಕವಿಕುಲೋತ್ತಂಸ ಭಾರ್ಗವ ಬೇಡಿಕೊಂಬೆ ಭಾ
ಗವತ ಭಾರತ ಮೊದಲಾದ | ಮೊದಲಾದ ಶಾಸ್ತ್ರಗಳ
ಶ್ರವಣ ಸುಖವೆನಗೆ ಕರುಣೀಸೊ | 17

ನಿಗಮಾರ್ಥ ಕೋವಿದನೆ ಭೃಗುಕುಲೋತ್ತಂಸ ಕೈ
ಮುಗಿದು ಬೇಡುವೆನೊ ದೈವಜ್ಞ | ದೈವಜ್ಞ ಹರಿಯ ಓ
ಲಗದಲ್ಲಿ ಬುದ್ಧಿಯಿರಲೆಂದು 18

ತರಣಿನಂದನ ಶನೈಶ್ಚರ ನಿನ್ನ ದಿವ್ಯ ಪದಾಬ್ಜ
ಕ್ಕೆರಗಿ ಬಿನ್ನೈಪೆ | ಬಿನ್ನೈಪೆ ಬಹುಜನ್ಮಕೃತ ಪಾಪ
ತ್ವರಿತದಿಂದಿಳಿಸಿ ಪೊರೆಯೆಂದು 19

ಛಾಯಾತನುಜ ಮನೋವಾಕ್ಕಾಯ ಕ್ಲೇಶಗಳಿಂದ
ಸಮಯದಿ ಶ್ರೀ ಲಕ್ಷ್ಮೀನಾ
ರಾಯಣನ ಸ್ಮರಣೆ ಕರುಣೀಸೊ 20

ಇದನೆ ಬೇಡುವೆ ಪದೇಪದೆಗೆ ಪುಷ್ಕರನ ಗುರುವೆ
ಹರಿಮೂರ್ತಿ ಕೀರ್ತನೆಗೆ
ಳೊದಗಲೆನಗೆಂದು ಬಿನ್ನೈಪೆ 21

ಅಹಿಕ ಪಾರತ್ರಿಕದಿ ನರಹರಿಯದಾಸರ ನವ
ಗ್ರಹದೇವತೆಗಳು ದಣಿಸೋರೆ | ದಣಿಸೋರೆ ಇವರನ್ನು
ಅಹಿತರೆಂದೆನುತ ಕೆಡಬೇಡಿ22

ಜಗನ್ನಾಥವಿಠ್ಠಲನ ಬದಿಗರಿವರಹುದೆಂದು
ಹಗಲಿರುಳು ಬಿಡದೆ ತುತಿಸುವ | ತುತಿಸುವ ಮಹಾತ್ಮರಿಗೆ
ಸುಗತಿಗಳನಿತ್ತು ಸಲಹೋರು 23
*************

ವ್ಯಾಖ್ಯಾನ : 

ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್, ದಾವಣಗೆರೆ.

ಶ್ರೀಜಗನ್ನಾಥದಾಸಾರ್ಯ ವಿರಚಿತ  ತತ್ತ್ವಸುವ್ವಾಲಿ

ಗ್ರಹಸ್ತೋತ್ರಗಳು

ಶ್ರೀ ಸೂರ್ಯದೇವನ ಸ್ತುತಿ

ಆದಿತ್ಯದೇವ ತ್ವತ್ಪಾದಯುಗಳಕೆ ಅಭಿ -
ವಾದನವ ಮಾಳ್ಪೆ ಅನುದಿನ । ಅನುದಿನದಿ ಸಜ್ಜನರ
ವ್ಯಾಧಿಗಳ ಕಳೆದು ಸುಖವೀಯೋ ॥ 1 ॥

ಅರ್ಥ : ಆದಿತ್ಯದೇವ = ಹೇ ಸೂರ್ಯದೇವ ! ತ್ವತ್ಪಾದಯುಗಳಕೆ = ನಿನ್ನ ಪದ ದ್ವಂದ್ವಕೆ , ಅನುದಿನದಿ = ನಿತ್ಯವೂ , ಅಭಿವಾದನವ = ನಮಸ್ಕಾರವನ್ನು , ಮಾಳ್ಪೆ = ಮಾಡುವೆನು . ಸಜ್ಜನರ = ಸುಜೀವಿಗಳ , ವ್ಯಾಧಿಗಳ = ರೋಗಗಳನ್ನು , ಕಳೆದು = ಪರಿಹರಿಸಿ , ಸುಖವೀಯೋ = ದೇಹಸೌಖ್ಯವನ್ನು ಕರುಣಿಸು.

ವಿಶೇಷಾಂಶ : (1) ಸಜ್ಜನರ (ಮೋಕ್ಷ) ಸಾಧನೆಗೆ ನವಗ್ರಹಗಳ ಅನುಗ್ರಹವು ಅವಶ್ಯಕ. ಗ್ರಹಾಂತರ್ಗತನಾದ ವಿಷ್ಣುವೇ ಸ್ತೋತ್ರದ ಮುಖ್ಯ ವಿಷಯನೆಂದೂ ತಿಳಿಯಬೇಕು.

(2) ಛಾಂದೋಗ್ಯೋಪನಿಷತ್ತಿನಲ್ಲಿ ' ಅಸೌ ವಾ ಆದಿತ್ಯೋ ದೇವಮಧು ' ಎಂದು ಪ್ರಾರಂಭವಾಗುವ ' ಮಧುವಿದ್ಯೆ ' ಯಲ್ಲಿ ಆದಿತ್ಯಾಂತರ್ಗತನಾದ ಆದಿತ್ಯನಾಮಕ ವಿಷ್ಣುವೇ 'ಮಧು' ನಾಮಕನೆಂದು ಹೇಳಿದೆ. 'ಮಧು' ಎಂದರೆ ಸುಖಾಶ್ರಯನು. ಸ್ವಯೋಗ್ಯಭಗವದುಪಾಸನೆಯು ನಿರಂತರ ನಡೆದು ಫಲವಾಗಬೇಕಾದರೆ , ದೇಹದಲ್ಲಿ ರೋಗಾದಿ ಉಪದ್ರವಗಳಿರಕೂಡದು ; ದೀರ್ಘಾಯುಷ್ಯವೂ ಬೇಕು. ಅಪಮೃತ್ಯುವಿನಿಂದ , ಮಧ್ಯೆ ವಿಚ್ಛಿತ್ತಿಯೂ ಬರಬಾರದು . ಪ್ರತಿ ತಿಂಗಳಿಗೊಬ್ಬರಂತೆ ದ್ವಾದಶ(೧೨) ಆದಿತ್ಯರಿರುವರು. ' ಆದಿತ್ಯಾನಾಂ ಪ್ರಾರ್ಥನೇನ ತದ್ಗಂ ಮೃತ್ಯುಮಪಾನುದೇತ್ ' ಎಂಬ ಭಾಷ್ಯಭಾಗದಲ್ಲಿ ಶ್ರೀಮದಾನಂದತೀರ್ಥ ಭಗವತ್ಪಾದರು ಆದಿತ್ಯರನ್ನು ಪ್ರಾರ್ಥಿಸಿ , ಬರಲಿರುವ ರೋಗಗಳನ್ನೂ , ಅಪಮೃತ್ಯುವನ್ನೂ ಪರಿಹರಿಸಿಕೊಳ್ಳಬೇಕೆಂದು ಹೇಳೀರುವರು. ಆದಿತ್ಯರ ಪ್ರಸನ್ನತೆಯು , ತದಂತರ್ಗತನಾದ ಮಧುನಾಮಕ ಶ್ರೀಹರಿಯ ಪ್ರಸಾದವನ್ನು ದೊರಕಿಸುತ್ತದೆ. ಅದು ನಿರಂತರ ಭಗವದುಪಾಸನೆಗೆ ಅವಶ್ಯಕವಾದ ಸುಖಶಾಂತಿಗಳನ್ನು ದೊರಕಿಸುತ್ತದೆ.

ಸಂಜ್ಞಾರಮಣ ನಿನಗೆ ವಿಜ್ಞಾಪಿಸುವೆನು ಸ -
ರ್ವಜ್ಞ ನೀನೆಂದು ಸರ್ವತ್ರ । ಸರ್ವತ್ರ ಎನಗೆ ಬ್ರ -
ಹ್ಮಜ್ಞಾನ ಭಕುತಿ ಕರುಣಿಸೋ ॥ 2 ॥

ಅರ್ಥ :- ಸಂಜ್ಞಾರಮಣ = ಸಂಜ್ಞಾದೇವಿಯ ಪತಿಯಾದ ಹೇ ಸೂರ್ಯದೇವ ! ಸರ್ವಜ್ಞ ನೀನೆಂದು = ನೀನು ಸರ್ವಜ್ಞನೆಂಬ ಕಾರಣದಿಂದ , ನಿನಗೆ ವಿಜ್ಞಾಪಿಸುವೆನು = ನಿನ್ನಲ್ಲಿ ಬಿನ್ನೈಸಿಕೊಳ್ಳುತ್ತೇನೆ ; ಸರ್ವತ್ರ = ಎಲ್ಲೆಲ್ಲಿಯೂ (ಪ್ರತಿ ಜನ್ಮದಲ್ಲಿಯೂ) ಎನಗೆ = ನನಗೆ , ಬ್ರಹ್ಮಜ್ಞಾನ = ಸಕಲ ಕಲ್ಯಾಣಗುಣ ಪರಿಪೂರ್ಣನಾದ ನಾರಾಯಣನ ಮಹಿಮೆಗಳ ಜ್ಞಾನವನ್ನೂ , ಭಕುತಿ(ಯನು) = (ಆದುದರಿಂದಲೇ ದೊರೆಯುವ) ದೃಢಭಕ್ತಿಯನ್ನೂ , ಕರುಣಿಸೋ = ಕೃಪೆಮಾಡಿ ಕೊಡು.

ವಿಶೇಷಾಂಶ :- (1) ಜ್ಞಾನ , ಭಕ್ತಿಗಳ ವೃದ್ಧಿಯು ಸೂರ್ಯಾಂತರ್ಗತನಾದ ಗಾಯತ್ರೀನಾಮಕ ಶ್ರೀಹರಿಯ ಸೇವೆಯಿಂದಲೇ ಲಭ್ಯ.

