Wednesday, 1 September 2021

ನಮೋ ನಮೋ ಮಾತೇ ಎನ್ನಯ ಶ್ರಮಾವ ಕÀಳಿ ದ್ಯೋತೆ ankita gurujagannatha vittala

 ..

ನಮೋ ನಮೋ ಮಾತೇ ಎನ್ನಯ

ಶ್ರಮಾವ ಕÀಳಿ ದ್ಯೋತೆ ಪ


ಕ್ಷಮಾತಳದಿ ನಿ ಸುಮಾಹಕಲ್ಪ

ದೃಮೋಪಮಾಗಿಹೆ ಸಮಾನ ಸೋತ್ತಮೆ ಅ.ಪ


ರಮಾಧವನರಾಣೀ ನೀ

ತಮೋರೂಪ ಕಲ್ಯಾಣೀ

ನಮಿಪೆ ನಿನ್ನನು

ಕ್ಷಮಾದಿಪತ್ಯವ

ಮಮೈವ ಪಾಲಿಸು

ವಿಮಾನ ನಿಲಯಳೆ 1


ಧರಾತಳದಿ ಬಂದೂ ನೀ

ದುರಾಳ ತತಿ ಕೊಂದೂ

ಭರಾದಿ ಲೋಕದಿ

ಮೆರಾದ ನಿನ್ನನು

ಶಿರಾದಿ ನಮಿಸಿದೆ

ವರಾವ ಪಾಲಿಸು 2


ಪಿತಾಮಹನ ಮಾತೇ ನೀ

ವಿತಾತ ಗುಣ ಖ್ಯಾತೇ

ದಾತಾ ಗುರುಜಗ -

ನ್ನಾಥಾ ವಿಠಲನ್ನ

ಪ್ರೀತಿಯ ಮಾನಿನಿ

ದೂತಾನ ಪೊರೆವೋದು 3

***


No comments:

Post a Comment