Wednesday, 1 September 2021

ಗುರುಭಕ್ತಿ ಮನವೆ ನೀ ಮಾಡು ಸ್ಥಿರ ಗುರುತಿಟ್ಟು ಬಾಹುದು ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಗುರುಭಕ್ತಿ ಮನವೆ ನೀ ಮಾಡು ಸ್ಥಿರ ಗುರುತಿಟ್ಟು ಬಾಹುದು ಪರಾತ್ಪರ ಸರಿಗಾಣೆನೊ ಪುಣ್ಯಕೆ ನೋಡಿದರ ಕರಕೊಂಬುದಿದೆ ಸುಖ ಸಜ್ಜನರ 1 

ಹಿಡಿಬೇಕು ಸದಾ ಗುರುಭಾವದೃಢ ಉಪಾಧಿ ಜಡ ಪಡಕೊಂಬುದು ಮಾಡಬಾರದು ತಡ ಒಡಲ ಹೊಕ್ಕರ ಸದ್ಗುರು ಕೈಯಬಿಡ 2 

ಗುರುನಾಮ ನಿಧಾನ ನೆನಿಯೊ ಸದ ಸುರಲೋಕಕೆ ಪಾವನ ಮಾಡುವದ ಪರತತ್ವಕೆ ಪಾರನೆದೋರುವದ ಸ್ಮರಿಸಿನ್ನು ಮಹಿಪತಿ ಮುಖ್ಯವಿದ 3

****


No comments:

Post a Comment