(2) ಸೂರ್ಯನು ಭೂಮಿ , ಅಂತರಿಕ್ಷ ಮತ್ತು ಸ್ವರ್ಗಗಳೆಂಬ ಮೂರು ಲೋಕಗಳನ್ನು ಪ್ರಕಾಶಗೊಳಿಸುವನು - ಈ ಲೋಕದಲ್ಲಿನ ಪ್ರಜೆಗಳನ್ನು ಉಜ್ಜೀವಿಸುವನು . ಆಧ್ಯಾತ್ಮದಲ್ಲಿ (ದೇಹದಲ್ಲಿ) ಚಕ್ಷುರಿಂದ್ರಿಯಕ್ಕೆ ಅಭಿಮಾನಿಯು . ಸಕಲರ ಕರ್ಮಸಾಕ್ಷಿಗಳೆನಿಸಿದ ದೇವತೆಗಳಲ್ಲೊಬ್ಬನು. ಜಗಚ್ಚಕ್ಷುವೆಂಬ ಪ್ರಸಿದ್ಧನಾಮವುಳ್ಳವನು. ಈ ವಿವಕ್ಷೆಯಿಂದ ಸರ್ವಜ್ಞನು. ಈತನ ಅಂತರ್ಯಾಮಿ ನಾರಾಯಣನೇ ನಿರುಪಚರಿತ ಸರ್ವಜ್ಞನು. 

ಸೂರಿಗಮ್ಯನೆ ವಾಕ್ ಶರೀರಬುದ್ಧಿಜವಾದ -
ಪಾರ ದೋಷಗಳ ದೋಷಗಳ ಎಣಿಸದೆ । ಎಣಿಸದೆ ಭಗವಂತ -
ನಾರಾಧನೆಯನಿತ್ತು ಕರುಣಿಸೋ ॥ 3 ॥

ಅರ್ಥ : ಸೂರಿಗಮ್ಯನೆ = ಜ್ಞಾನಿಗಳಿಂದ ಪ್ರಾಪ್ಯನಾದ ಹೇ ಸೂರ್ಯದೇವ ! ವಾಕ್ ಶರೀರಬುದ್ಧಿಜವಾದ = ತ್ರಿಕರಣಗಳಿಂದ ಉದ್ಭವಿಸುವ (ವಚನ , ದೇಹ , ಮನಸ್ಸುಗಳಿಂದಾಗುವ) ಅಪಾರ ದೋಷಗಳ = (ನನ್ನ) ಮಿತಿ ಇಲ್ಲದ ತಪ್ಪುಗಳನ್ನು , ಎಣಿಸದೆ = ಗಮನಿಸದೆ , ಭಗವಂತನ = (ನಿನ್ನ ಅಂತರ್ಯಾಮಿಯಾದ) ನಾರಾಯಣನ , ಆರಾಧನೆಯನು = ಧ್ಯಾನಾದಿರೂಪ ಸೇವೆಯನ್ನು , ಇತ್ತು = ಕೊಟ್ಟು , ಕರುಣಿಸೋ = ಅನುಗ್ರಹಿಸು.

ವಿಶೇಷಾಂಶ : (1) ' ಸೂರಿಗಮ್ಯ ' ಎಂಬುದು ' ಸೂರ್ಯ ' ಶಬ್ದದ ನಿರ್ವಚನವು . ಸೂರಿಗಳೆಂದರೆ ಜ್ಞಾನಿಗಳು . ಸೂರ್ಯನಲ್ಲಿರುವ ಸೂರ್ಯ ಶಬ್ದದಿಂದ ಮುಖ್ಯವಾಚ್ಯನಾದ ನಾರಾಯಣನೇ ಜ್ಞಾನಿಗಳಿಂದ ಪ್ರಾಪ್ಯನು . ಆತನ ಪ್ರಾಪ್ತಿಗೆ ಈ ಸೂರ್ಯನ ಅನುಗ್ರಹ ನಮಗೆ ಅವಶ್ಯಕ.

(2) ದೇಹವನ್ನು ಬಿಟ್ಟು ಹೊರಟ ಜೀವರು ಲೋಕಾಂತರಕ್ಕೆ ಹೋಗುವ ಮಾರ್ಗಗಳನ್ನು ಚಂದ್ರ ಮತ್ತು ಸೂರ್ಯಗತಿಗಳೆಂದು ಶಾಸ್ತ್ರಗಳು ನಿರೂಪಿಸುತ್ತವೆ. ಸೂರ್ಯ ಗತಿಯು , ಜ್ಞಾನಿಗಳು ಚರಮದೇಹ (ಕಟ್ಟಕಡೆಯ ದೇಹದಿಂದ) ಉತ್ಕ್ರಮಣ ಹೊಂದಿ ತಮ್ಮ ಸ್ಥಾನವನ್ನು ಸೇರುವ ಮಾರ್ಗವಾಗಿದೆ. ಆ ಮಾರ್ಗದಲ್ಲಿ ಹತ್ತುವ (ದೊರೆಯುವ) ಲೋಕಗಳಲ್ಲಿ ಸೂರ್ಯಲೋಕವು ಮುಖ್ಯವಾದುದು.

(3) ತ್ರಿಕರಣಗಳಿಂದ ಸಂಭವಿಸುವ ಸರ್ವರ ಸರ್ವಕರ್ಮಗಳ ಸಾಕ್ಷಿ (ಪ್ರತ್ಯಕ್ಷ ನೋಡುವಾತನು) ಸೂರ್ಯದೇವ . ಶ್ರೀಹರಿಯ ಅನುಗ್ರಹದಿಂದ ಆ ಸರ್ವಕರ್ಮಗಳ ಗುಣದೋಷಗಳನ್ನು ತಿಳಿಯಬಲ್ಲನು. ಸೂರ್ಯನು ಕರ್ಮಸಾಕ್ಷಿಯೆಂಬ ಸಂತತ ಜ್ಞಾನದಿಂದ , ದುಷ್ಕರ್ಮಗಳು ಸಂಘಟಿಸುವ ಸಂಭವವು ಕ್ರಮೇಣ ಕಳೆದು ಹೋಗುತ್ತದೆ. ದೋಷಗಳನ್ನು ' ಎಣಿಸದೆ ' ಎಂಬ ಪ್ರಾರ್ಥನೆಯು ಈ ಸಲುವಾಗಿಯೇ.

ಶ್ರೀ ಚಂದ್ರದೇವನ ಸ್ತುತಿ

ರೋಹಿಣೀರಮಣ ಮದ್ದೇಹಗೇಹಾದಿಗಳ
ಮೋಹ ಪರಿಹರಿಸಿ ಮನದಲ್ಲಿ । ಮನದಲ್ಲೆನಗೆ ಗರುಡ -
ವಾಹನನ ಸ್ಮರಣೆಯನು ಕರುಣಿಸೋ ॥ 1 ॥

ಅರ್ಥ : ರೋಹಿಣೀರಮಣ = ರೋಹಿಣೀದೇವಿಯ ಪತಿಯಾದ ಹೇ ಚಂದ್ರದೇವ ! ಮದ್ದೇಹಗೇಹಾದಿಗಳ = ತನ್ನ ದೇಹ , ಮನೆ ಮೊದಲಾದುವುಗಳಲ್ಲಿರುವ , ಮೋಹ = ಮೋಹವನ್ನು (ನನ್ನವು , ನನ್ನ ಅಧೀನಗಳೆಂಬ ಅಜ್ಞಾನವನ್ನು) ಪರಿಹರಿಸಿ = ಹೋಗಲಾಡಿಸಿ , ಮನದಲ್ಲಿ = ಮನಸ್ಸಿನಲ್ಲಿ, ಗರುಡವಾಹನನ = ಗರುಡನೇ ವಾಹನವಾಗುಳ್ಳ ಶ್ರೀಹರಿಯ , ಸ್ಮರಣೆಯನು = ನೆನಹನ್ನು , ಕರುಣಿಸೋ = ದಯಪಾಲಿಸು.

ವಿಶೇಷಾಂಶ : (1) ವಿರಾಟ್ ಪುರುಷನ ಮನಸ್ಸಿನಿಂದ ಚಂದ್ರನು ಜನಿಸಿದವನು (' ಚಂದ್ರಮಾ ಮನಸೋ ಜಾತಃ '). ಶೇಷ , ಸುಪರ್ಣ , ಶಿವಾದಿಗಳೊಂದಿಗೆ ಮನೋಭಿಮಾನಿಯೂ ಆಗಿರುವನು. ಯಮಾದಿಗಳೊಂದಿಗೆ ಚಂದ್ರನು ಶ್ರೋತ್ರೇಂದ್ರಿಯಕ್ಕೂ ಆಭಿಮಾನಿಯು. ಮಮತ್ವರೂಪದ ಮೋಹವು ಮನೋಗತವಾದುದು. ಆ ಮೋಹದ ಪರಿಹಾರಕ್ಕಾಗಿ ಚಂದ್ರನಲ್ಲಿ ಈ ಪ್ರಾರ್ಥನೆ. 

(2) ' ಮನಸಸ್ತ್ವನಿರುದ್ಧಶ್ಛ ಚಂದ್ರಶ್ಚಾನೇ ಯಥೋದಿತಮ್ ' (ಭಾಗವತ ತೃತೀಯ ತಾತ್ಪರ್ಯ) ಎಂಬುದು , ಚಂದ್ರನು ಮನೋಭಿಮಾನಿ ಎಂಬಲ್ಲಿ ಪ್ರಮಾಣವು.

(3) ವೈದಿಕ (ವೇದ - ತತ್ಸಮ್ಮತ) ಶ್ರವಣದಲ್ಲಿ ಮನಸ್ಸನ್ನು ಪ್ರೇರಿಸುವವನು ಗರುಡನು. '....ಶೇಷೋऽಸೌ ಪಾಂಚರಾತ್ರಕಮ್ । ವೈದಿಕಂ ಗರುಡಶ್ಚೇಂದ್ರೋ ಯಜ್ಞಾದಿವಿಷಯಂ ಮನಃ ' - (ಐ.ಭಾ) . ವೇದೋಕ್ತ ಭಗವನ್ಮಹಿಮೆಗಳ ಶ್ರವಣದಿಂದ ಮೋಹದ ಪರಿಹಾರ . ಇದಕ್ಕಾಗಿಯೇ ಗರುಡವಾಹನನ ಸ್ಮರಣೆಯನ್ನು ಕರುಣಿಸೆಂಬ ಪ್ರಾರ್ಥನೆ ಮಾಡಲಾಗಿದೆ.

ಕ್ಷೀರಾಬ್ಧಿಜಾತ ಮಾರಾರಿಮಸ್ತಕಸದನ
ವಾರಿಜೋದ್ಭವನ ಆವೇಶ । ಆವೇಶಪಾತ್ರ ಪರಿ -
ಹಾರಗೈಸೆನ್ನ ಭವತಾಪ ॥ 2 ॥

ಅರ್ಥ :- ಕ್ಷೀರಾಬ್ಧಿಜಾತ = ಕ್ಷೀರಸಮುದ್ರದಲ್ಲಿ (ದೇವದೈತ್ಯರು ಅಮೃತಕ್ಕಾಗಿ ಮಥನ ಮಾಡಿದ ಕಾಲದಲ್ಲಿ) ಉತ್ಪನ್ನವಾದ , ಮಾರಾರಿಮಸ್ತಕಸದನ = ಕಾಮವೈರಿಯಾದ ಶಿವನ ಶಿರಸ್ಸಿನಲ್ಲಿ ವಾಸಿಸುವ , ವಾರಿಜೋದ್ಭವನ = ಕಮಲಸಂಭವನಾದ ಚತುರ್ಮುಖ ಬ್ರಹ್ಮನ , ಆವೇಶಪಾತ್ರ = ಆವೇಶಕ್ಕೆ ಯೋಗ್ಯನೆನಿಸಿದ ಹೇ ಚಂದ್ರದೇವ! ಎನ್ನ = ನನ್ನ ಭವತಾಪ = ಸಂಸಾರದುಃಖವನ್ನು , ಪರಿಹಾರಗೈಸು = ಪರಿಹಾರಗೊಳಿಸು.

