Showing posts with label ಯಮುನೇ ದುರಿತೋಪಶಮನೇ ಕರ್ಮ ಪರಿಹರಿಸು jagannatha vittala YAMUNE DURITOPASHAMANE KARMA PARIHARISU. Show all posts
Showing posts with label ಯಮುನೇ ದುರಿತೋಪಶಮನೇ ಕರ್ಮ ಪರಿಹರಿಸು jagannatha vittala YAMUNE DURITOPASHAMANE KARMA PARIHARISU. Show all posts

Wednesday, 22 December 2021

ಯಮುನೇ ದುರಿತೋಪಶಮನೇ ಕರ್ಮ ಪರಿಹರಿಸು ankita jagannatha vittala YAMUNE DURITOPASHAMANE KARMA PARIHARISU



ಯಮುನೇ ದುರಿತೋಪಶಮನೇ /p/


ಕರ್ಮ ಪರಿಹರಿಸು ಖಳದಮನೆ ದಯವಂತೆ /ap/

ಶರಣೆಂಬೆ ತವ ಪಾದಾಂಬುರುಹ ಯುಗಳಿಗೆ ದಿವಾ
ಕರತನಯೆ ಸಪ್ತಸಾಗರ ಭೇದಿನೀ
ಹರಿತೋಷ ಲಾಭ ಸುಂದರಿ ಸುಭಗೆ ನಿನ್ನ ಸಂ
ದರುಶನಕೆ ಬಂದೆ ಭಕ್ತರ ಪಾಲಿಪುದು ಜನನಿ 1

ಮಕರಾದಿ ಮಾಸದಲಿ ವಿಖನಸಾವರ್ತ ದೇ
ಶಕೆ ಬಂದು ವಿe್ಞÁನ ಭಕುತಿಯಿಂದಾ
ತ್ರಿಕರಣದ ಶುದ್ಧಿಯಲಿ ಸಕೃತ ಸ್ನಾನದ ಗೈಯೆ
ಸಕಲ ಸುಖವಿತ್ತು ದೇವಕೀಸುತನ ತೋರಿಸುವೆ 2

ಕನಕಗರ್ಭಾವರ್ತವೆನಿಪ ದೇಶದಲಿ ಸ
ಜ್ಜನರ ಪಾಲಿಪೆನೆಂಬ ಅನುರಾಗದಿ
ಪ್ರಣವಪಾದ್ಯಗೆ ವಿಮಲ ಮುನಿಯಂತೆ ನಿರುತ ಕುಂ
ಭಿಣಿಯೊಳಗೆ ಸರಸ್ವತಿ ದ್ಯುನದಿಯಂದದಿ ಮೆರೆದೆ 3 

ಜಮದಗ್ನಿ ಮುಖ್ಯ ಸಂಯಮಿಗಳನುದಿನದಿ ಆ
ತಮ ತಮ್ಮೊಳಗೆ ರಮಾರಮಣ ದಾಮೋದರನ
ಸುಮಹಿಮೆಗಳನು ಪೊಗಳುತಮಿತ ಮೋದದಲಿಹರು 4

ಪಿಂಗಳಾಧಿಷ್ಠಿತೆ ಶುಭಾಂಗಿ ಸುಮನವನಿತ್ತು
ಕಂಗೊಳಿಸು ಎನ್ನಂತರಂಗದಲ್ಲಿ
ತುಂಗ ಸುಮಹಿಮ ಜಗನ್ನಾಥ ವಿಠಲನ ಸುಗು
ಣಂಗಳ ತುತಿಪುದಕೆ ಮಂಗಳ ಮತಿಯನೀಯೇ 5
****

yamunE duritOpaSamanE ||pa||

karma pariharisu KaLadamane dayavaMte ||a.pa||

SaraNeMbe tava pAdAMburuha yugaLige divA
karatanaye saptasAgara BEdinI
haritOSha lABa sundari suBage ninna san
daruSanake bande Baktara pAlipudu janani ||1||

makarAdi mAsadali viKanasAvarta dE
Sake baMdu vij~jAna BakutiyindA
trikaraNada Suddhiyali sakRuta snAnada gaiye
sakala suKavittu dEvakIsutana tOrisuve ||2||

kanakagarBAvartavenipa dESadali sa
jjanara pAlipeneMba anurAgadi
praNavapAdyage vimala muniyante niruta kuM
BiNiyoLage sarasvati dyunadiyaMdadi merede ||3||

jamadagni muKya saMyamigaLanudinadi A
Sramada trivENi sangamadi racisi
tama tammoLage ramAramaNa dAmOdarana
sumahimegaLanu pogaLutamita mOdadaliharu||4||

pingaLAdhiShThite SuBAngi sumanavanittu
kangoLisu ennantarangadalli
tunga sumahima jagannAtha viThalana sugu
NangaLa tutipudake mangaLa matiyanIyE ||5||
***