Showing posts with label ಕೃಷ್ಣಮೂರುತಿ ಎನ್ನ ರಕ್ಷಿಸೈ ಕಾರುಣ್ಯನಿಧೆ ಸಿರಿ namagiri. Show all posts
Showing posts with label ಕೃಷ್ಣಮೂರುತಿ ಎನ್ನ ರಕ್ಷಿಸೈ ಕಾರುಣ್ಯನಿಧೆ ಸಿರಿ namagiri. Show all posts

Thursday, 5 August 2021

ಕೃಷ್ಣಮೂರುತಿ ಎನ್ನ ರಕ್ಷಿಸೈ ಕಾರುಣ್ಯನಿಧೆ ಸಿರಿ ankita namagiri

..

kruti by ವಿದ್ಯಾರತ್ನಾಕರತೀರ್ಥರು vidyaratnakara teertharu 


ಕೃಷ್ಣಮೂರುತಿ ಎನ್ನ ರಕ್ಷಿಸೈ ಕಾರುಣ್ಯನಿಧೆ ಸಿರಿ

ಕೃಷ್ಣಮೂರುತಿ ಎನ್ನ ರಕ್ಷಿಸೈ ಪ


ನಾಗೇಂದ್ರಶಯನನೆ ನಾಗೇಂದ್ರ ಮರ್ದನನೆ

ನಾಗೇಂದ್ರಗೊಲಿದವನ್ಹಾಗೆ ನಾನಲ್ಲವೇನೊ 1


ತಾಪಸಸತಿ ಶಿಲಾರೂಪವ ಪೊಂದಿರಲು

ಶಾಪ ಬಿಡಿಸಿ ಅವಳ ಕಾಪಾಡಲಿಲ್ಲವೇನೊ 2


ಆ ನೀಚನಿಂದ ಯಜ್ಞಸೇನೆಗೆ ಬಂದ ಮಾನ

ಹಾನಿ ತಪ್ಪಿಸಿ ಅಭಿಮಾನಿಸಿ ರಕ್ಷಿಸಿದ 3


ಇಂದಿರೆಯರಸನೆ ವಂದಿಸಿ ಬೇಡುವೆನೊ

ಎಂದಿಗು ಎನ್ನ ಹೃದಯಮಂದಿರ ಬಿಡದಿರೊ 4


ವರನಾಮಗಿರಿ ಸಿರಿನರಹರಿಮೂರುತಿಯ

ಚರಣಸೇವಕನೆಂದು ಕರುಣ ಎನ್ನೊಳಗಿಟ್ಟು 5

***