ವಿಶೇಷಾಂಶ : (1) ತಾಪವನ್ನು ಪರಿಹರಿಸಿ ಆಹ್ಲಾದವನ್ನುಂಟು ಮಾಡುವುದು ಚಂದ್ರನ ಸ್ವಾಭಾವಿಕ ಗುಣ.

(2) ಅತ್ರಿ ಋಷಿಗಳ ಪತ್ನಿ ಅನಸೂಯಾದೇವಿಯಲ್ಲಿ ಬ್ರಹ್ಮ , ವಿಷ್ಣು , ರುದ್ರರು ಪುತ್ರರಾಗಿ ಅವತರಿಸಿದಾಗ , ವಿಷ್ಣುವು ' ದತ್ತ ' ನಾಗಿಯೂ , ರುದ್ರನು ' ದೂರ್ವಾಸ ' ನಾಗಿಯೂ ಅವತರಿಸಿದರು. ಭಗವದಾಜ್ಞೆಯಂತೆ ಬ್ರಹ್ಮನಿಗೆ ಅವತಾರವೇ ಇಲ್ಲದಿರಲು , ಚಂದ್ರನಲ್ಲಿ ಆವಿಷ್ಟನಾಗಿ ಅವತರಿಸಿದನು. ಬ್ರಹ್ಮನು ತನ್ನ ಆವೇಶಕ್ಕೆ ಯೋಗ್ಯನೆಂದು ಚಂದ್ರನನ್ನು ಆರಿಸಿಕೊಂಡನು . ' ದತ್ತಂ ದೂರ್ವಾಸಸಂ ಸೋಮಂ ಆತ್ಮೇಶಬ್ರಹ್ಮ ಸಂಭವಾನ್ ' ಎಂದು ಭಾಗವತದಲ್ಲಿ ಈ ಮಹಿಮೆಯು ಉಕ್ತವಾಗಿದೆ.

ದತ್ತದೂರ್ವಾಸಾನುಜಾತ್ರಿಸಂಭವನೆ ತ್ವ -
ದ್ಭೃತ್ಯ ನಾನಯ್ಯ ಎಂದೆಂದು । ಎಂದೆಂದು ಪ್ರಾರ್ಥಿಸುವೆ
ಹೃತ್ತಿಮಿರ ಕಳೆದೆನ್ನ ಸಂತೈಸೋ ॥ 3 ॥

ಅರ್ಥ : ದತ್ತದೂರ್ವಾಸಾನುಜ = ದತ್ತದೂರ್ವಾಸರ ತಮ್ಮನಾದ , ಅತ್ರಿ ಸಂಭವನೆ = ಅತ್ರಿಪುತ್ರನಾದ ಹೇ ಸೋಮದೇವ ! ಎಂದೆಂದೂ = ಎಲ್ಲ ಕಾಲದಲ್ಲಿ , ತ್ವದ್ಭೃತ್ಯ ನಾನಯ್ಯ = ನಾನು ನಿನ್ನ ಭೃತ್ಯನು ; ಎಂದೆಂದು ಪ್ರಾರ್ಥಿಸುವೆ = ನಿತ್ಯವೂ ಪ್ರಾರ್ಥಿಸುತ್ತೇನೆ . ಹೃತ್ತಿಮಿರ = ಮನಸ್ಸಿನ ಕತ್ತಲೆಯನ್ನು (ಮೋಹವನ್ನು) , ಕಳೆದು = ನೀಗಿ , ಎನ್ನ = ನನ್ನನ್ನು , ಸಂತೈಸೋ = ರಕ್ಷಿಸು (ಮನಃಶಾಂತಿಯನ್ನು ಕರುಣಿಸು).

ಶ್ರೀ ಅಂಗಾರಕ ಸ್ತುತಿ

ಕೋಲಭೂನಂದನ ಪ್ರವಾಳಸಮವರ್ಣ ಕರ -
ವಾಳ ಸಮಖೇಟ ನಿಶ್ಶಂಕ । ನಿಶ್ಶಂಕಪಾಣಿ ಗುರು -
ಮೌಳಿ ನೀ ಎನ್ನ ಸಂತೈಸೊ ॥ 1 ॥

ಅರ್ಥ :- ಕೋಲಭೂನಂದನ = ವರಾಹರೂಪಿಯಾದ ಶ್ರೀಹರಿ ಮತ್ತು ಭೂದೇವಿಯರ ಪುತ್ರನಾದ , ಹೇ ಮಂಗಳ ! ಪ್ರವಾಳಸಮವರ್ಣ = ಹವಳ ಸದೃಶವಾದ ಶುಭ್ರ ರಕ್ತವರ್ಣದಿಂದ ಶೋಭಿಸುವವನೂ , ಕರವಾಳ ನಿಶ್ಶಂಕಪಾಣಿ = ಖಡ್ಗಪಾಣಿಯೂ ಅಭಯಹಸ್ತನೂ , ಸಮಖೇಟ = ರಾಹುವಿಗೆ ಸಮನೂ , ನಿಶ್ಶಂಕ = ಭಯದೂರನೂ ಆದ , ಗುರುಮೌಳಿ = ಬೃಹಸ್ಪತಿಯೇ ಪ್ರಧಾನ(ಮೌಳಿ)ನಾಗಿ ಉಳ್ಳ , ನೀ = ನೀನು , ಎನ್ನ = ನನ್ನನ್ನು , ಸಂತೈಸೊ = ರಕ್ಷಿಸು.

ವಿಶೇಷಾಂಶ : 
(1) ನವಗ್ರಹ ದೇವತೆಗಳು : ಸೂರ್ಯ , ಚಂದ್ರ , ಮಂಗಳ , ಬುಧ , ಗುರು , ಶುಕ್ರ , ಶನಿ , ರಾಹು , ಕೇತು.

(2) ಇವರಲ್ಲಿ ತಾರತಮ್ಯದಲ್ಲಿ ಗುರುವು ಶ್ರೇಷ್ಠನು - ಶಚೀ , ರತಿ , ಅನಿರುದ್ಧ ಇವರ ಸಮಕಕ್ಷ್ಯದಲ್ಲಿದ್ದಾನೆ . ಸೃರ್ಯ ಚಂದ್ರ ಇವರಿಬ್ಬರೂ ಯಮ , ಶತರೂಪಾ ಇವರೊಂದಿಗೆ ಕೆಳಗಿನ ಕಕ್ಷ್ಯದಲ್ಲಿದ್ದಾರೆ . ಬುಧ ಮತ್ತು ಶನಿ ಎಲ್ಲರಿಗಿಂತ ಕೆಳಗಿದ್ದಾರೆ. ಇವರಿಬ್ಬರಲ್ಲಿ ಶನಿಯು ಬುಧನಿಗಿಂತ ಅವರನು. ಉಳಿದ ಮಂಗಳ , ಶುಕ್ರ , ರಾಹು , ಕೇತು ಈ ನಾಲ್ವರು ಕರ್ಮಜದೇವತೆಗಳ ಗುಂಪಿಗೆ ಸೇರಿದವರು.

(3) 'ಖೇಟ' ನೆಂದು ರಾಹುವಿನ ಮತ್ತೊಂದು ನಾಮ. ಕುಜನೆಂಬುದೂ ಅಂಗಾರಕನ ನಾಮವೇ.

ಮಂಗಳಾಹ್ವಯನೆ ಸರ್ವೇಙ್ಗಿತಜ್ಞನೆ ಅಂತ -
ರಂಗದಲಿ ಹರಿಯ ನೆನೆವಂತೆ । ನೆನೆವಂತೆ ಕರುಣಿಸೊ
ಅಂಗಾರವರ್ಣ ಅನುದಿನ ॥ 2 ॥

ಅರ್ಥ : ಸರ್ವೇಙ್ಗಿತಜ್ಞನೆ = ಸರ್ವ ಜೀವರ ಭಾವಗಳನ್ನರಿಯುವ , ಮಂಗಳಾಹ್ವಯನೆ = ' ಮಂಗಳ ' ಎಂಬ ನಾಮವುಳ್ಳ , ಅಂಗಾರವರ್ಣ = ಕೆಂಡದ ಕಾಂತಿಯಂತೆ ದೇಹಕಾಂತಿಯುಳ್ಳ ಹೇ ಅಂಗಾರಕ ! ಅಂತರಂಗದಲಿ = ಮನಸ್ಸಿನಲ್ಲಿ (ಶಾಂತಮನಸ್ಕನಾಗಿ) , ಹರಿಯ = ಶ್ರೀಹರಿಯನ್ನು , ನೆನೆವಂತೆ = ಸ್ಮರಿಸುವಂತೆ (ಧ್ಯಾನಿಸಲು ಸಾಧ್ಯವಾಗುವಂತೆ) , ಅನುದಿನ = ನಿತ್ಯವೂ , ಕರುಣಿಸೊ = ಕೃಪೆಮಾಡು.

ವಿಶೇಷಾಂಶ : (1) ಗ್ರಹಗತಿಗಳು ಮಾನವರ ಆಗುಹೋಗುಗಳನ್ನು (ಆಯುರಾರೋಗ್ಯ ಐಶ್ವರ್ಯಾದಿಗಳನ್ನು) ನಿಯಂತ್ರಿಸುವುವು. ಈ ಸಾಮರ್ಥ್ಯವು (ಅಧಿಕಾರವು) ಗ್ರಹಗಳಿಗೆ , ಶ್ರೀಹರಿಯ ವಿಶೇಷಾನುಗ್ರಹದಿಂದ ಪ್ರಾಪ್ತವಾದುದು. ಸಕಲ ಗ್ರಹಬಲದಾಯಕನು ಶ್ರೀನಿವಾಸನೇ . ' ಸಕಲ ಗ್ರಹಬಲ ನೀನೆ ಸರಸಿಜಾಕ್ಷ ' ಎಂದಿದ್ದಾರೆ ಶ್ರೀಪುರಂದರದಾಸರು . ಗ್ರಹಗತಿಗಳಿಂದ ಫಲಾಫಲಗಳನ್ನು ತಿಳಿಯಲು , ಅಂಗಾರಕನ ಸ್ಥಾನವನ್ನು ವಿಶೇಷವಾಗಿ ಗಮನಿಸುವುದು ಆವಶ್ಯಕವೆಂದು ಜ್ಯೋತಿಷ್ಯಶಾಸ್ತ್ರವು ಹೇಳುತ್ತದೆ.

