Showing posts with label ಬರಿಯ ಮಾತಲಿಲ್ಲ ಶ್ರೀಹರಿಯ prasannavenkata. Show all posts
Showing posts with label ಬರಿಯ ಮಾತಲಿಲ್ಲ ಶ್ರೀಹರಿಯ prasannavenkata. Show all posts

Thursday 14 November 2019

ಬರಿಯ ಮಾತಲಿಲ್ಲ ಶ್ರೀಹರಿಯ ankita prasannavenkata

by ಪ್ರಸನ್ನವೆಂಕಟದಾಸರು
ಬರಿಯ ಮಾತಲಿಲ್ಲ ಶ್ರೀಹರಿಯ ಪ್ರೀತಿರಣ್ಣ ಮಧ್ವಾಚಾರ್ಯರುಪದೇಶವೆ ಮುಕ್ತಿಪುರದೊಳು ಖ್ಯಾತಿರಣ್ಣ ಪ.

ರಂಗನ ಪ್ರತಿಮೆಯನು ಬಿಡದೆ ಬಹಿರಂಗದಿ ಪೂಜೆಯ ಮಾಡಿಕಂಗಳುತುಂಬಲು ಮೆಲ್ಲನೆ ಅಂತರಂಗದಿ ಪೀಠದಿ ನೋಡಿಹಿಂಗದೆ ಗುರುಶಿಕ್ಷಾಕ್ರಮದಲಿ ಧ್ಯಾನಂಗತನಾಗ್ಯೊಲಿದಾಡಿಲಂಘಿಸಿ ಜನ್ಮಾಯುಷಗಳ ತುದಿಯಲಿಮಂಗಳ ಬಿಂಬವ ನೋಡದೆ ನೋಡಿ 1

ಒಮ್ಮಿಂದೊಮ್ಮೆ ಹೃದಯದದ್ದಕೆಧರ್ಮವ ಜರಿದರೆ ಹೀನನಿರ್ಮಳ ಶೌಚಾಚಮನವೆ ಗಳಿಸಿದಸಮ್ಯಕ್‍ಜ್ಞಾನ ನಿಧಾನತಮ್ಮವಗುಣ ರೋಗಕೆ ಔಷಧವುಕರ್ಮದ ಮೂಲವೆ ಸ್ನಾನಹಮ್ಮಿಲಿ ಸನ್ಮಾರ್ಗಕೆ ಕುಂದಿಡದೆಇಮ್ಮಡಿ ಸಾಧಿಸಿ ನವನವೀನ 2

ಸದ್ವ್ವ್ರತ ದೀಕ್ಷೆಯು ಧ್ರುವಪದ ಮುಕ್ತಿಯುಸುದ್ವಾರವ ಬಿಡಬಹುದೆಮಧ್ವೇಶನ ಮಹಿಮೆಯ ಕೇಳದೆ ರಕ್ಷಾಧ್ವರ ಕಥೆ ಕೇಳಬಹುದೆವಿಧ್ವಂಸಿಸುವ ಚೋರರು ಹೇಳ್ಯಾಡುವಸದ್ವಚನದಿ ಸುಖವಾಹುದೆಅದ್ವಯ ಪ್ರಸನ್ವೆÉಂಕಟೇಶನ ಪಾದಕಮಲದ್ವಯ ಬಿಟ್ಟಗೆ ತಮಸಹುದಹುದೆ 3
*******