Showing posts with label ಎಂಥ ಶ್ರೀಮಂತಾನಂತನೆ ಶ್ರೀಕಾಂತೆಯ prasannavenkata ENTHA SHREEMANTANANTANE SRIKANTEYA. Show all posts
Showing posts with label ಎಂಥ ಶ್ರೀಮಂತಾನಂತನೆ ಶ್ರೀಕಾಂತೆಯ prasannavenkata ENTHA SHREEMANTANANTANE SRIKANTEYA. Show all posts

Tuesday, 19 November 2019

ಎಂಥ ಶ್ರೀಮಂತಾನಂತನೆ ಶ್ರೀಕಾಂತೆಯ ankita prasannavenkata ENTHA SHREEMANTANANTANE SRIKANTEYA











GAYATHRI TUMKUR VENKATESH


by ಪ್ರಸನ್ನವೆಂಕಟದಾಸರು

ದಾಸಶ್ರೇಷ್ಠ ಪ್ರಸನ್ನವೆಂಕಟದಾಸರ ಈ ರಚನೆಯನ್ನು (Tongue Twister) ಬಹಳ ಅದ್ಭುತವಾಗಿ ಹಾಡಿದ್ದಾರೆ… ಕುತೂಹಲದಿಂದ ಅಂತರ್ಜಾಲದ ಮೊರೆ ಹೋಗಿ ಆ ಹಾಡಿನ ಸಾಹಿತ್ಯ ಮತ್ತು ಭಾವಾರ್ಥವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾಯ್ತು… 


ಹಾಡು : 
ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ 
ಎಂಥಾ ಶ್ರೀಮಂತಾನಂತನೋ ||ಪ||

ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿಮೊಮ್ಮಗಶಣ್ಮಶಿರಮ್ಮ
ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ ||

ಅಂಬರುಹಂಗಳ ಅಂಗನಂತಗತ ಮಂಗಳಪಾಂಗ ವಿಶ್ವಂಗಳ ಮಂಗಳ 
ಸಿಂಗರದಂಗುಟ ಸಂಗದ ಗಂಗಜ ಕಂಗಳಘಂಗಳ ಹಿಂಗಿಪಳಾಂಗಾ ||

ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ 
ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ ||

ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ
ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ ||

ಅಂಬರದುಂಬಿಗೆ ತುಂಬೆವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬಕೃಪಾಂಬುಧಿ
ಇಂಬಕದಂಬಕಬಿಂಬ ಪ್ರಸನ್ವೇಂಕಟನಂಬಿದ ಬಿಂಬನಿವನೆಂಬ ಕುಟುಂಬಿ ||
***

ಸ್ಥೂಲಾರ್ಥ : ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ = ಶ್ರೀಹರಿಯು ಎಂಥಾ ಮಹಿಮೆಯುಳ್ಳವನೆಂದು ದಾಸರು ವರ್ಣಿಸಲಾರಂಭಿಸುತ್ತಾರೆ ಎಂಥಾ ಶ್ರೀಮಂತನು, ಅನಂತನಾದ ಶ್ರೀರಮಾ ರಮಣನು

ಬೊಮ್ಮನು ಹೆಮ್ಮಗ ಮೊಮ್ಮಮೃಢರಿಮೊಮ್ಮಗಶಣ್ಮಶಿರಮ್ಮ
ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ ||