(3) ಸಂತತ ಹರಿಸ್ಮರಣೆ ಮತ್ತು ಧ್ಯಾನಸಿದ್ಧಿಗೆ ಮಂಗಳನು ಸುಮುಖನಾಗಿರಬೇಕಾದುದು ಆವಶ್ಯಕವೆಂದೂ ಹೇಳಲಾಗುತ್ತದೆ.

ಭೌಮರಾಜನೆ ತ್ವನ್ಮಹಾಮಹಿಮೆ ತುತಿಸಲ್ಕೆ
ಪಾಮರನಿಗಳವೇ ಎಂದೆಂದು । ಎಂದೆಂದು ಸಜ್ಜನರ 
ಕಾಮಿತಾರ್ಥವನು ಕರುಣಿಸೊ ॥ 3 ॥

ಅರ್ಥ : ಭೌಮರಾಜನೆ = ಹೇ ಭೂಪುತ್ರ ಶ್ರೇಷ್ಠ ! ತ್ವನ್ಮಹಾಮಹಿಮೆ = ನಿನ್ನ ಮಹಾಮಹಿಮೆಯನ್ನು , ತುತಿಸಲ್ಕೆ = ಸ್ತುತಿಸಲು , ಪಾಮರನಿಗೆ = ಅಲ್ಪನಾದ (ಅಜ್ಞಾನಿ ಆದ) ನನಗೆ , ಅಳವೇ = ಶಕ್ಯವೇ ? (ಅಲ್ಲ) , ಎಂದೆಂದು = ಸರ್ವದಾ , ಸಜ್ಜನರ = ಮುಕ್ತಿಯೋಗ್ಯಜೀವರ , ಕಾಮಿತಾರ್ಥವನು = ಅಭೀಷ್ಟವನ್ನು , ಕರುಣಿಸೊ = ದಯ ಪಾಲಿಸು.

ವಿಶೇಷಾಂಶ : ಹರಿಯಲ್ಲಿ ತಮ್ಮ ಭಕ್ತಿಜ್ಞಾನರೂಪಸಾಧನೆಗೆ ಅಡ್ಡಿ ಬರುವ ವಿಪತ್ತುಗಳನ್ನು ಪರಿಹರಿಸಿಕೊಳ್ಳಬೇಕೆಂಬುದೇ ಸಜ್ಜನರ ಮುಖ್ಯ ಕಾಮಿತವು. ಅದನ್ನೇ ಎಲ್ಲ ಸಜ್ಜನರ ಪರವಾಗಿ , ಶ್ರೀದಾಸಾರ್ಯರು ಪ್ರಾರ್ಥಿಸುತ್ತಾರೆ.

ಶ್ರೀ ಬುಧ ಸ್ತುತಿ

ಬುಧನೆ ನೀ ಸುಗುಣವಾರಿಧಿ ಎಂದು ಬಿನ್ನೈಪೆ
ಕ್ಷುಧೆಯ ಪರಿಹರಿಸಿ ಸುಜ್ಞಾನ । ಸುಜ್ಞಾನ ಸದ್ಭಕ್ತಿ -
ಸುಧೆಯ ಪಾನವನು ಕರುಣಿಸೊ ॥ 1 ॥

ಅರ್ಥ : ಬುಧನೆ = ಹೇ ಬುಧದೇವ ! ನೀ = ನೀನು , ಸುಗುಣವಾರಿಧಿ ಎಂದು = ಸದ್ಗುಣನಿಧಿಯೆಂದು , ಬಿನ್ನೈಪೆ = ವಿಜ್ಞಾಪಿಸಿಕೊಳ್ಳುವೆನು ; ಕ್ಷುಧೆಯ = ಹಸಿವೆಯನ್ನು , ಪರಿಹರಿಸಿ = ಕಳೆದು , ಸುಜ್ಞಾನ ಸದ್ಭಕ್ತಿ ಸುಧೆಯ ಪಾನವನು = ಶುದ್ಧ ಜ್ಞಾನಭಕ್ತಿಗಳೆಂಬ ಅಮೃತಪಾನವನ್ನು , ಕರುಣಿಸೊ = ಅನುಗ್ರಹಿಸು.

ವಿಶೇಷಾಂಶ : (1) ವಿಷಯಾನುಭವತೃಷೆಯು ಜ್ಞಾನಭಕ್ತಿಗಳಿಂದಲೇ ಆತ್ಯಂತಿಕವಾಗಿ ಪರಿಹಾರವಾಗುವುದು - ಅನ್ಯೋಪಾಯಗಳಿಂದಲ್ಲ . ಹಾಗೂ , ಜ್ಞಾನಭಕ್ತಿಗಳನ್ನು ಪಡೆಯಬೇಕೆಂಬುದೇ ಸಕಲ ಮುಕ್ತಿಯೋಗ್ಯರಾದ ಜೀವರ ಅಂತರಂಗದ ಆಶೆ(ಹಸಿವೆಯು). ಅವುಗಳ ಪ್ರಾಪ್ತಿಯಿಂದಲೇ ಆ ಹಸಿವೆಯು ಅಡಗಬಲ್ಲದು. ಸ್ವೋತ್ತಮರ ಅನುಗ್ರಹವಿಲ್ಲದೆ ಜ್ಞಾನಭಕ್ತಿಗಳು ಲಭ್ಯವಿಲ್ಲ.

(2) ಬುಧನು ಸಸ್ಯಾಧಿಪನಾದರೆ ಧಾನ್ಯಸಮೃದ್ಧಿರೂಪದ ಫಲವನ್ನು ಜ್ಯೋತಿಷ್ಯವೂ ಹೇಳುತ್ತದೆ. ಸಾಧನೆಗೆ ಬಾಹ್ಯ ಹಸಿವೆಯ ಪರಿಹಾರವೂ ಅವಶ್ಯಕ.

ಚಂದ್ರನಂದನ ಸತತ ವಂದಿಸುವೆ ಮನ್ಮನದ
ಸಂದೇಹ ಬಿಡಿಸಯ್ಯ ಮಮ ದೈವ । ಮಮ ದೈವ ಸರ್ವ ಗೋ -
ವಿಂದನಹುದೆಂದು ತಿಳಿಸಯ್ಯ ॥ 2 ॥

ಅರ್ಥ :- ಚಂದ್ರನಂದನ = ಚಂದ್ರಸುತನಾದ ಹೇ ಬುಧದೇವ! ಸತತ = ನಿರಂತರವೂ , ವಂದಿಸುವೆ = ನಮಸ್ಕರಿಸುವೆನು , ಮನ್ಮನದ = ನನ್ನ ಮನಸ್ಸಿನ , ಸಂದೇಹ = ಸಂಶಯಗಳನ್ನು , ಬಿಡಿಸಯ್ಯ = ತೊಲಗಿಸು , (ಮತ್ತು) ಗೋವಿಂದನು = ವೇದಪ್ರತಿಪಾದ್ಯನಾದ ಶ್ರೀಹರಿಯು , ಸರ್ವ = ದೇಶ , ಕಾಲ , ಗುಣಗಳಿಂದ ವ್ಯಾಪ್ತನೂ , ಮಮ ದೈವ = ನನಗೆ ಗತಿದಾಯಕ ಉತ್ತಮ ದೇವತೆಯೂ , ಅಹುದೆಂದು = ಆಗಿರುವನೆಂಬ ನಿಶ್ಚಯವನ್ನು , ತಿಳಿಸಯ್ಯ = ತಿಳಿಸಿಕೊಡು.

ವಿಶೇಷಾಂಶ : (1) ' ಸರ್ವಂ ಸಮಾಪ್ನೋಷಿ ತತೋऽಸಿ ಸರ್ವಃ ' - (ಗೀತಾ) . ಎಲ್ಲವನ್ನು ವ್ಯಾಪಿಸಿರುವುದರಿಂದ ಶ್ರೀಹರಿಯು ' ಸರ್ವ ' ನು , ಗುಣಪೂರ್ಣನಾದ್ದರಿಂದಲೂ ಸರ್ವನು.

(2) ರಾಜನ ಅಧಿಕಾರಗಳಲ್ಲಿ , ರಾಜಪುತ್ರನಿಗೆ ಸಹ , ಪುತ್ರನೆಂಬ ಕಾರಣದಿಂದ ಕೆಲಮಟ್ಟಿಗೆ ಪ್ರವೇಶಿಸಲು ಅವಕಾಶವಿರುವಂತೆ , ಚಂದ್ರನ ಅಧಿಕಾರಗಳಲ್ಲಿ ಬುಧನಿಗೂ ಪ್ರವೇಶವಿರುವುದರಿಂದ ಜ್ಞಾನಾದಿಗಳ ದಾನಕ್ಕಾಗಿ ಪ್ರಾರ್ಥನೆಯು ಯುಕ್ತವಾಗುತ್ತದೆ. ಅಲ್ಲದೆ ' ಸ್ವೋತ್ತಮಾ ಗುರವಃ ಪ್ರೋಕ್ತಾಃ ' ಎಂಬ ಪ್ರಮಾಣದಿಂದ ಸ್ವಾವರರು ಪ್ರಾರ್ಥಿಸಿದರೆ , ಉತ್ತಮರ ಅಂತರ್ಗತ ಪರಮಾತ್ಮನು , ಭಕ್ತ್ಯನುಸಾರವಾಗಿ ಅಭೀಷ್ಟಗಳನ್ನು ಕರುಣಿಸುವನು.

ತಾರಾತ್ಮಜನೆ ಮಚ್ಛರೀರದೊಳು ನೆಲೆಗೊಂಡು
ತೋರೊ ಸಜ್ಜನರ ಸನ್ಮಾರ್ಗ । ಸನ್ಮಾರ್ಗ ತೋರಿ ಉ -
ದ್ಧಾರಗೈಸೆನ್ನ ಭವದಿಂದ ॥ 3 ॥

ಅರ್ಥ : ತಾರಾತ್ಮಜನೆ = ತಾರೆಯ ಮಗನಾದ ಹೇ ಬುಧದೇವ ! ಮಚ್ಚರೀರದೊಳು = ನನ್ನ ಶರೀರದಲ್ಲಿ , ನೆಲೆಗೊಂಡು = ನಿಂತು , ಸಜ್ಜನರ = ಸುಜೀವಿಗಳ , ಸನ್ಮಾರ್ಗ = ಉತ್ತಮ ಮಾರ್ಗವನ್ನು , ತೋರೊ = ತೋರಿಸು (ತಿಳಿಸಿಕೊಡು) . ಸನ್ಮಾರ್ಗ ತೋರಿ = ಹಾಗೆ ಮಾರ್ಗದರ್ಶನ ಮಾಡಿ , ಎನ್ನ = ನನ್ನನ್ನು , ಭವದಿಂದ = ಸಂಸಾರದಿಂದ , ಉದ್ಧಾರಗೈಸು = ಉದ್ಧಾರಮಾಡು.

