Showing posts with label ಕರುಣದಿ ಬಂದು ನಿನ್ನ ಚರಣ ಕಮಲವೆನ್ನ sirivatsankita. Show all posts
Showing posts with label ಕರುಣದಿ ಬಂದು ನಿನ್ನ ಚರಣ ಕಮಲವೆನ್ನ sirivatsankita. Show all posts

Thursday, 5 August 2021

ಕರುಣದಿ ಬಂದು ನಿನ್ನ ಚರಣ ಕಮಲವೆನ್ನ ankita sirivatsankita

 ..

kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru) 


ಕರುಣದಿ ಬಂದು ನಿನ್ನ ಚರಣ ಕಮಲವೆನ್ನ

ಶಿರದ ಮೇಲಿಟ್ಟು ನೀ ಪೊರಿಯೊ ಕೃಪಾರಸ ಸುರಿಯೋ

ಗರುಡಧ್ವಜ ನೀನು ಸ್ಮರಮಣ ನಿನ್ನ ಭಕುತರ ಸುರಧೇನೆಂದು

ಕರೆವರು ನಿನ್ನನು ಪ


ಸರಸಿಯೊಳ್ಕರಿರಾಜ ಭರದಿಂದ ತನ್ನವುದ್ಧರಿಸೆಂದು ಮೊರೆಯಿಡೆ

ಪೊರೆದೆಯಲ್ಲೊ ಶಿರಿಯೊಳುನುಡಿಯದೋ ಶರಣಾಗತರನ್ನು

ಪೊರೆವೆನೆಂಬ ನಿಜ ಬಿರಿದನು ಮೆರಿಸಿದಿ1


ಆಗಮವಂದಿತ ನಾಗಭೂಷಣ ತಾತ

ಮೇಘವಾಹನ ಸುತನ ಬ್ಯಾಗ ರಕ್ಷಿಸಿದಿ

ಭಾಗವತರ ಪ್ರಿಯ ಜಾಗುಮಾಡದೆ ಎನ್ನ-

ದಾಗಲು ರಕ್ಷಿಸೆಂದು ಬಾಗಿ ಬೇಡುವೆನು 2


ಕಾವನು ನೀನಲ್ಲದೆ ಯಾವ ದೇವರನು ನಾ

ಆವಲ್ಯು ಕಾಣೆನು ಭಾವಜಜನಕನೆ

ಶ್ರೀವಾಸುದೇವನ ಗೋವೃಂದ ರಕ್ಷಕನೆ

ಭಾವಿ ಬ್ರಹ್ಮನ ಪತಿ ಶ್ರೀವತ್ಸಾಂಕಿತನೆ 3

***