Showing posts with label ಹರಿಯ ನೆನಸಿದ ದಿವಸ ಶುಭಮಂಗಳಾ ಹರಿಯ ನೆನಸಿದ vijaya vittala. Show all posts
Showing posts with label ಹರಿಯ ನೆನಸಿದ ದಿವಸ ಶುಭಮಂಗಳಾ ಹರಿಯ ನೆನಸಿದ vijaya vittala. Show all posts

Thursday, 17 October 2019

ಹರಿಯ ನೆನಸಿದ ದಿವಸ ಶುಭಮಂಗಳಾ ಹರಿಯ ನೆನಸಿದ ankita vijaya vittala

ವಿಜಯದಾಸ
ಹರಿಯ ನೆನಸಿದ ದಿವಸ ಶುಭಮಂಗಳಾ ಪ

ಹರಿಯ ನೆನಸಿದ ದಿವಸ ಅವಮಂಗಳಾ ಅ.ಪ

ಹರಿಯ ನೆನಸಿದ ನಿಮಿಷ ಆವಾಗಲೂ ಹರುಷ |
ಹರಿಯ ನೆನಸದ ದಿವಸ ದುರ್ಮಾಸನಾ ||
ಹರಿಯ ನೆನಸಿದ ಘಳಿಗೆ ಮುಕ್ತಿಗೆ ಬೆಳವಣಿಗೆ |
ಹರಿಯ ನೆನಸದ ಘಳಿಗೆ ಯಮನ ಬಳಿಗೆ 1

ಹರಿಯ ನೆನಸಿದ ಪ್ರಹರ ಕುಲಕೋಟಿ ಉದ್ಧಾರ |
ಹರಿಯ ನೆನಸದ ಪ್ರಹರ ಹೀನಾಚಾರ ||
ಹರಿಯ ನೆನಸಿದ ಹಗಲು ಮುಕ್ತಿಗೆ ಬಲು ಮಿಗಿಲು |
ಹರಿಯ ನೆನಸದ ಹಗಲು ನರಕಕ್ಕೆ ತಗಲು 2

ಹರಿಯ ನೆನಸಿದ ಮಧ್ಯಾಹ್ನ ಸುಧಾಪಾನ |
ಕಾನನ ||
ಹರಿಯ ನೆನಸಿದ ಸಾಯಂಕಾಲವೇ ಸುಕಾಲ |
ಹರಿಯ ನೆನಸದ ಸಾಯಂಕಾಲವೇ ದುಷ್ಕಾಲ3

ಹರಿಯ ನೆನಸಿದ ದಿನವು ನರನಿಗೆ ಸಮ್ಮತವು |
ಹರಿಯ ನೆನಸದ ದಿನವು ದುರ್ದಿನವು ||
ಹರಿಯ ನೆನಸಿದ ನರÀನು ಅವನೇ ಕೃತಕೃತ್ಯ |
ಹರಿಯ ನೆನಸದ ನರಜನ್ಮ ವ್ಯರ್ಥಾ 4

ಹರಿಯ ನೆನಸಿದ ರಾತ್ರಿ ತೀರ್ಥಕ್ಷೇತ್ರದ ಯಾತ್ರೆ |
ಹರಿಯ ನೆನಸದ ರಾತ್ರಿ ಪಂಚಪಾತ್ರಿ ||
ಸಿರಿ ವಿಜಯವಿಠ್ಠಲನಂಘ್ರಿ |
ಮುರಿಯದೇ ಸದಾ ನೆನೆವವನೆ ಮುಕ್ತ 5
************

ಹರಿಯ ನೆನಸಿದ ದಿವಸ ಶುಭಮಂಗಳಾ|| ಪ||
ಹರಿಯ ನೆನಸದ ದಿವಸ ಅವಮಂಗಳಾ  ||ಅ.ಪ||

ಹರಿಯ ನೆನಸಿದ ಘಳಿಗೆ ಮುಕ್ತಿಗೆ ಬೆಳವಣಿಗೆ |
ಹರಿಯ ನೆನಸದ ಘಳಿಗೆ ಯಮನ ಬಳಿಗೆ|  |1|

ಹರಿಯ ನೆನಸಿದ ಪ್ರಹರ ಕುಲಕೋಟಿ ಉದ್ಧಾರ |
ಹರಿಯ ನೆನಸದ ಪ್ರಹರ ಹೀನಾಚಾರ ||

ಹರಿಯ ನೆನಸಿದ ಹಗಲು ಮುಕ್ತಿಗೆ ಬಲು ಮಿಗಿಲು |
ಹರಿಯ ನೆನಸದ ಹಗಲು ನರಕಕ್ಕೆ ತಗಲು|| |2|

ಹರಿಯ ನೆನಸಿದ ಮಧ್ಯಾಹ್ನ ಸುಧಾಪಾನ |
ಹರಿಯ ನೆನಸದ ಮಧ್ಯಾಹ್ನವೇ ಕಾನನ ||
ಹರಿಯ ನೆನಸಿದ ಸಾಯಂಕಾಲವೇ ಸುಕಾಲ |
ಹರಿಯ ನೆನಸದ ಸಾಯಂಕಾಲವೇ ದುಷ್ಕಾಲ|||3|