ವಿಶೇಷಾಂಶ : ತಾರಾದೇವಿಯು ಬೃಹಸ್ಪತ್ಯಾಚಾರ್ಯರ ಪತ್ನಿ . ಚಂದ್ರನು ಸ್ವೋತ್ತಮರಾದ ಬೃಹಸ್ಪತಿಗಳ ಪತ್ನಿಯನ್ನು ಸ್ವೀಕರಿಸಿದನು. ಬ್ರಹ್ಮದೇವನು ಈ ನಿಮಿತ್ತಕವಾದ ವಿರಸವನ್ನು ಪರಿಹರಿಸಿ , ತಾರೆಯನ್ನು ಬೃಹಸ್ಪತಿಗಳಿಗೆ ಒಪ್ಪಿಸಿದನು. ತಾರೆಯು ಸತ್ಯವನ್ನು ನುಡಿದು ಬ್ರಹ್ಮನಿಂದ ಅನುಗ್ರಹಿಸಲ್ಪಟ್ಟು ಶುದ್ಧಳಾಗಿ ಪ್ರಾತಃಸ್ಮರಣೀಯಳಾದಳು. ಬುಧನಿಂದ ಲೋಕದಲ್ಲಿ ಚಂದ್ರವಂಶವು ಬೆಳೆಯಿತು. ಅದರಲ್ಲಿ ಶ್ರೀಕೃಷ್ಣನೇ ಅವತರಿಸಿದನು.

ಶ್ರೀ ಗುರು ಸ್ತುತಿ

ನುತಿಸಿ ಬೇಡುವೆ ಬೃಹಸ್ಪತಿ ಗುರುವೆ ಎನ್ನ ದು -
ರ್ಮತಿಯ ಪರಿಹರಿಸಿ ಸುಜ್ಞಾನ । ಸುಜ್ಞಾನವಿತ್ತು ಶ್ರೀ -
ಪತಿಯ ತೋರೆನ್ನ ಮನದಲ್ಲಿ ॥ 1 ॥

ಅರ್ಥ : ಬೃಹಸ್ಪತಿ ಗುರುವೆ = ಹೇ ದೇವಗುರುಗಳಾದ ಬೃಹಸ್ಪತ್ಯಾಚಾರ್ಯರೇ ! ನುತಿಸಿ = ಸ್ತುತಿಸಿ , ಬೇಡುವೆ = ಯಾಚಿಸುತ್ತೇನೆ , ಎನ್ನ = ನನ್ನ , ದುರ್ಮತಿಯ = ದುಷ್ಟಬುದ್ಧಿಯನ್ನು , ಪರಿಹರಿಸಿ = ನೀಗಿ , ಸುಜ್ಞಾನವಿತ್ತು = ಶುದ್ಧವಾದ ಜ್ಞಾನವನ್ನಿತ್ತು , ಎನ್ನ = ನನ್ನ , ಮನದಲ್ಲಿ = ಮನಸ್ಸಿನಲ್ಲಿ , ಶ್ರೀಪತಿಯ = ಲಕ್ಷ್ಮೀಪತಿಯಾದ ನಾರಾಯಣನನ್ನು , ತೋರು = ತೋರಿಸು.

ವಿಶೇಷಾಂಶ : ಬೃಹಸ್ಪತಿಯು ತಾರತಮ್ಯದಲ್ಲಿ ಶಚೀದೇವಿಯ ಸಮಕಕ್ಷ್ಯದಲ್ಲಿರುವನು. ಅವಾಂತರ ಮನೋಭಿಮಾನಿಯೂ ಆಗಿರುವನು . ಧರ್ಮಕಾರ್ಯಗಳಲ್ಲಿ ಆಸಕ್ತಿಯುಂಟಾಗುವುದಕ್ಕೆ ಈತನ ದಯೆಯನ್ನು ಬೇಡಬೇಕಷ್ಟೆ!

ಸುರರಾಜಗುರುವೆ ತ್ವಚ್ಚಣಾರವಿಂದಗಳಿ -
ಗೆರಗಿ ಬಿನ್ನೈಪೆ ಇಳೆಯೊಳು । ಇಳೆಯೊಳುಳ್ಳಖಿಳ ಬ್ರಾಹ್ಮ -
ಣರ ಸಂತೈಸೋ ದಯದಿಂದ ॥ 2 ॥

ಅರ್ಥ : ಸುರರಾಜಗುರುವೆ = ದೇವೇಂದ್ರನ ಗುರುಗಳೇ ! ತ್ವಚ್ಚರಣಾರವಿಂದಗಳಿಗೆ = ನಿಮ್ಮ ಪಾದಕಮಲಗಳಿಗೆ , ಎರಗಿ = ನಮಸ್ಕರಿಸಿ , ಬಿನ್ನೈಪೆ = ವಿಜ್ಞಾಪಿಸಿಕೊಳ್ಳುತ್ತೇನೆ; ಇಳೆಯೊಳುಳ್ಳ = ಭೂಮಿಯಲ್ಲಿರುವ , ಅಖಿಳ ಬ್ರಾಹ್ಮಣರ = ಸಮಸ್ತ ಬ್ರಾಹ್ಮಣರನ್ನು , ದಯದಿಂದ = ಕೃಪೆದೋರಿ , ಸಂತೈಸೋ = ರಕ್ಷಿಸು.

ವಿಶೇಷಾಂಶ : (1) ಬೃಹಸ್ಪತಿಯು ಬ್ರಾಹ್ಮಣವರ್ಣ ಮತ್ತು ಬ್ರಾಹ್ಮಣ ಧರ್ಮಗಳ ಅಭಿಮಾನಿಯು.

(2) ಬೃಹಸ್ಪತಿಯು ಗುರುವಾದ ಮಾತ್ರದಿಂದ , ತಾರತಮ್ಯದಲ್ಲಿ ಇಂದ್ರನಿಂದ ಉತ್ತಮರೆಂದು ತಿಳಿಯಬಾರದು. ಬ್ರಹ್ಮಣ್ಯದೇವನೆಂಬ ಬಿರುದುಳ್ಳ ಶ್ರೀಹರಿಯು , ಬ್ರಾಹ್ಮಣರಲ್ಲಿ ವಿಶೇಷ ಸನ್ನಿಹಿತನಾಗಿದ್ದು ಇತರ ಪ್ರಜೆಗಳನ್ನು ಅವರ ದ್ವಾರಾ ಅನುಗ್ರಹಿಸುತ್ತಾನೆ . ಬ್ರಾಹ್ಮಣರಲ್ಲಿ ಪೂಜ್ಯ ಭಾವನೆಯು ಸರ್ವದಾ ಸರ್ವರಿಗೂ ಅವಶ್ಯಕವೆಂಬುದನ್ನು ಲೋಕಕ್ಕೆ ನಿದರ್ಶನ ಮಾಡಲು , " ವರ್ಣಾನಾಂ ಬ್ರಾಹ್ಮಣೋ ಗುರುಃ " ಎಂದಿರುವುದರಿಂದ ಬ್ರಾಹ್ಮಣರನ್ನು ಗುರುಸ್ಥಾನದಲ್ಲಿಟ್ಟು ಉತ್ತಮರಿಂದ ಸಹ ಪೂಜಿಸಲ್ಪಡುವಂತೆ ಮಾಡುತ್ತಾನೆ. ಉತ್ತಮರು ಸಲ್ಲಿಸುವ ಗೌರವ ಮತ್ತು ಪೂಜಾದಿಗಳನ್ನು ಬ್ರಾಹ್ಮಣರ ಅಂತರ್ಯಾಮಿಯಾದ ತಾನೇ ಸ್ವೀಕರಿಸುತ್ತಾನೆ. ಬೃಹಸ್ಪತಿಗಳಿಗಿಂತ ಅವರರಾದ ವಿಶ್ವರೂಪಾಚಾರ್ಯರನ್ನು , ವಿಶೇಷ ಸಂದರ್ಭದಲ್ಲಿ , ಬೃಹಸ್ಪತ್ಯಾಚಾರ್ಯರ ಸ್ಥಾನದಲ್ಲಿ ಆಚಾರ್ಯರಾಗಿರಲು ಪ್ರಾರ್ಥಿಸಿ ದೊರಕಿಸಿಕೊಂಡಿದ್ದಾನೆ. ' ಅಪ್ಯಚ್ಯುತೋ ಗುರುದ್ವಾರಾ ಪ್ರಸಾದಕೃತ್ ' ಮತ್ತು ' ಗುರುಪ್ರಸಾದೋ ಬಲವಾನ್ ' ಇತ್ಯಾದಿ ಪ್ರಮಾಣಗಳು ಪೂರ್ವೋಕ್ತ ಹರಿಸಂಕಲ್ಪವನ್ನು ಸಾರುತ್ತವೆ.

ತಾರಾರಮಣನೆ ಮದ್ಭಾರ ನಿನ್ನದು ಮಹಾ -
ಕಾರುಣಿಕ ನೀನೆಂದು ಬಿನ್ನೈಪೆ । ಬಿನ್ನೈಪೆ ದುರಿತವ ನಿ -
ವಾರಿಸಿ ತೋರೋ ತವ ರೂಪ ॥ 3 ॥

ಅರ್ಥ : ತಾರಾರಮಣನೆ = ತಾರಾಪತಿಗಳಾದ ಹೇ ಬೃಹಸ್ಪತಿಗಳೇ ! ಮದ್ಭಾರ = ನನ್ನನ್ನು (ಉದ್ಧರಿಸುವ) ಭಾರ , ನಿನ್ನದು = ನಿಮ್ಮದು ; ಮಹಾ ಕಾರುಣಿಕ ನೀನೆಂದು = ನೀವು ಬಹು ಕೃಪಾಶಾಲಿಗಳು ಎಂಬುದರಿಂದ, ಬಿನ್ನೈಪೆ = ಪ್ರಾರ್ಥಿಸುತ್ತೇನೆ ; ದುರಿತವ = ಪಾಪಗಳನ್ನು , ನಿವಾರಿಸಿ = ಪರಿಹರಿಸಿ , ತವ ರೂಪ = ನಿಮ್ಮ ರೂಪವನ್ನು , ತೋರೋ = ತೋರಿಸಿರಿ (ದರ್ಶನಭಾಗ್ಯವನ್ನು ಕೊಡಿ).

ವಿಶೇಷಾಂಶ : ದೇವತೆಗಳ ಸಾಕ್ಷಾದ್ದರ್ಶನವು ಅವರ ಪೂರ್ಣಾನುಗ್ರಹ ದ್ಯೋತಕವು. ಬೃಹಸ್ಪತಿಗಳು ಮಹಾಜ್ಞಾನಿಗಳು - ' ವಾಚಸ್ಪತಿ ' ಎಂಬುದು ಅವರ ಇನ್ನೊಂದು ಅನ್ವರ್ಥನಾಮ . ಧರ್ಮ , ಜ್ಞಾನ , ಭಕ್ತಿಗಳ ವೃದ್ಧಿಗೆ ಸಾಧನವಾದ ಶುದ್ಧವಚನಗಳ ಉಚ್ಚಾರಣೆ ಸಹ ಅಂದರೆ ವೇದಾಧ್ಯಯನಾದಿಗಳೂ , ಇವರ ಅನುಗ್ರಹಮೂಲಕ.

