Showing posts with label ಧವಳಗಂಗೆಯ ಗಂಗಾಧರ ಮಹಾಲಿಂಗ hayavadana DHAVALAGANGEYA GANGADHARA MAHALINGA. Show all posts
Showing posts with label ಧವಳಗಂಗೆಯ ಗಂಗಾಧರ ಮಹಾಲಿಂಗ hayavadana DHAVALAGANGEYA GANGADHARA MAHALINGA. Show all posts

Saturday, 14 December 2019

ಧವಳಗಂಗೆಯ ಗಂಗಾಧರ ಮಹಾಲಿಂಗ ankita hayavadana DHAVALAGANGEYA GANGADHARA MAHALINGA

ರಾಗ ಕೇದಾರ ಗೌಳ ತಾಳ ಮಿಶ್ರ ಛಾಪು




ಧವಳಗಂಗೆಯ ಗಂಗಾಧರ ಮಹಾಲಿಂಗ ಮಾ
ಧವನ ತೋರಿಸಯ್ಯಾ ಗುರುಕುಲೋತ್ತುಂಗ || ಪ ||

ಅರ್ಚಿಸಿದವರಿಗಭೀಷ್ಟವ ಕೊಡುವ
ಹೆಚ್ಚಿನ ಅಘಗಳ ತರಿದು ಬಿಸುಟುವ
ದುಶ್ಚರಿತಗಳೆಲ್ಲ ದೂರದಲ್ಲಿಡುವ ನ
ಮ್ಮಚ್ಯುತಗಲ್ಲದ ಅಸುರರ ಬಡಿವ || ೧ ||

ಮಾರನ ಗೆದ್ದ ಮನೋಹರ ಮೂರ್ತಿ
ಸಾರ ಸಜ್ಜನರಿಗೆ ಸುರ ಚಕ್ರವರ್ತಿ
ಧಾರಿಣಿಯೊಳಗೆ ತುಂಬಿದೆ ನಿಮ್ಮ ಕೀರ್ತಿ ಮು
ರಾರಿಯ ತೋರಯ್ಯಾ ನಿಮಗೆ ಶರಣಾರ್ತಿ || ೨ ||

ಚೆನ್ನ ಪ್ರಸನ್ನ ಶ್ರೀಹಯವದನನ್ನ
ಅನುದಿನ ನೆನೆವಂತೆ ಮಾಡೋ ನೀ ಎನ್ನ
ಅನ್ಯನಲ್ಲವೋ ನಾನು ಗುರುವೆಂಬ ನಿನ್ನ
ಇನ್ನಾದರು ಹರಿಯ ತೋರೊ ಮುಕ್ಕಣ್ಣ || ೩ ||
****

ರಾಗ: ಮಧ್ಯಮಾವತು  ತಾಳ: ಅಟ (raga, taala may differ in audio)
ಧವಳ ಗಂಗೆಯ ಗಂಗಾಧರ ಮಹಾಲಿಂಗ

dhavaLa gaMgeya gaMgAdhara mahAliMga
mAdhavana tOrisayya gurukulO ttuMga || pa ||

arcisidavarigabhIShTaya koDuva
heccida aghagaLa taridu bisuTuva
duScaritagalella dUradalliDuva
nammacyutagallada asurara baDiva || 1 ||

mArana gedda manOhara mUrti
sAra sajjanarige sura cakravarti
dhAruNiyella tuMbitu ninna kIrti
murAriya tOrisayya ninage SaraNArthi || 2 ||

cenna prasanna SrI hayavadananna
anudina nenevaMte mADo nInenna
anyaranariyeno guruveMbe ninna
innAdaru hariya tOro dhIra mukkaNNa || 3 ||
***

pallavi

dhavaLa gangeya gangAdhara mahAlingA mAdhavana tOrisayya gurukulOttungA

caraNam 1

arcisidavarigabhISTava koDuva heccina aghagaLa taridu bisuTuva
duscaritagaLella dUradalliDuva nAmaccuta ghallaga asurara baDiva

caraNam 2

mAranagedda manOhara mUrti sAdhu sajjanarige sura cakravarti
dhAruNiyoLage tumbide nimma kIrti murAriya tOrisayya ninage sharaNArthi

caraNam 3

cennaprasanna shrI hayavadananna anudina nenEvante mADO nIyenna
anyanallavO nAnu guruvembe ninna innAdaru hariya tOru mukkaNNa
***



Dhavala gangeya gangadhara mahalinga madhavana
Torisayya gurukulottunga ||

Arcisidavarigabhishtava koduva
Hecchina aghagala varisi bisutuva
Duscaritagalella duradalliduva
Nammachyutagallada asurara badiva ||1||

Marana gedda manoharamurti
Saro sajjanarige sura chakravarti
Dharuniyolage tumbide ninna kirti
Murariya torisayya ninage saranarthi||2||

Chenna prasanna sri hayavadananna
Anudina nenevante mado ni enna
Anyanallavo nanu guruvembe ninna
Innadaru toro dhira mukkanna ||3||
***


