ತುಂಗ ಭುಜಂಗನ ಫಣಿಯಲಿ ಕುಣಿದನು || ಪ ||
ಮಂಗಳ ಮೂರುತಿ ರಂಗ ಶ್ರೀ ಕೃಷ್ಣನು || ಅ.ಪ. ||
ಕಿಣಿ ಕಿಣಿ ತಾಳ ಝೇಂಕರಿಸುವ ತಂಬೂರಿ
ಕಣ ಕಣವೆಂಬ ಸುನಾದ ಮೃದಂಗವ
ಝಣಿ ಝಣಿಸುವ ಕಂಜರಿ ನಾದಗಳನು
ಅನುಸರಿಸುತ ಧಿಕ್ಕಿಟತ ಧಿಕ್ಕಿಟ ಎಂದು
ಗಗನವ ತುಂಬಿ ತುಂಬುರು ಗಂಧರ್ವರು
ಶಹನ ಅಠಾಣ ಶಂಕರಾಭರಣಗಳಿಂದ
ಸೊಗಸಿನಿಂದಲಿ ಗುಣಗಾನವ ಮಾಡಲು
ನಗಧರ ಕೃಷ್ಣನು ನಗು ಮೊಗದಿಂದಲಿ
ಪನ್ನಗ ಸತಿಯರು ಚಿನ್ನರ ತವಕದಿ
ಸನ್ನುತಿಸುತ ಆರತಿಯ ಬೆಳಗುತಿರೆ
ಉನ್ನತ ಗಗನದಿ ಸುಮನಸರೆಲ್ಲ ಪ್ರ
ಸನ್ನ ಹರಿಗೆ ಸುಮಮಳೆಗರೆಯುತಲಿರೆ
*********
ತುಂಗ ಭುಜಂಗನ ಫಣೆಯಲಿ ಕುಣಿದನು
ಮಂಗಳ ಮೂರುತಿ ರಂಗಾ||
ಗಿಣಿಗಿಣಿ ತಾಳ ಝೇಂಕರಿಸುವ ತಂಬೂರಿ
ಗಣಗಣವೆಂಬೊ ಸುನಾದ ಮೃದಂಗವ
ಝಣಿಝಣಿಸುವ ಗಂಜರಿ ನಾದಗಳನು
ಅನುಕರಿಸುತ ದಿಕ್ಕಿಟದಿಕ್ಕಿಟ ಎಂದು||
ಗಗನವ ತುಂಬಿ ತುಂಬುರು ಗಂಧರ್ವರು
ಶಹನ ಅಟಾಣ ಶಂಕರಾಭರಣಗಳಿಂದ
ಸೊಗಸಿನಿಂದಲಿ ಗುಣಗಾನವ ಮಾಡಲು
ನಗಧರ ಕೃಷ್ಣನು ನಗುಮೊಗದಿಂದಲಿ||
ಪನ್ನಗ ಸತಿಯರು ಚೆನ್ನಾದ ತವಕದಿ
ಸನ್ನುತಿಸುತ ಆರತಿಯ ಬೆಳಗುತಿರೆ
ಉನ್ನತ ಗಗನದಿ ಸುಮನಸರೆಲ್ಲ
ಪ್ರಸನ್ನ ಹರಿಗೆ ಸುಮ ಮಳೆಗರೆಯುತಲಿರೆ
*********
ಮಂಗಳ ಮೂರುತಿ ರಂಗ ಶ್ರೀ ಕೃಷ್ಣನು || ಅ.ಪ. ||
ಕಿಣಿ ಕಿಣಿ ತಾಳ ಝೇಂಕರಿಸುವ ತಂಬೂರಿ
ಕಣ ಕಣವೆಂಬ ಸುನಾದ ಮೃದಂಗವ
ಝಣಿ ಝಣಿಸುವ ಕಂಜರಿ ನಾದಗಳನು
ಅನುಸರಿಸುತ ಧಿಕ್ಕಿಟತ ಧಿಕ್ಕಿಟ ಎಂದು
ಗಗನವ ತುಂಬಿ ತುಂಬುರು ಗಂಧರ್ವರು
ಶಹನ ಅಠಾಣ ಶಂಕರಾಭರಣಗಳಿಂದ
ಸೊಗಸಿನಿಂದಲಿ ಗುಣಗಾನವ ಮಾಡಲು
ನಗಧರ ಕೃಷ್ಣನು ನಗು ಮೊಗದಿಂದಲಿ
ಪನ್ನಗ ಸತಿಯರು ಚಿನ್ನರ ತವಕದಿ
ಸನ್ನುತಿಸುತ ಆರತಿಯ ಬೆಳಗುತಿರೆ
ಉನ್ನತ ಗಗನದಿ ಸುಮನಸರೆಲ್ಲ ಪ್ರ
ಸನ್ನ ಹರಿಗೆ ಸುಮಮಳೆಗರೆಯುತಲಿರೆ
*********
ತುಂಗ ಭುಜಂಗನ ಫಣೆಯಲಿ ಕುಣಿದನು
ಮಂಗಳ ಮೂರುತಿ ರಂಗಾ||
ಗಿಣಿಗಿಣಿ ತಾಳ ಝೇಂಕರಿಸುವ ತಂಬೂರಿ
ಗಣಗಣವೆಂಬೊ ಸುನಾದ ಮೃದಂಗವ
ಝಣಿಝಣಿಸುವ ಗಂಜರಿ ನಾದಗಳನು
ಅನುಕರಿಸುತ ದಿಕ್ಕಿಟದಿಕ್ಕಿಟ ಎಂದು||
ಗಗನವ ತುಂಬಿ ತುಂಬುರು ಗಂಧರ್ವರು
ಶಹನ ಅಟಾಣ ಶಂಕರಾಭರಣಗಳಿಂದ
ಸೊಗಸಿನಿಂದಲಿ ಗುಣಗಾನವ ಮಾಡಲು
ನಗಧರ ಕೃಷ್ಣನು ನಗುಮೊಗದಿಂದಲಿ||
ಪನ್ನಗ ಸತಿಯರು ಚೆನ್ನಾದ ತವಕದಿ
ಸನ್ನುತಿಸುತ ಆರತಿಯ ಬೆಳಗುತಿರೆ
ಉನ್ನತ ಗಗನದಿ ಸುಮನಸರೆಲ್ಲ
ಪ್ರಸನ್ನ ಹರಿಗೆ ಸುಮ ಮಳೆಗರೆಯುತಲಿರೆ
*********