ಶ್ರೀ ಶುಕ್ರ ಸ್ತುತಿ

ಶಕ್ರಾರಿಗಳ ಗುರುವೆ ಶುಕ್ರಮುನಿರಾಯ ದರ -
ಚಕ್ರಾಬ್ಜಪಾಣಿ ಗುಣರೂಪ । ಗುಣರೂಪ ವ್ಯಾಪಾರ 
ಪ್ರಕ್ರಿಯವ ತಿಳಿಸೋ ಪ್ರತಿದಿನ ॥ 1 ॥

ಅರ್ಥ : ಶಕ್ರಾರಿಗಳ ಗುರುವೆ = ಇಂದ್ರನ ಶತ್ರುಗಳ (ದೈತ್ಯರ) ಗುರುಗಳಾದ , ಶುಕ್ರಮುನಿರಾಯ = ಹೇ ಶ್ರೀಹರಿಯ ಗುಣರೂಪಕ್ರಿಯಾದಿಗಳ ಮನನಶೀಲರಾದ ಶುಕ್ರಾಚಾರ್ಯರೇ ! ದರಚಕ್ರಾಬ್ಜಪಾಣಿ = ಶಂಖ , ಚಕ್ರ , ಪದ್ಮಗಳನ್ನು ಧರಿಸಿದ ಹಸ್ತಗಳುಳ್ಳ ಶ್ರೀಹರಿಯ , ಗುಣರೂಪವ್ಯಾಪಾರ ಪ್ರಕ್ರಿಯವ = ಗುಣರೂಪಕ್ರಿಯೆಗಳ ಪ್ರಕಾರವನ್ನು , ಪ್ರತಿದಿನ = ನಿತ್ಯವೂ , ತಿಳಿಸೋ = ತಿಳಿಸಿಕೊಡಿರಿ.

ವಿಶೇಷಾಂಶ : (1) ಶುಕ್ರಾಚಾರ್ಯರು ಸ್ವರೂಪದಿಂದ ಕರ್ಮಜದೇವತೆಗಳು - ದೈತ್ಯಗುರುಗಳು - ಮಹಾತಪಸ್ವಿಗಳು. ಮೃತಸಂಜೀವಿನಿ ಮೊದಲಾದ ಮಹಾವಿದ್ಯೆಗಳನ್ನು ಬಲ್ಲವರು. ಇವರಲ್ಲಿ ದೈತ್ಯರಿಗೆ ಗುರುತ್ವ ಬುದ್ಧಿಯನ್ನಿತ್ತು , ಇವರ ತಪಃಶಕ್ತಿಯ ಪ್ರಯೋಜನವನ್ನು ಹೊಂದುವುದರ ಮೂಲಕ ದೇವದ್ವೇಷವನ್ನು ಬೆಳೆಸಿಕೊಂಡು , ತಮಸ್ಸನ್ನು ಹೊಂದುವಂತೆ ಶ್ರೀಹರಿಯು ಸಂಕಲ್ಪಿಸಿ , ಶುಕ್ರಾಚಾರ್ಯರನ್ನು ದೈತ್ಯಗುರುಸ್ಥಾನದಲ್ಲಿಟ್ಟಿರುವರು. ಶ್ರೀಹರಿಸಂಕಲ್ಪ ಸಾಧಕರಾದ ಶುಕ್ರಾಚಾರ್ಯರು ಶ್ರೀಹರಿಯ ಅನುಗ್ರಹಕ್ಕೆ ಪಾತ್ರರು.

(2) ' ಶುಕ್ರನೀತಿ ' ಎಂದು ಪ್ರಸಿದ್ಧವಾದ ಇವರ ನೀತಿಶಾಸ್ತ್ರವು , ಮೋಕ್ಷಕ್ಕೆ ಅನರ್ಹರಾದ ದೈತ್ಯರಿಗೆ ಬಹಳ ಮಾನ್ಯವಾದುದು. ಶ್ರೀಹರಿಯ ಸಂಕಲ್ಪಾನುಸಾರ ದೈತ್ಯರಿಗೆ ಜಯಕಾಲ (ತಮೋಗುಣದ ಉನ್ನಾಹಕಾಲ) ಪ್ರಾಪ್ತವಾಗುವವರೆಗಾದರೂ , ದೈತ್ಯರನ್ನು ಲೌಕಿಕನಿರ್ಬಂಧದಲ್ಲಿಟ್ಟು , ಅವರಿಂದ ಸಜ್ಜನರಿಗೆ ಆಗುವ ಪೀಡೆಯನ್ನು ಆದಷ್ಟು ಕಡಿಮೆ ಮಾಡಲು ನೀತಿಶಾಸ್ತ್ರವು ಸಹಾಯಕವಾಗುತ್ತದೆ.

(3) ರಾಜ್ಯೈಶ್ವರ್ಯಾದಿಗಳ ಪ್ರಾಪ್ತಿಗಾಗಿ ಶುಕ್ರಾಚಾರ್ಯರು ದೈತ್ಯರಿಗೆ ಬೆಂಬಲಿಗರು. ಆದರೆ ಜ್ಞಾನಭಕ್ತ್ಯಾದಿಗಳನ್ನು ಕೋರುವ ಸಜ್ಜನರನ್ನು ಅನುಗ್ರಹಿಸುತ್ತಾರೆ. ಇವರು ಪ್ರಸನ್ನರಾದರೆ , ದೈತ್ಯಬಾಧೆಗಳ ಪರಿಹಾರವೂ , ಜ್ಞಾನಭಕ್ತಿಗಳ ಪ್ರಾಪ್ತಿಯೂ ದೊರೆಯುವುವು.

ಕವಿಕುಲೋತ್ತಂಸ ಭಾರ್ಗವ ಬೇಡಿಕೊಂಬೆ ಭಾ -
ಗವತ ಭಾರತವೆ ಮೊದಲಾದ । ಮೊದಲಾದ ಶಾಸ್ತ್ರಗಳ
ಶ್ರವಣಸುಖವೆನಗೆ ಕರುಣಿಸೋ ॥ 2 ॥

ಅರ್ಥ : ಕವಿಕುಲೋತ್ತಂಸ = ಜ್ಞಾನಿಕುಲಶ್ರೇಷ್ಠನಾದ , ಭಾರ್ಗವ = ಹೇ ಶುಕ್ರಾಚಾರ್ಯರೇ ! ಬೇಡಿಕೊಂಬೆ = ತಮ್ಮನ್ನು ಬೇಡಿಕೊಳ್ಳುವೆನು ; ಭಾಗವತ ಭಾರತ ಮೊದಲಾದ ಶಾಸ್ತ್ರಗಳ , ಶ್ರವಣ ಸುಖವ = ಶ್ರವಣ ಮಾಡುವುದರಿಂದ ಲಭ್ಯವಾದ ಸುಖವನ್ನು , ಎನಗೆ = ನನಗೆ , ಕರುಣಿಸೋ = ದಯಮಾಡಿ ಕೊಡಿರಿ.

ವಿಶೇಷಾಂಶ : (1) ಮಹಾತ್ಮರಲ್ಲಿ ಏನನ್ನು ಬೇಡಬೇಕೆಂಬುದನ್ನು ಸೂಚಿಸುತ್ತಾರೆ. ಭಾರತ ಭಾಗವತಾದಿಗಳು ವಿಶೇಷ ರೀತಿಯಿಂದ ಭಗವನ್ಮಹಿಮೆಗಳನ್ನೇ ನಿರೂಪಿಸುತ್ತವೆ. ಇವುಗಳ ಶ್ರವಣವೂ ಸಜ್ಜನರಿಗೆ ಆನಂದಪ್ರದವೇ . ಶ್ರವಣದಿಂದ ಸಾಧಿಸಬೇಕಾದುವು ಜ್ಞಾನಭಕ್ತಿಗಳು. ಅವುಗಳ ಸಾಧನವಾದ ಶ್ರವಣವೂ ಸುಖಪ್ರದವೆಂಬುದನ್ನು ' ಶ್ರವಣಸುಖ ' ಎಂಬುದರಿಂದ ತಿಳಿಸಲಾಗಿದೆ.

ನಿಗಮಾರ್ಥಕೋವಿದನೆ ಭೃಗುಕುಲೋತ್ತಂಸ ಕೈ -
ಮುಗಿದು ಬೇಡುವೆನೋ ದೈವಜ್ಞ । ದೈವಜ್ಞ ಹರಿಯ ಓ -
ಲಗದಲ್ಲಿ ಬುದ್ಧಿ ಇರಲೆಂದೂ ॥ 3 ॥

ಅರ್ಥ : ನಿಗಮಾರ್ಥಕೋವಿದನೆ = ವೇದಾದಿ ಶಾಸ್ತ್ರಜ್ಞಾನ ನಿಪುಣನಾದ , ಭೃಗುಕುಲೋತ್ತಂಸ = ಭೃಗುಕುಲಶೇಖರನಾದ , ದೈವಜ್ಞ = ನಮ್ಮ ಗ್ರಹಗತಿಗಳನ್ನು (ಅದೃಷ್ಟದ ಗತಿಯನ್ನು) ಬಲ್ಲವರಾದ ಹೇ ಆಚಾರ್ಯರೇ ! ಹರಿಯ ಓಲಗದಲ್ಲಿ = ಶ್ರೀಹರಿಯ ಪರಿವಾರದವರಾದ ಬ್ರಹ್ಮ ವಾಯು ಮೊದಲಾದ ದೇವತೆಗಳಲ್ಲಿ , ಎಂದೂ = ಎಂದೆಂದಿಗೂ , ಬುದ್ಧಿ ಇರಲಿ = (ತಾರತಮ್ಯಕ್ರಮವರಿತು) ಪೂಜ್ಯಬುದ್ಧಿಯು ಸ್ಥಿರವಾಗಿರಲೆಂದು , ಕೈಮುಗಿದು = ಕೈಜೋಡಿಸಿ , ಬೇಡುವೆನೊ = ಬೇಡಿಕೊಳ್ಳುತ್ತೇನೆ.

ವಿಶೇಷಾಂಶ : ಶ್ರೀ ಹರಿಯ ಪರಿವಾರಭೂತರಾದ ಬ್ರಹ್ಮ ವಾಯು ಮೊದಲಾದವರನ್ನು ಸಹ ' ತಾರತಮ್ಯಪರಿಜ್ಞಾನೇ ಮಹಾತಾತ್ಪರ್ಯಮಿಷ್ಯತೇ ' ಎಂದಿರುವುದರಿಂದ ತರತಮಭಾವವರಿತು ಭಕ್ತಿಯಿಂದ ಸೇವಿಸುವುದು ಅತ್ಯವಶ್ಯಕ . ಅವರ ಅನುಗ್ರಹವಿಲ್ಲದೆ ಶ್ರೀಹರಿಯ ಅನುಗ್ರಹವು ಎಂದೂ ದೊರೆಯದು.