ಮಾಧವನ ತೋರಿಸಯ್ಯ ಗುರುಕುಲೋ ತ್ತುಂಗ || ಪ ||

ಅರ್ಚಿಸಿದವರಿಗಭೀಷ್ಟಯ ಕೊಡುವ

ಹೆಚ್ಚಿದ ಅಘಗಳ ತರಿದು ಬಿಸುಟುವ

ದುಶ್ಚರಿತಗಲೆಲ್ಲ ದೂರದಲ್ಲಿಡುವ

ನಮ್ಮಚ್ಯುತಗಲ್ಲದ ಅಸುರರ ಬಡಿವ || ೧ ||

ಮಾರನ ಗೆದ್ದ ಮನೋಹರ ಮೂರ್ತಿ

ಸಾರ ಸಜ್ಜನರಿಗೆ ಸುರ ಚಕ್ರವರ್ತಿ

ಧಾರುಣಿಯೆಲ್ಲ ತುಂಬಿತು ನಿನ್ನ ಕೀರ್ತಿ

ಮುರಾರಿಯ ತೋರಿಸಯ್ಯ ನಿನಗೆ ಶರಣಾರ್ಥಿ || ೨ ||

ಚೆನ್ನ ಪ್ರಸನ್ನ ಶ್ರೀ ಹಯವದನನ್ನ

ಅನುದಿನ ನೆನೆವಂತೆ ಮಾಡೊ ನೀನೆನ್ನ

ಅನ್ಯರನರಿಯೆನೊ ಗುರುವೆಂಬೆ ನಿನ್ನ

ಇನ್ನಾದರು ಹರಿಯ ತೋರೊ ಧೀರ ಮುಕ್ಕಣ್ಣ || ೩ ||
***

ಶ್ರೀ ವಾದಿರಾಜರ ಕೃತಿ 

 ರಾಗ ಕೇದಾರಗೌಳ     ಆದಿತಾಳ (raga tala may differ in audio)

ಧವಳಗಂಗೆಯ ಗಂಗಾಧರ ಮಹಾಲಿಂಗ ಮಾ -
ಧವನ ತೋರಿಸಯ್ಯ ಗುರುಕುಲೋತ್ತುಂಗ ॥ ಪ ॥

ಅರ್ಚಿಸಿದವರಿಗಭೀಷ್ಟವ ಕೊಡುವ
ದುಶ್ಚರಿತರನ್ನೆಲ್ಲ ದೂರದಲ್ಲಿಡುವ
ಹೆಚ್ಚಿದ ಅಘಗಳ ತರಿದು ಬಿಸುಡುವ ನ -
ಮ್ಮಚ್ಯುತಗಲ್ಲದ ಅಸುರರ ಬಡಿವ ॥ 1 ॥

ಮಾರನ ಗೆಲಿದ ಮನೋಹರಮೂರ್ತಿ
ಚಾರು ಸಜ್ಜನರಿಗೆ ಸುರಚಕ್ರವರ್ತಿ
ಧಾರುಣಿಯೊಳಗೆ ತುಂಬಿದೆ ನಿನ್ನ ಕೀರ್ತಿ
ಹರಿಯ ತೋರಿಸಯ್ಯ ನಿನಗೆ ಶರಣಾರ್ತೀ ॥ 2 ॥

ಚೆನ್ನ ಪ್ರಸನ್ನ ಶ್ರೀಹಯವದನನ್ನ 
ಅನುದಿನ ನೆನೆವಂತೆ ಮಾಡೊ ನೀ ಎನ್ನ
ಅನ್ಯನಲ್ಲವೊ ನಾನು ಗುರುವೆಂಬೆ ನಿನ್ನ

ಇನ್ನಾದರು ತೋರೊ ಧೀರ ಮುಕ್ಕಣ್ಣ ॥ 3 ॥
****

 ಧವಳ ಗಂಗೆಯ ಗಂಗಾಧರ ಮಹಾಲಿಂಗಾ||2||

ಮಾಧವನ ತೋರಿಸಯ್ಯ ಗುರುಕುಲೋತ್ತುಂಗಾ
ಶಂಭೋ.... ಶಿವ ಶಂಭೋ....||2||


ಅರ್ಚಿಸಿದವರಿಗಭೀಷ್ಟವ ಕೊಡುವ
ಹೆಚ್ಚಿನ ಅಘಗಳ ತರಿದು ಬಿಸುಟುವಾ
                    ||ಅರ್ಚಿಸಿದವರಿಗಭೀಷ್ಟವ||
ದುಶ್ಚರಿತಗಳೆಲ್ಲ ದೂರದಲ್ಲಿಡುವ||2||
ನಮ್ಮಚ್ಯುತಗಲ್ಲದ ಅಸುರರ ಬಡಿವ ||2||
ಶಂಭೋ... ಶಿವ ಶಂಭೋ...||2||


ಮಾರನ ಗೆದ್ದ ಮನೋಹರ ಮೂರ್ತಿ
ಸಾಧು ಸಜ್ಜನರಿಗೆ ಸುರ ಚಕ್ರವರ್ತಿ
                                      ||ಮಾರನ||
ಧಾರುಣಿಯೊಳಗೆ ತುಂಬಿದೆ ನಿಮ್ಮ ಕೀರ್ತಿ||2||
ಮುರಾರಿಯ ತೋರಿಸಯ್ಯ ನಿಮಗೆ ಶರಣಾರ್ಥಿ||2||
ಶಂಭೋ... ಶಿವ ಶಂಭೋ....||2||


ಚನ್ನ ಪ್ರಸನ್ನ ಶ್ರೀ ಹಯವದನನ್ನ
ಅನುದಿನ ನೆನೆವಂತೆ ಮಾಡೊ ನೀ ಎನ್ನ
                                      ||ಚನ್ನ ಪ್ರಸನ್ನ||
ಅನ್ಯರನರಿಯೆನೊ ಗುರುವೆಂಬೆ ನಿನ್ನ||2||
ಇನ್ನಾದರು ಹರಿಯ ತೋರೋ ಮುಕ್ಕಣ್ಣ ||2||
ಶಂಭೋ.... ಶಿವ ಶಂಭೋ. ..||2||
                                              ||ಧವಳ||
******