Showing posts with label ಕಳ್ಳ ಸಿಕ್ಕಿದ ಕಾಣಿರೇ ಎಂದಿನ ಕಡು ಕಳ್ಳ ಸಿಕ್ಕಿದ purandara vittala. Show all posts
Showing posts with label ಕಳ್ಳ ಸಿಕ್ಕಿದ ಕಾಣಿರೇ ಎಂದಿನ ಕಡು ಕಳ್ಳ ಸಿಕ್ಕಿದ purandara vittala. Show all posts

Saturday, 7 December 2019

ಕಳ್ಳ ಸಿಕ್ಕಿದ ಕಾಣಿರೇ ಎಂದಿನ ಕಡು ಕಳ್ಳ ಸಿಕ್ಕಿದ purandara vittala

ರಾಗ ಕಲ್ಯಾಣಿ ಅಟತಾಳ

ಕಳ್ಳ ಸಿಕ್ಕಿದ ಕಾಣಿರೇ , ಎಂದಿನ ಕಡು
ಕಳ್ಳ ಸಿಕ್ಕಿದ ಕಾಣಿರೇ ||
ಕಳ್ಳ ಸಿಕ್ಕಿದ ಕಾಣೆ ಇನ್ನಿವನ ಬಿಡೆಸಲ್ಲ
ಎಲ್ಲಿ ನೋಡಲು ಬ್ರಹ್ಮಾದ್ಯರಿಗೆ ಸಿಗದಂಥ ||ಅ||

ಕಡೆದ ಬೆಣ್ಣೆಯ ತೆಗೆದಿಟ್ಟ ಬಳಿಕ ತನ್ನ
ಉಡಿಯೊಳರಿಯದಂತೆ ಬೆಕ್ಕು ತಂದು
ಕಡೆಗೋಲ ತೆಗೆದು ಬಚ್ಚಿಡೆ ನಾ ಪೋದರೆ
ಪಿಡಿದು ತೋರುತ ಬೆಣ್ಣೆಯನಿತ್ತು ಮೆದ್ದಂಥ ||

ಒಂದು ರಾತ್ರಿಯಲಿ ಮಲಗುತೆಚ್ಚರದಲಿ
ಕಂದಗೆ ಮೊಲೆಯೂಡಲು ಬಂದು
ಒಂದು ಕೈಯಲಿ ಕೂಸಿನ ಕೈಯ ಪಿಡಿದು ಮ-
ತ್ತೊಂದು ಕೈಯಲಿ ಎನ್ನ ಕುಚಗಳ ಪಿಡಿದಂಥ ||

ಹೆರರ ಮನೆಯೊಳುಂಡು ಹೆರರ ಮನೆಯೊಳಿದ್ದು
ಹೆರರ ಭೋಗಿಸುತಿದ್ದ ಗೂಳಿಯಂತೆ
ಇರುಳು ಹಗಲು ಎನ್ನದೆ ಮನೆಮನೆಗಳ
ತಿರುಗುತಲಿಹ ಪುರಂದರವಿಟ್ಠಲನೆಂಬ ||
***

pallavi

kaLLa sikkida kANire endina kaDu kaLLa sikkida kANire

anupallavi

kaLLa sikkida kANe innivana biDe salla elli nODalu brahmAdyarige sikkadanta

caraNam 1

kaDeda beNNeya tegediTTa bhaLika tanna uDiyoLariyadante pekku tandu
kaDEkOla tegedu bacciDe nA pOdare piDidu tOruta beNNeyanittu meddanta

caraNam 2

ondu rAtriyali malagu teccaradali kandage moleyUDalu bandu
ondu kaiyali kUsina kaiya piDitu mattondu kaiyali enna kucagaLa piDidanta

caraNam 3

herara maneyoLuNDu herara maneyoLiddu herara bhOgisutidda gULiyante
iruLu hagalu ennade mane manegaLa tirugutaliha purandara viTTalanemba
***