Showing posts with label ಏತಕೆ ಗಿರಿಯಲ್ಲಿ ನೆಲೆಸಿದೆಯೊ ರಂಗ ramadasa.a ETAKE GIRIYALLI NELESIDEYO RANGA. Show all posts
Showing posts with label ಏತಕೆ ಗಿರಿಯಲ್ಲಿ ನೆಲೆಸಿದೆಯೊ ರಂಗ ramadasa.a ETAKE GIRIYALLI NELESIDEYO RANGA. Show all posts

Thursday, 2 December 2021

ಏತಕೆ ಗಿರಿಯಲ್ಲಿ ನೆಲೆಸಿದೆಯೊ ರಂಗ ankita ramadasa.a ETAKE GIRIYALLI NELESIDEYO RANGA



KRUTI-ಅಸೂರಿ ರಾಮಸ್ವಾಮಿ ಅಯ್ಯಂಗಾರ್ ankita ramadasa


ಏತಕೆ ಗಿರಿಯಲ್ಲಿ ನೆಲೆಸಿದೆಯೊ | ರಂಗ || ಪ 


ಭೀತಿಯೋ ಆಗ್ರಹವೋ ವೃತವೋ ರಿಪುಭಂಗ ಅ.ಪ 


ದಾನಿ ನೀನೆನ್ನುತಲಿ ದಿನದಿನವು ಲಕ್ಷಾಳಿ ದೀನ ಮನುಜರು ಬಂದು ಬಾಧಿಸುವರೆಂದೂ ಕಾನನಾಂತರದಲ್ಲಿ ನೆಲೆಸಿದೆಯೊ ನಾಕಾಣೆ ನೀನೆಲ್ಲಿ ಪೋದೊಡಂ ಬಿಡೆನೈಯ ರಂಗ 1 


ಜನನಿಬಿಡ ಪುರವೆಂದು ಮನಕೆ ಬೇಸರವಾಗಿ ವನದೊಳಗೆ ಚರಿಸಬೇಕೆನುತಲಿಹೆಯೋ ಮನುಜರ ಅನ್ಯಾಯ ದುಷ್ಕಾರ್ಯಗಳ ನೋಡಿ ಮನಕರಗಿ ಗಿರಿಯನ್ನು ಸೇರಿದೆಯೊ ರಂಗ 2 


ದೇಹದಂಡನೆಯಿಂದ ಇಹಪರದ ಸುಖವೆಂಬ ರಹಸ್ಯ ತತ್ವಾರ್ಥವನು ತಿಳಿಸಲಿಹೆಯೋ ಶ್ರೀಹರಿಯೇ ನಿನ್ನ ವೈಚಿತ್ರ್ಯವಸದಳವಯ್ಯ ದೇಹಧಾರಿಗೆ ಅಳವೆ ವರ್ಣಿಸಲು ನಿನ್ನಾ 3 


ಬೇವ ಮಾವನು ಗೈದೆ ಮಾವಬೇವನು ಗೈದೆ ಶಿವರೂಪದೆ ನಿಂದು ಕೇಶವನು ಎನಿಸಿದೆ ಭಾವುಕರು ಗೈಯದಾ ದೇವಾಲಯವ ಗೈದೆ ಮಾವಿನಕೆರೆರಂಗ ನಿನಗಾರು ಸಮರೋ 4 


ವನಜನಾಭನು ಎಂಬ ಅನುಮತಿಯನೀಯಲ್ಕೆ ಹನುಮದೇವನ ಪೂಜಿಸಿ ಮನವೊಲಿಸಿದೇ ಸನುಮತದಿ ಕಾಯೆನ್ನ ರಾಮದಾಸಾರ್ಚಿತನೆ ಅನುವಿಂದ ನೀನೆನ್ನ ಮನದೊಳಿರು ಹರಿಯೇ 5

***