ಶ್ರೀ ಶನಿ ಸ್ತುತಿ

ತರಣಿನಂದನ ಶನೈಶ್ಚರ ನಿನ್ನ ಪಾದಾಬ್ಜ -
ಕೆರಗಿ ಬಿನ್ನೈಪೆ ಬಹುಜನ್ಮ। ಬಹುಜನ್ಮಕೃತಪಾಪ -
ಪರಿಹಾರಮಾಡಿ ಸುಖವೀಯೋ ॥ 1 ॥

ಅರ್ಥ : ತರಣಿನಂದನ = ಸೂರ್ಯಪುತ್ರನಾದ , ಶನೈಶ್ಚರ = ಶನಿದೇವ ! ನಿನ್ನ ಪಾದಾಬ್ಜಕೆ = ನಿನ್ನ ಪಾದಕಮಲಕ್ಕೆ , ಎರಗಿ = ನಮಸ್ಕರಿಸಿ , ಬಿನ್ನೈಪೆ = ಬೇಡಿಕೊಳ್ಳುತ್ತೇನೆ ; ಬಹುಜನ್ಮ ಕೃತಪಾಪ = ಅನೇಕ ಜನ್ಮಗಳಲ್ಲಿ ಮಾಡಿದ ಪಾಪಗಳನ್ನು , ಪರಿಹಾರ ಮಾಡಿ = ಕಳೆದು , ಸುಖವೀಯೋ = ಸುಖವನ್ನು ಕೊಡು.

ವಿಶೇಷಾಂಶ : (1) ಗ್ರಹಗಳ ಪೈಕಿ , ಬಹು ಮಂದಗತಿಯುಳ್ಳವನು ಶನಿ. ಆದ್ದರಿಂದ ಶನೈಶ್ಚರನೆಂಬ ನಾಮ (ಶನೈಃ - ಮೆಲ್ಲಗೆ , ಚರತಿ - ಸಂಚರಿಸುವವನು).

(2) ಸೃಷ್ಟಿಯ ಆರಂಭದಲ್ಲಿಯೇ ತಮ್ಮ ತಮ್ಮ ಪದವಿಗಳನ್ನು ಹೊಂದಿದವರು ತತ್ತ್ವಾಭಿಮಾನಿ ದೇವತೆಗಳು. ಬ್ರಹ್ಮದೇವನ ಪರನಾಮಕ (ದ್ವಿಪರಾರ್ಧಗಳಿಂದ ಆಗುವ 100 ವರ್ಷ) ಆಯುಷ್ಯದ ಮಧ್ಯದಲ್ಲಿ ಕರ್ಮದಿಂದ ದೇವತ್ವವನ್ನು ಹೊಂದುವರು ಕರ್ಮಜದೇವತೆಗಳು . ಉದಾಹರಣೆ : ಬಲಿಚಕ್ರವರ್ತಿಯು ಮುಂದಿನ ಸಾವರ್ಣಿ ಮನ್ವಂತರದಲ್ಲಿ ಇಂದ್ರಪದವಿಗೆ ಬರುತ್ತಾನೆ. ಇದು ತನ್ನ ಸಾಧನ ಸಾಮರ್ಥ್ಯದಿಂದ - ತಜ್ಜನ್ಯ ಹರಿಪ್ರಸಾದದಿಂದ. ಬಲಿಯು ತತ್ತ್ವಾಭಿಮಾನಿಯಾದ ಇಂದ್ರ(ಪುರಂದರ)ನಂತೆ , ತತ್ತ್ವಾಭಿಮಾನಿಯಲ್ಲ . ಹೀಗೆ ಕರ್ಮಜದೇವತೆಯಲ್ಲದೆ ಇದ್ದರೂ ಶನಿಯು ದೇಹಾಭಿಮಾನಿಯೆಂದು ಹೇಳಲ್ಪಡುವನು. ಏಕೆಂದರೆ ಪುಷ್ಕರ (ಕರ್ಮಾಭಿಮಾನಿ) ಪರ್ಯಂತರಾದ ದೇವತೆಗಳು ಮೂಲತತ್ತ್ವದಿಂದ ಬೇರ್ಪಡಿಸಲಾದ ಅನ್ಯತ್ರವಿರುವ ಆ ತತ್ತ್ವಗಳ ಅಂಶಗಳಿಗೆ ಅಭಿಮಾನಿಗಳು ಮಾತ್ರ ; ವ್ಯಾಪ್ತವಾದ ತತ್ತ್ವಗಳಿಗಲ್ಲ. ಈ ವಿವಕ್ಷೆಯಿಂದ ಇವರನ್ನೂ ತತ್ತ್ವಾಭಿಮಾನಿಗಳೆಂದು ಕೆಲವು ಸಂದರ್ಭಗಳಲ್ಲಿ ಹೇಳಲಾಗುತ್ತದೆ. ಪೃಥ್ವೀತತ್ತ್ವಕ್ಕೆ ಧರಾದೇವಿಯು ಅಭಿಮಾನಿಯು. ಮನುಷ್ಯದೇಹವು ಪಾರ್ಥಿವಾಂಶ ಅಧಿಕವಾಗುಳ್ಳದ್ದು . ದೇಹಗತ ಪೃಥ್ವಿಯ ಕಲೆಗಳಿಗೆ ಶನಿಯು ಅಭಿಮಾನಿಯು. ಈ ಕಾರಣದಿಂದ ಶನಿಯು ದೇಹಾಭಿಮಾನಿಯೆಂದು ಹೇಳಲ್ಪಡುತ್ತಾನೆ. ದೇಹವನ್ನಾಶ್ರಯಿಸಿರುವ ಪಾಪಗಳ ಪರಿಹಾರಕ್ಕಾಗಿ ಶನಿದೇವನ ಅನುಗ್ರಹವನ್ನು ಕೋರುವುದು ಯುಕ್ತವೇ ಆಗುವುದು. ತಾರತಮ್ಯದಲ್ಲಿ ಪುಷ್ಕರನಿಗಿಂತ ಕಿಂಚಿದುತ್ತಮನು ಶನಿ. 

ಛಾಯಾತನುಜ ಮನಃಕಾಯಕ್ಲೇಶಗಳಿಂದ
ಆಯಾಸ ಪಡುವಂಥ ಸಮಯದಿ । ಸಮಯದಲಿ ಲಕ್ಷ್ಮೀನಾ -
ರಾಯಣನ ಸ್ಮರಣೆ ಕರುಣಿಸೋ ॥ 2 ॥

ಅರ್ಥ : ಛಾಯಾತನುಜ = ಛಾಯಾದೇವಿಯ ಪುತ್ರನಾದ ಹೇ ಶನಿದೇವ! ಮನಃಕಾಯಕ್ಲೇಶಗಳಿಂದ = ಮಾನಸಿಕ ಮತ್ತು ದೈಹಿಕ ದುಃಖಗಳಿಂದ , ಆಯಾಸ ಪಡುವಂಥ ಸಮಯದಲಿ = ಶ್ರಮಪಡುವ ಕಾಲದಲ್ಲಿ , ಲಕ್ಷ್ಮೀನಾರಾಯಣನ = ಲಕ್ಷ್ಮೀಸಹಿತನಾದ ನಾರಾಯಣನ , ಸ್ಮರಣೆ = ಸ್ಮರಣೆಯನ್ನು , ಕರುಣಿಸೋ = ಅನುಗ್ರಹಿಸು.

ವಿಶೇಷಾಂಶ : (1) ವಿವಸ್ವಾನ್ ಎಂಬುದೂ ಸೂರ್ಯನ ನಾಮ . ಆತನಿಗೆ ಸಂಜ್ಞಾ ಮತ್ತು ಛಾಯಾ ಎಂಬ ಇಬ್ಬರು ಪತ್ನಿಯರು. ಈ ಛಾಯಾದೇವಿಯಿಂದ ಹುಟ್ಟಿದವನು ಶನೈಶ್ಚರ.

(2) ಸೂರ್ಯನ ತಾಪಕರವಾದ ತೇಜಸ್ಸನ್ನು ತಾಳಲಾರದೆ ಸಂಜ್ಞಾದೇವಿಯು ಸೂರ್ಯನನ್ನು ಬಿಟ್ಟು ತವರುಮನೆಗೆ ಹೋಗಲು ನಿರ್ಧರಿಸಿದಳು. ಆಗ , ತನ್ನಂತೆ ಇರುವ ಸ್ತ್ರೀಯನ್ನು (ಛಾಯಾದೇವಿಯನ್ನು) ನಿರ್ಮಿಸಿ , ತಾನು ಹೊರಟುಹೋದುದು ಸೂರ್ಯನಿಗೆ ತಿಳಿಯದಂತೆ (ತನ್ನಂತೆಯೇ) ವರ್ತಿಸಬೇಕೆಂದು ಛಾಯಾದೇವಿಗೆ ಹೇಳಿ ಹೊರಟುಹೋದಳು. ಆ ಕಾಲದಲ್ಲಿ ಸೂರ್ಯನಿಂದ ಆಕೆಯಲ್ಲಿ ಜನಿಸಿದವನು ಶನೈಶ್ಚರ.

ಇದನೆ ಬೇಡುವೆ ಪದೋಪದಿ ಪುಷ್ಕರನ ಗುರುವೆ
ಹೃದಯ ವದನದಲಿ ಹರಿಮೂರ್ತಿ । ಹರಿಮೂರ್ತಿ ಕೀರ್ತನೆಗ -
ಳೊದಗಲೆನಗೆಂದು ಬಿನ್ನೈಪೆ ॥ 3 ॥

ಅರ್ಥ : ಪುಷ್ಕರನ ಗುರುವೆ = ಪುಷ್ಕರನ ಗುರುವಾದ ಹೇ ಶನಿದೇವ ! ಹರಿಮೂರ್ತಿ ಕೀರ್ತನೆಗಳು = ಶ್ರೀ ಹರಿಯ ರೂಪ ಮತ್ತು ಆತನ ಸ್ತೋತ್ರಗಳು , ಹೃದಯವದನದಲಿ = ಮನವಚನಗಳಲ್ಲಿ , ಎನಗೆ = ನನಗೆ , ಒದಗಲೆಂದು = ಲಭ್ಯವಾಗಲೆಂದು , ಬೇಡುವೆ = ಬೇಡುತ್ತೇನೆ. ಇದನ್ನೇ , ಪದೋಪದಿ = ಹೆಜ್ಜೆಹೆಜ್ಜೆಗೂ (ಮೇಲಿಂದ ಮೇಲೆ) , ಬಿನ್ನೈಪೆ = ವಿಜ್ಞಾಪಿಸಿಕೊಳ್ಳುತ್ತೇನೆ.

