Showing posts with label ಳಳ- RSS- ಕೇಶವನ ಕಲ್ಪನೆಯ ಅರಿತುಕೊಳ್ಳೋಣ others rss KESHAVANA KALPANEYA ARITUKOLLONA rss. Show all posts
Showing posts with label ಳಳ- RSS- ಕೇಶವನ ಕಲ್ಪನೆಯ ಅರಿತುಕೊಳ್ಳೋಣ others rss KESHAVANA KALPANEYA ARITUKOLLONA rss. Show all posts

Friday, 24 December 2021

ಕೇಶವನ ಕಲ್ಪನೆಯ ಅರಿತುಕೊಳ್ಳೋಣ others rss KESHAVANA KALPANEYA ARITUKOLLONA rss

 

Bijapur pathasanchalana October 11, 2025

RSS song .

ಕೇಶವನ ಕಲ್ಪನೆಯ ಅರಿತುಕೊಳ್ಳೋಣ

ಆ ಧ್ಯೇಯಕಾಗಿ ಮುಡಿಪು ಈ ಬದುಕು ಎನ್ನೋಣ ||ಪ||


ವಿಶ್ವಗುರುವು ನೀನೆ ತಾಯಿ ಭಾರತಿ ಎಂದು

ಗೌರವಿಸಿತು ಜಗವು ನಿನ್ನ ಬಳಿಗೆ ಬಂದು

ಮೈಮರೆಸಿತು ವೈಭವವು ಮಕ್ಕಳನಂದು

ಮರೆವಿನಿಂದ ಎರಗಿತು ದಾಸ್ಯವು ಬಂದು ||೧||


ಕತ್ತಲೆಯಲ್ಲಿ ತುಂಬಿ ಮಕ್ಕಳ ಬದುಕು

ಕೇಶವನ ರೂಪದಲ್ಲಿ ಹೊಮ್ಮಿತು ಬೆಳಕು

ತಾಯಿಗಿಂತ ಮಿಗಿಲಲ್ಲ ಬಾಳು ಎಂದಿಗೂ

ದೇಹವಲ್ಲ ದೇಶವೆ ಅಮರ ಎಂದಿಗೂ ||೨||


ಕೇಶವನು ನಡೆಸಿದ ಗಾಢ ಚಿಂತನೆ

ಚಿಂತನೆಯಿಂದುದುಸಿತು ಸಂಘವು ತಾನೆ

ಶಾಖೆಯಿಂದ ಅಳಿಯಿತು ಭೇದಭಾವನೆ

ಮನಸುಗಳ ಬೆಸೆಯುವ ಅಮೋಘ ಕಲ್ಪನೆ ||೩||

***

kESavana kalpaneya aritukoLLONa

A dhyEyakaagi muDipu I baduku ennONa ||pa||


viSvaguruvu nIne tAyi BArati eMdu

gouravisitu jagavu ninna baLige baMdu

maimaresitu vaiBavavu makkaLanaMdu

mareviniMda eragitu dAsyavu baMdu ||1||


kattaleyalli tuMbi makkaLa baduku

kESavana rUpadalli hommitu beLaku

tAyigiMta migilalla bALu eMdigU

dEhavalla dESave amara eMdigU ||2||


kESavanu naDesida gADha ciMtane

ciMtaneyiMdudusitu saMGavu tAne

SAKeyiMda aLiyitu BEdaBAvane

manasugaLa beseyuva amOGa kalpane ||3||

***