ಹರಿಯ ನೆನಸಿದ ದಿನವು ನರನಿಗೆ ಸಮ್ಮತವು |
ಹರಿಯ ನೆನಸದ ದಿನವು ದುರ್ದಿನವು ||
ಹರಿಯ ನೆನಸಿದ ನರನು ಅವನೇ ಕೃತಕೃತ್ಯ |
ಹರಿಯ ನೆನಸದ ನರಜನ್ಮ ವ್ಯರ್ಥಾ|| |4|

ಹರಿಯ ನೆನಸಿದ ರಾತ್ರಿ ತೀರ್ಥಕ್ಷೇತ್ರದ ಯಾತ್ರೆ |
ಹರಿಯ ನೆನಸದ ರಾತ್ರಿ ಮದ್ಯ ಪಾನ ಪಾತ್ರೆ ||
ಪುರಂದರನ ಪ್ರಿಯ ಸಿರಿ ವಿಜಯವಿಠ್ಠಲನಂಘ್ರಿ |
ಮರಿಯದೇ ಸದಾ ನೆನೆವವನೆ ಮುಕ್ತ ||
***

pallavi

hariya nenesida divasa shubhamangaLa

anupallavi

hariye nenesada divasa avamangaLa

caraNam 1

hariya nenesida nimiSa AvAgalU haruSa hariya nenesada divasa durmAnasA
haritye nenesidaghaLide muktige beLavaNige hariya nenesadagaLige yamana baLLige

caraNam 2

hariya nenesida prahara kulakOTi uddhAra hariye nenesada prahara hInAcAra
hariya nenesida hagalu muktige balu migilu hariya nenesada hagalu narakakke tagalu

caraNam 3

hariya nenesida madhyAnna sudhApAnna hariye nenesada madhyAnnavE kAnnana
hariya nenesida sAyankAlavE sukhAda hariya nenesad sAyankAlavE duSkAla

caraNam 4

hariya nenesida dinavu naranige sammatavu hariya nenesada dinavu durdinavu
hariya nenesida naranu avanE kratakrtya hariya nenesada narajanma vyartha

caraNam 5

hariya nenesida rAtri tIrtha kSEtrada yAtri hariya nenesada rAtri pancapAtri
purandarana priya siri vijayaviThananghri mareyade sadA neneyavane mukta
***


ಹರಿಯ ನೆನಸಿದ ದಿವಸ ಶುಭಮಂಗಳಾ|| ಪ||
ಹರಿಯ ನೆನಸದ ದಿವಸ ಅವಮಂಗಳಾ  ||ಅ.ಪ||

ಹರಿಯ ನೆನಸಿದ ಘಳಿಗೆ ಮುಕ್ತಿಗೆ ಬೆಳವಣಿಗೆ |
ಹರಿಯ ನೆನಸದ ಘಳಿಗೆ ಯಮನ ಬಳಿಗೆ|  |1|

ಹರಿಯ ನೆನಸಿದ ಪ್ರಹರ ಕುಲಕೋಟಿ ಉದ್ಧಾರ |
ಹರಿಯ ನೆನಸದ ಪ್ರಹರ ಹೀನಾಚಾರ ||

ಹರಿಯ ನೆನಸಿದ ಹಗಲು ಮುಕ್ತಿಗೆ ಬಲು ಮಿಗಿಲು |
ಹರಿಯ ನೆನಸದ ಹಗಲು ನರಕಕ್ಕೆ ತಗಲು|| |2|

ಹರಿಯ ನೆನಸಿದ ಮಧ್ಯಾಹ್ನ ಸುಧಾಪಾನ |
ಹರಿಯ ನೆನಸದ ಮಧ್ಯಾಹ್ನವೇ ಕಾನನ ||

ಹರಿಯ ನೆನಸಿದ ಸಾಯಂಕಾಲವೇ ಸುಕಾಲ |
ಹರಿಯ ನೆನಸದ ಸಾಯಂಕಾಲವೇ ದುಷ್ಕಾಲ|||3|

ಹರಿಯ ನೆನಸಿದ ದಿನವು ನರನಿಗೆ ಸಮ್ಮತವು |
ಹರಿಯ ನೆನಸದ ದಿನವು ದುರ್ದಿನವು ||

ಹರಿಯ ನೆನಸಿದ ನರನು ಅವನೇ ಕೃತಕೃತ್ಯ |
ಹರಿಯ ನೆನಸದ ನರಜನ್ಮ ವ್ಯರ್ಥಾ|| |4|

ಹರಿಯ ನೆನಸಿದ ರಾತ್ರಿ ತೀರ್ಥಕ್ಷೇತ್ರದ ಯಾತ್ರೆ |
ಹರಿಯ ನೆನಸದ ರಾತ್ರಿ ಮದ್ಯ ಪಾನ ಪಾತ್ರೆ ||
ಪುರಂದರನ ಪ್ರಿಯ ಸಿರಿ ವಿಜಯವಿಠ್ಠಲನಂಘ್ರಿ |
ಮರಿಯದೇ ಸದಾ ನೆನೆವವನೆ ಮುಕ್ತ ||
***