ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುಭಕ್ತಿ ಮನವೆ ನೀ ಮಾಡು ಸ್ಥಿರ ಗುರುತಿಟ್ಟು ಬಾಹುದು ಪರಾತ್ಪರ ಸರಿಗಾಣೆನೊ ಪುಣ್ಯಕೆ ನೋಡಿದರ ಕರಕೊಂಬುದಿದೆ ಸುಖ ಸಜ್ಜನರ 1
ಹಿಡಿಬೇಕು ಸದಾ ಗುರುಭಾವದೃಢ ಉಪಾಧಿ ಜಡ ಪಡಕೊಂಬುದು ಮಾಡಬಾರದು ತಡ ಒಡಲ ಹೊಕ್ಕರ ಸದ್ಗುರು ಕೈಯಬಿಡ 2
ಗುರುನಾಮ ನಿಧಾನ ನೆನಿಯೊ ಸದ ಸುರಲೋಕಕೆ ಪಾವನ ಮಾಡುವದ ಪರತತ್ವಕೆ ಪಾರನೆದೋರುವದ ಸ್ಮರಿಸಿನ್ನು ಮಹಿಪತಿ ಮುಖ್ಯವಿದ 3
****