ಅರ್ಥ : ಬೊಮ್ಮನು ಹೆಮ್ಮಗ = ಚತುರ್ಮುಖ ಬ್ರಹ್ಮನು ಹಿರಿಯಮಗ, ಸೃಷ್ಟಿಯಾದಿಯಲ್ಲಿ ಪರಮಾತ್ಮನ ಕಮಲನಾಭದಿಂದ ಹೊರಹೊಮ್ಮಿದ ಚೊಚ್ಚಲ ಮಗ ಹಿರಿಯಚೇತನರಲ್ಲಿ ಹಿರಿಯನಾದ ಬ್ರಹ್ಮ, ಮೊಮ್ಮಮೃಢ : ಚತುರ್ಮುಖನ ಮಗನಾಗಿ ರುದ್ರನ ಹುಟ್ಟು, ಅದಕ್ಕೆ ರುದ್ರನ ಅಜ್ಜ ಹರಿ, ರುದ್ರ ಹರಿಗೆ ಮೊಮ್ಮಗ, ಮರಿಮೊಮ್ಮಗಶಣ್ಯಶಿರ : ರುದ್ರನ ಮಗನಾದ ಷಣ್ಮುಖ (ಷಟ್+ಶಿರ) ಮೊಮ್ಮಗನ ಮಗ = ಮರಿಮೊಮ್ಮಗ,  ಪರಮ್ಮ = ಪರಮ  ಉತ್ಕೃಷ್ಟನಾದವ, ಅಮ್ಮರಸಮ್ಮೋಹ = ಅಮರ ಸಮೂಹ, ಶಬ್ಧ ಆಡುಭಾಷೆಗಳಿಗನುಗುಣವಾಗಿ ದಾಸರು ಅಮ್ಮರಸಮ್ಮೋಹ ಎಂಬ ತದ್ಭವರೂಪದ ಛಾಯೆಯಲ್ಲಿ ಹೇಳಿದ್ದಾರೆ, ನಿಮ್ಮಣುಗಮ್ಮರು = ಈ ಅಮರ ಸಮೂಹವು ನಿನ್ನ ಅಣುಗರು = ನಿನ್ನ ಸೇವಕರು, ಅಮ್ಮರು = ಎನ್ನುವರು, ಅಂಥವನಾದ ನಿನಗೆ… ನಮ್ಮೊ ಪರಮ್ಮೊ ಮಹಮ್ಮ = ನಮೋ ನಮ್ಮೆಲ್ಲರ ಪರಮ ಮಹಿಮನಾದವನೆ

ಅಂಬರುಹಂಗಳ ಅಂಗನಂತಗತ ಮಂಗಳಪಾಂಗ ವಿಶ್ವಂಗಳ ಮಂಗಳ 
ಸಿಂಗರದಂಗುಟ ಸಂಗದ ಗಂಗಜ ಕಂಗಳಹಂಗಳ ಹಿಂಗಿಪಳಾಂಗಾ ||

ಅರ್ಥ : ಅಂಬು+ರುಹ = ನೀರಿನಲ್ಲಿರುವ ಗಿಡ = ಕಮಲ ಅಂಗ = ಶರೀರ = ಕಮಲದಲ್ಲಿ ಬಂದಂಥಾ ಶರೀರ = ಬ್ರಹ್ಮ, ಅಂಗ = ದೇಹ, ಒಟ್ಟಾರೆ ಬ್ರಹ್ಮಾಂಡ, ಅನಂತಗತ = ಇಂತಹ ಬ್ರಹ್ಮಾಂಡಳು ಅನಂತಗತ, ಅಸಂಖ್ಯಾಕವಾಗಿರುವ ಬ್ರಹ್ಮಾಂಡಕ್ಕೆ ಮಂಗಳಾಂಗ = ಮಂಗಳ ಸ್ವರೂಪಿಯಾದ ಹರಿ, ವಿಶ್ವಂಗಳ ಮಂಗಳ = ಸೃಷ್ಟಿಸಿದ ವಿಶ್ವಕ್ಕೆ ಮಂಗಳವನ್ನೀಯಲೋಸುಗ, ಸಿಂಗರದುಂಗುಟ = ಶೃಂಗಾರವಾದ ಅಂಗುಟ = ಉಂಗುಟ, ಶ್ರೀಹರಿಯ ಪಾದದ ಅಂಗುಟಾಗ್ರವು ಶ್ರೀಹರಿಯ ಸ್ವರೂಪವೇ ಆಗಿದೆ. ಅದರ ಸಂಗದ = ಸ್ಪರ್ಶದಿಂದ, ಗಂಗಜ = ಗಂಗಾ ನದಿಯು ಹುಟ್ಟಿತು, ಕಂಗಳಘಂಗಳ = ಗಂಗೆಯ ದೃಷ್ಟಿಯು ಇಹದಲ್ಲಿ ಭಕ್ತರ ಅಘ ಹಿಂಗಿಸುವಳಾಗಿರುವಳು.

ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ ಭವಾರ್ಣ
ಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ ||

ಅರ್ಥ : ಪನ್ನಗಪನ್ನಶಯನ್ನ = ಸರ್ಪವನ್ನು ಹಾಸಿಗೆಮಾಡಿಕೊಂಡವ, ಮಹೋನ್ನತ ಪನ್ನಗವರವಾಹನ್ನ = ಮಹತ್ತರವಾದ ಪನ್ನಗವರ  = ಸರ್ಪಕ್ಕಿಂತ ಶ್ರೇಷ್ಟನಾದ ಗರುಡವಾಹನ್ನ, ರತುನ್ನ = ಗುಣಗಳ ರಾಶಿ, ರತ್ನ, ಭವಾರ್ಣ
ಸುಖೋನ್ನತ = ಭವವೆಂಬ ಸಾಗರಕ್ಕೆ ಉನ್ನತವಾದ ಸುಖವೀವ, ರನ್ನಗ ರನ್ನಿಜ = ವಿಶೇಷ ರತ್ನ = ಕಾಂತಿಯನ್ನು ಕೊಡುವವ ರನ್ನಗ, ಅಂಧಕಾರ ಕಳೆಯುವ ಕಾಂತಿ ನೀಡುವವ ರನ್ನಿಜ = ಇಂಥಾ ನೀನಿರುವಾಗ ಇನ್ನ್ಯಾರು ಒಡೆಯನಾಗಲು ಸಾಧ್ಯ.

ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ
ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ ||

ಅರ್ಥ : ಬಲ್ಲ ಕೈವಲ್ಯಜ್ಞರ ವಲ್ಲಭ = ಜ್ಞಾನಿಗಳ, ಮೋಕ್ಷಕ್ಕೆ ಅರ್ಹರಾದವರ ವಲ್ಲಭ, ದೊರೆಯಾದ ಹರಿ, ಸುಲ್ಲಭ = ಹರಿಯ ಅರಿತವರಿಗೆ ಸುಲಭ, ಬಲ್ಲಿದ ಖುಲ್ಲರ ದಲ್ಲಣನಲ್ಲದೆ = ಬಲ್ಲಿದ = ವಲಿಷ್ಠ ಹರಿಯು, ಖುಲ್ಲರ = ದೈತ್ಯರ (ತನ್ಮೂಲಕ ಸಾಧನೆಗೆ ಶತ್ರುಗಳಾದ ಅರಿಷಡ್ವರ್ಗಗಳನ್ನೂ ಕೂಡ) ಎದೆಯನ್ನು ದಲ್ಲಣ = ನಡುಗಿಸುವ ಸಾಹಸಿ, ಒಬ್ಬನೆ ಧೈರ್ಯವಂತ ಜಗದಲಿ. ಹುಲ್ಲದು ನಿನ್ನೊಳವಲ್ಲ ನಿನ್ನಲ್ಲದೆ = ಆ ಧೈರ್ಯವು ಹರಿಗಲ್ಲದೆ, ಹುಲು ಜೀವರಿಗೆ ಆಗುತ್ತದೆಯೊ?

ಅಂಬರದುಂಬಿಗೆ ತುಂಬೆವಿಶ್ವಂಬಸುರದಿಂಬಿಲಿನಿಂಬಿಟ್ಟುಕೊಂಬಕೃಪಾಂಬುಧಿ
ಇಂಬಕದಂಬಕಬಿಂಬ ಪ್ರಸನ್ವೇಂಕಟನಂಬಿದ ಬಿಂಬನಿವನೆಂಬ ಕುಟುಂಬಿ ||

