Showing posts with label ಆರಿಗೆ ಆರಾಗರಯ್ಯ ಶ್ರೀ ವಾಸುದೇವ ನೀನೊಬ್ಬನಲ್ಲದೇ others. Show all posts
Showing posts with label ಆರಿಗೆ ಆರಾಗರಯ್ಯ ಶ್ರೀ ವಾಸುದೇವ ನೀನೊಬ್ಬನಲ್ಲದೇ others. Show all posts

Friday, 27 December 2019

ಆರಿಗೆ ಆರಾಗರಯ್ಯ ಶ್ರೀ ವಾಸುದೇವ ನೀನೊಬ್ಬನಲ್ಲದೇ others

by ಉರಗಾದ್ರಿವಾಸವಿಠಲರು
ಆರಿಗೆ ಆರಾಗರಯ್ಯ ಶ್ರೀ ವಾಸುದೇವ ನೀನೊಬ್ಬನಲ್ಲದೇ ||ಪ||

ಮಾತೆ ಇದ್ದರು ದೃಢವೃತನಾದ ಧ್ರುವಗೆ ಶ್ರೀ-
ಪತಿ ನೀನೆ ಗತಿಯಾದೆ ಆರಾದರಯ್ಯ
ಪಿತನು ಹಿತನೆನ್ನೆ ಪ್ರಹ್ಲಾದಗಾದಂಥ
ಗತಿ ನೋಡಿ ನರಹರಿ ಗತಿಪ್ರದ ನೀನಾದೆ ||೧||

ಭ್ರಾತರಾವಣನ ಸಹಜಾತ ವಿಭೀಷಣನ ನಿ-
ರ್ಭೀತನ ಮಾಡಿ ಕಾಯ್ದವರಾರಯ್ಯ
ಪತಿಗಳೈವರು ಸತಿಯಾ ಅತಿ ಖೇದ ಹರಿಸಿದರೆ
ಸಂತೈಸಿದಾನಾಥರಕ್ಷಕ ಹರಿಯಲ್ಲವೇ     ||೨||

ಬಂಧುಗಳಿರೆ ಗಜರಾಜನ ನಕ್ರವು
ಬಂದು ಬಾಧಿಸೆ ಬಂಧ ಬಂದು ಹರಿಸಿದರ್‍ಯಾರೊ
ಅಂದು ಇಂದು ಎಂದನಿಮಿತ್ತ ಬಂಧು ನೀ
ಬಂಧುವಲ್ಲದೆ ಎಲ್ಲರು ಬಂಧಕರಯ್ಯಾ ||೩||

ಸುತರು ರಕ್ಷಕರೇನೊ  ಶತಸೂನುಗಳಿಗೆ ಪಿತ
ಧೃತರಾಷ್ಟ್ರಗೆ   ಕೊನೆಗಾರಾದರಯ್ಯ
ಇತರರ ಪಾಡೇನೊ ಶ್ರೀ ವೆಂಕಟೇಶನೆ
ಗತಿ ಎಮಗೆ ಉರದಾದ್ರಿವಾಸ ವಿಠಲನಲ್ಲವೆ     ||೪||
*******