ವಿಶೇಷಾಂಶ : ತಾರತಮ್ಯದಲ್ಲಿ ಶನಿಯು ಪುಷ್ಕರನ ಮೇಲಿನ ಕಕ್ಷೆಯಲ್ಲಿದ್ದಾನೆ. ಸ್ವೋತ್ತಮನಾದ್ದರಿಂದ ಶನಿಯು ಪುಷ್ಕರನಿಗೆ ಗುರುವು. ಪುಷ್ಕರನು ಕರ್ಮ ( ಕಲಾ ) ಅಭಿಮಾನಿಯು . ಜಾತಿ , ಗುಣ , ಕ್ರಿಯೆಗಳೆಂಬ ಸಜಾತೀಯ ಸಮುದಾಯದಿಂದ ಭಿನ್ನಪಡಿಸಲಾದ ಏಕದೇಶಗಳಿಗೆ ಅಭಿಮಾನಿಗಳು , ಪರ್ಜನ್ಯ ಮೊದಲಾದವರು. ಕ್ರಿಯಾಸ್ವರೂಪದ ಮೂಲತತ್ತ್ವಕ್ಕೆ (ಕರ್ಮಕ್ಕೆ) ಕ್ರಿಯೇಶನಾದ ಗರುಡನು ಅಭಿಮಾನಿಯು. ಪುಷ್ಕರನಿಗೂ ಗುರುವಾದ ಶನಿದೇವನನನ್ನು , ಹರಿಮೂರ್ತಿಗಳ ದರ್ಶನ , ಹರಿಸ್ಮರಣೆ ಮುಂತಾದ ಕರ್ಮವಿಷಯವಾಗಿ ಪ್ರಾರ್ಥಿಸುವುದು ಉಪಪನ್ನವಾಗುತ್ತದೆ.

ಅಹಿಕಪಾರತ್ರಿಕದಿ ನೃಹರಿದಾಸರ ನವ -
ಗ್ರಹದೇವತೆಗಳು ದಣಿಸೋರೇ । ದಣಿಸೋರೆ ಇವರನ್ನು
ಅಹಿತರೆಂದೆನುತ ಕೆಡಬೇಡಿ ॥ 4 ॥

ಅರ್ಥ : ಅಹಿಕಪಾರತ್ರಿಕದಿ = ಇಹಪರಗಳಲ್ಲಿ , ನವಗ್ರಹದೇವತೆಗಳು = ನವಗ್ರಹ ಮಂಡಲಗಳ ಅಭಿಮಾನಿದೇವತೆಗಳು , ನೃಹರಿದಾಸರ = ನರಹರಿಯ ಭಕ್ತರನ್ನು (ಭಗವದ್ಭಕ್ತರನ್ನು) , ದಣಿಸೋರೆ = ಕ್ಲೇಶಪಡಿಸುವರೇ (ಎಂದಿಗೂ ಇಲ್ಲ). ಇವರನ್ನು = ಈ ದೇವತೆಗಳನ್ನು , ಅಹಿತರು = ಕೇಡನ್ನುಂಟುಮಾಡುವವರು , ಎಂದೆನುತ = ಎಂದು ಹೇಳಿಕೊಂಡು (ಭಾವಿಸುತ್ತ) , ಕೆಡಬೇಡಿ = ಕೆಡಬೇಡಿರಿ .(ಹಾಳಾಗಬೇಡಿ - ಅನರ್ಥಕ್ಕೆ ಗುರಿಯಾಗದಿರಿ) ಎಂದು ಭಕ್ತರಿಗೆ ಎಚ್ಚರಿಸಿದ್ದಾರೆ. 

ವಿಶೇಷಾಂಶ : (1) ಶ್ರೀನೃಸಿಂಹನು ಶ್ರೀಜಗನ್ನಾಥದಾಸಾರ್ಯರ ಉಪಾಸ್ಯ ದೇವತೆ. ಶ್ರೀಜಗನ್ನಾಥವಿಟ್ಠಲಾಭಿನ್ನನೇ ನರಹರಿಯು.

(2) ಹರಿಭಕ್ತರನ್ನು ಯಾವ ಗ್ರಹಗಳೇ ಆಗಲಿ ಎಂದೂ ಕಾಡುವುದಿಲ್ಲ. ಕಾಡುವರೆಂದು ತಿಳಿಯುವವರು ತಾವೇ ಕೆಡುತ್ತಾರೆ. ಶನಿಯಿಂದ ಬಹು ವಿಪತ್ತುಗಳು ಬರುವುವೆಂದು ಅನೇಕರು ಭಾವಿಸುತ್ತಾರೆ. ಈ ಭಾವನೆಯನ್ನು ಪರಿತ್ಯಜಿಸಬೇಕೆಂದು ಶ್ರೀದಾಸಾರ್ಯರು ಹರಿಭಕ್ತರನ್ನು ಎಚ್ಚರಿಸುತ್ತಾರೆ. ' ಇದೇನು ಶನಿಕಾಟವೋ ' ಎಂಬ ಉದ್ಗಾರವು ಅಜ್ಞಾನಿಗಳಿಗೆ ಮಾತ್ರ ಶೋಭಿಸಬಹುದು . ಹರಿಕಥಾಮೃತಸಾರದಲ್ಲಿ ಶ್ರೀಜಗನ್ನಾಥದಾಸಾರ್ಯರು , " ಹರಿಗುರುಗಳರ್ಚಿಸದ ಪಾಪಾತ್ಮರನು ಶಿಕ್ಷಿಸಲೋಸುಗ ಶನೈಶ್ಚರನೆನಿಸಿ ದುಷ್ಫಲಗಳೀವೆ " ಎಂದಿದ್ದಾರೆ. ಜೀವರು ತಮ್ಮ ದುಷ್ಕರ್ಮಗಳ ಫಲವನ್ನು ಭೋಗಿಸುವ ಕಾಲ ಬಂದಾಗ , ಫಲದಾತನು ಶ್ರೀಹರಿಯು , ಗ್ರಹಗತಿಗಳನ್ನು ನಿಮಿತ್ತ ಮಾಡಿ ಭೋಗವನ್ನೀಯುವನು.

ಜಗನ್ನಾಥವಿಟ್ಠಲನ ಬದಿಗರಿವರಹುದೆಂದು
ಹಗಲಿರುಳು ಬಿಡದೆ ನುತಿಸುವ । ನುತಿಸುವ ಮಹಾತ್ಮರಿಗೆ
ಸುಗತಿಗಳನಿತ್ತು ಸಲಹೋರು ॥ 5 ॥

ಅರ್ಥ : ಜಗನ್ನಾಥವಿಟ್ಠಲನ = ಜಗದೊಡೆಯನಾದ ಶ್ರೀವಿಟ್ಠಲನ , ಬದಿಗರು = ಪರಿವಾರೋವರು , ಇವರು = ಈ ನವಗ್ರಹದೇವತೆಗಳು , ಅಹುದೆಂದು = ಆಗಿರುವರೆಂದು , ಹಗಲಿರುಳು = ಪ್ರತಿದಿನವೂ , ಬಿಡದೆ = ತಪ್ಪದೆ , ನುತಿಸುವ = ಸ್ತುತಿಸುವ , ಮಹಾತ್ಮರಿಗೆ = ಮಹತ್ ಶಬ್ದವಾಚ್ಯನಾದ ಶ್ರೀ ಹರಿಯನ್ನು ಸದಾ ಮನಸ್ಸಿನಲ್ಲಿ ಧರಿಸಿರುವ ( ನಿರಂತರ ಸ್ಮರಣೆಯುಳ್ಳ ) ಭಕ್ತರಿಗೆ , ಸುಗತಿಗಳನು = ಸದ್ಗತಿಗಳನ್ನು , ಇತ್ತು = ಕೊಟ್ಟು , ಸಲಹೋರು = ಕಾಪಾಡುವರು.

ವಿಶೇಷಾಂಶ : ನಿತ್ಯವೂ ನವಗ್ರಹಗಳ ಸ್ತೋತ್ರವನ್ನು ಕೀರ್ತನೆ ಮಾಡುವುದರಿಂದ , ಗ್ರಹಾಂತರ್ಗತನಾದ ಶಿಂಶುಮಾರರೂಪಿ ಶ್ರೀ ಹರಿಯ ಪ್ರಸನ್ನತೆಯುಂಟಾಗುತ್ತದೆ. ಇದರ ಫಲವೇನೆಂದರೆ ತಮಗೆ ಬರಲಿರುವ ದುಷ್ಕರ್ಮಫಲ ಭೋಗಗಳನ್ನು ತಪ್ಪಿಸಿಕೊಂಡು ಅಥವಾ ಬಹುಮಟ್ಟಿಗೆ ಕಡಿಮೆ ಮಾಡಿಕೊಂಡು , ತಮ್ಮ ಸಾಧನೆಯನ್ನು ಮುಂದುವರಿಸಿಕೊಂಡು ಯಥಾಯೋಗ್ಯ ಜ್ಞಾನಭಕ್ತಿಗಳನ್ನು ಸಂಪಾದಿಸಲು ಶಕ್ತರಾಗುವರೆಂದು ಸಜ್ಜನರಿಗೆ ಆಶ್ವಾಸನೆಯನ್ನು ನೀಡುತ್ತಾರೆ. ಅಂತೆಯೇ , ಪ್ರಾತಃ ಸ್ತೋತ್ರದಲ್ಲಿ ಪ್ರಾಚೀನಜ್ಞಾನಿಗಳು ನವಗ್ರಹದೇವತೆಗಳ ಸ್ತುತಿಗಳನ್ನೂ ಸಂಗ್ರಹಿಸಿ ಸೇರಿಸಿರುವರು. 

ಇಲ್ಲಿ ' ಗ್ರಹಸ್ತೋತ್ರ ' ವೆಂದು ಹೆಸರಿಟ್ಟು , ಏಳೇ ಗ್ರಹಗಳ ಸ್ತುತಿಮಾತ್ರ ಮಾಡಿದ್ದು ಕಾಣುತ್ತದೆ. ರಾಹುಕೇತುಗಳು ಛಾಯಾಗ್ರಹಗಳಾಗಿರುವುದರಿಂದ ಅವರು ತಾವೆಲ್ಲಿ - ಯಾರ ಜೊತೆಯಲ್ಲಿರುವರೋ , ಆ ಗ್ರಹಗಳ ಬಲಾಬಲಗಳನ್ನನುಸರಿಸಿ ಫಲಾಫಲಗಳನ್ನು ಕೊಡುವರೆಂದು ಜ್ಯೋತಿಷ್ಕರ ಅಭಿಪ್ರಾಯವು.
ವ್ಯಾಖ್ಯಾನ : 
ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್, ದಾವಣಗೆರೆ.
***********