ಅರ್ಥ : ಪ್ರಳಯಕಾಲದಲ್ಲಿನ ಹರಿ ಮಹಿಮೆಯನ್ನು ಇಲ್ಲಿ ಹೇಳಿದ್ದಾರೆ. ಅಂಬರದುಂಬಿಗೆತುಂಬೆ = ಇಡೀ ವಿಶ್ವವು (ಅಂಬರವನ್ನು ವಿಶ್ವಕ್ಕೆ ಹೋಲಿಸಿ) ತುಂಬಿತುಂಬೆ = ಪ್ರಳಯಜಲಧಿಯಲ್ಲಿ ತುಂಬಿ ತುಳುಕಾಡಿದಾಗ, ವಿಶ್ವಮ್ = ಈ ಬ್ರಹ್ಮಾಂಡವನ್ನು ಬಸುರದಿ = ಹರಿಯು ಗರ್ಭದಲ್ಲಿ, ಇಟ್ಟುಕೊಂಬ ಕೃಪಾನಿಧೇ = ಆಶ್ರಯ (ಇಂಬು), ಬ್ರಹ್ಮಾಂಡಕ್ಕೆ ಆಶ್ರಯವನ್ನು, ಗರ್ಭದಲ್ಲಿ ಹುದುಗಿಟ್ಟುಕಲ್ಳುವಬು, ಇಂತಹ ವ್ಯಾಪಾರವು ಅತ್ಯಂತ ದಯಾಳುವಾದವನಿಗೆ ಉಂಟು, ಕೃಪಾ ಸಾಗರನಾದ ಹರಿಯೇ ಆತನು, ಇಂಬಕದಂಬಕ = ಇಂಬ = ಆಶ್ರಯ, ಕದಂಬಕ = ಸಮೂಹ, ಸಕಲ ಜೀವ ಸಮೂಹಕ್ಕೆ ಆಶ್ರಯನಾಗಿ ಅಲ್ಲದೆ ಬಿಂಬನಾಗಿ ಇರುವವ, ಬಿಂಬ ಪ್ರಸನ್ವೇಂಕಟ = ಬಿಂಬ ಸ್ವರೂಪಿಯಾಗಿರುವ ದಾಸರ ಬಿಂಬರೂಪಿಯೂ ಆದ ಪ್ರಸನ್ವೇಂಕಟನು ನಂಬಿದ ಬಿಂಬನಿವನೆಂಬ = ಶ್ರದ್ಧೆಯಿಂದ ನಂಬಿದವರಿಗೆ ಬಿಂಬನಂತೆ = ಅತ್ಯಂತ ಸಮೀಪದಲ್ಲಿರುವ ಎಂಬ ವಿಚಾರವನ್ನು ಮನಗಾಣಿಸಿ ವಿಶ್ವ ಕುಟುಂಬಿಯೆಂಬ ಪಾತ್ರವನ್ನು ಆಪ್ತರಿಗೆ ಪರಿಚಯಿಸಿಕೊಡುವನು. ಅಪರೋಕ್ಷ ಜ್ಞಾನವನ್ನಿತ್ತು ರಕ್ಷಿಸುವನು ಎಂಬ ತಾತ್ಪರ್ಯ.

CLICK HERE TO
LISTEN TO ANANTA KULKARNI

ಎಂಥ ಶ್ರೀಮಂತಾನಂತನೆ ಶ್ರೀಕಾಂತೆಯ ಕಾಂತಎಂಥ ಶ್ರೀಮಂತಾನಂತನೆ ಪ.

ಬೊಮ್ಮನು ಹೆಮ್ಮಗ ಮೊಮ್ಮ ಮೃಡಮ್ಮರಿಮೊಮ್ಮ ಶಚಿಮನೋರಮ್ಮ ಸ್ಮರಮ್ಮಗಅಮ್ಮರಸಮ್ಮೂಹ ನಿಮ್ಮನುಗಮ್ಯರುನಮ್ಮೊ ನಮ್ಮೊ ಪರಮ್ಮ ಮಹಿಮ್ಮ 1

ಪನ್ನಗಾಪನ್ನ ಶಯನ್ನಕ್ಕೆ ಬೆನ್ನೀವಪನ್ನಗಾಶನ್ನ ವಾಹನ್ನ ರತುನ್ನ ಭವನ್ನ ಸುಖೋನ್ನತರನ್ನಾಗರ ನಿಜನಿನ್ನಿದಿರಿನ್ನಾರೆನ್ನೊಡೆಯನ್ನೆ 2

ಬಲ್ಲ ಕೈವಲ್ಯಜÕರೊಲ್ಲಭ ಸುಲ್ಲಭಬಲ್ಲಿದಕ್ಷುಲ್ಲರದಲ್ಲಣನಲ್ಲವೆಹುಲ್ಲಲುಗಲಳವಲ್ಲ ನೀನಿಲ್ಲದೆಸಲ್ಲದು ಸೊಲ್ಲದು ನಿಲ್ಲದಿದೆಲ್ಲ 3

ಅಂಗಕೆ ಹೆಂಗಳಾಲಿಂಗನಾಂತ ಗಡಮಂಗಳಾಪಾಂಗ ವಿಶ್ವಂಗಳ ಮಂಗಳಸಿಂಗರದುಂಗುಟ ಸಂಗದಗಂಗೆ ಜಗಂಗಳಘಂಗಳ ಹಿಂಗಿಪಳು ರಂಗ 4

ಅಂಬರದಂಬುಗೆ ತುಂಬೆ ವಿಶ್ವಂ ಬಸುರಿಂಬಿಲಿ ಇಂಬಿಟ್ಟುಕೊಂಬ ಕೃಪಾಂಬುಧಿಡಿಂಬಕದಂಬದ ಬಿಂಬ ಪ್ರಸನ್ವೆಂಕಟನಂಬಿದರ್ಗಿಂಬೀವನೆಂಬ ಕುಟುಂಬಿ 5
***