..
ಕಳೆಯ ಬ್ಯಾಡವೋ ಕಾಲವ | ತಿಳಿ ನೀ ಮಾನವಾ | ವೃಥಾ | ಪ
ಹರಿಚರಿತಾಮೃತ ವರಸುಗ್ರಂಥವನು
ಪರಮತತ್ವವೆಂದರಿಯದೆ ಜಗದೊಳು 1
ಶುದ್ಧಮನದಿ ಗುರುಮಧ್ವಮುನಿಯ ಚರಣದ್ವಯಕೆರಗದೆ
ಹದ್ದುಗಳಂದದಿ ಕಳೆಯಬ್ಯಾಡವೋ ಕಾಲವ 2
ವಾಸುಕಿಶಯನನ ವಾಸರದಲಿ ಉಪವಾಸವ ಮಾಡದೆ
ದೋಷಿಗಳಮದದಿ ಕಳೆಯಬ್ಯಾಡವೋ ಕಾಲವ 3
ತನುಮನಧನ ಸತಿಯರನು ವಿಧಿಜಕಗರ್ಪಿಸದೆ
ಶುನಕನಂದದಿ ಕಳೆಯ ಬ್ಯಾಡವೋ ಕಾಲವ 4
ಪ್ರೇಮದಿಂದಲಿ ಶಾಮಸುಂದರನ ನಾಮವು ಪಾಡದೆ
ಪಾಮರನಂದದಿ ಕಳೆಯಬ್ಯಾಡವೋ ಕಾಲವ 5
***