Showing posts with label ವಿಜಯಗುರು ನಿನ್ನಡಿಯ ಭಜಿಸುವೆನೋ gopalakrishna vittala vijaya dasa stutih. Show all posts
Showing posts with label ವಿಜಯಗುರು ನಿನ್ನಡಿಯ ಭಜಿಸುವೆನೋ gopalakrishna vittala vijaya dasa stutih. Show all posts

Thursday, 26 December 2019

ವಿಜಯಗುರು ನಿನ್ನಡಿಯ ಭಜಿಸುವೆನೋ ankita gopalakrishna vittala vijaya dasa stutih

ಅಂಬಾಬಾಯಿ
ವಿಜಯಗುರು ನಿನ್ನಡಿಯ ಭಜಿಸುವೆನೋ ಸತತದಲಿ
ವಿಜಯ ಕೊಡು ದಾಸತ್ವದಿ ಪ.

ಪಾದ ಭಜನೆಯ ಮಾಳ್ಪಂಥ ಮತಿ
ರುಜು ಮಾರ್ಗ ತೋರಿ ಸಲಹೋ ದಯದಿ ಅ.ಪ.

ವಿಧಿ ವಶದಿ ಘನ ಕಷ್ಟ
ಒದಗುತಿರೆ ಚರಿಸಿ ಯಾತ್ರೆ
ಪದುಮನಾಭನ ದಯದಿ ಕಾಶಿಕ್ಷೇತ್ರದಲಿರುವ
ಅದೆ ಕಾಲದಲಿ ಸ್ವಪ್ನದಿ
ವಿಧಿಸುತಾಂಶರು ಪುರಂದರದಾಸರಿತ್ತಂಥ
ಅದುಭುತದ ಉಪದೇಶದಿ
ಉದಿತವಾಗಲು ಜ್ಞಾನ ಒದೆದು ದುಷ್ಕರ್ಮಗಳ
ಪದುಮೇಶ ದಾಸನಾದಿ ಮುದದಿ 1

ಪರಮ ವೈರಾಗ್ಯದಲಿ ಚರಿಸಿ ತೀರ್ಥಕ್ಷೇತ್ರ
ತರುಣಿ ಶಿಷ್ಯರ ಸಹಿತದಿ
ಪರಿಪರಿಯ ಮಹಿಮೆಗಳವರ ಭಕ್ತಿಗೆ ತೋರಿ
ಕರುಣಾಳುವೆನಿಸಿ ಮೆರೆದಿ
ಪುರಂದರ ಗುರು ಆಜ್ಞೆ ತೆರದಂತೆ ಪದಲಕ್ಷ
ವಿರಚಿಸಿದೆ ಪದ ಸುಳಾದಿ
ನರವರರಿಗನ್ನದಾನಗಳನು ಮದುವೆ ಮುಂಜಿ
ತೆರವಿಲ್ಲದೆಲೆ ಚರಿಸಿದಿ ದಯದಿ 2

ನಿನ್ನ ಕರುಣವು ದಾಸಕುಲದವರ ಮೇಲೆ ಬಹು
ಉನ್ನತವಾಗಿಹುದು
ಘನ್ನ ಗುರು ವಿಜಯವಿಠ್ಠಲದಾಸರೆಂತೆಂದು
ನಿನ್ನ ಸ್ಮರಿಸಲು ಕಾವುದು
ಎನ್ನ ಗುರು ತಂದೆ ಮುದ್ದುಮೋಹನರ ದಯದಿ
ನಿನ್ನ ಸ್ಮರಿಸಲು ಬಾಹುದು
ಘನ್ನ ಶ್ರೀ ಗೋಪಾಲಕೃಷ್ಣವಿಠ್ಠಲನ ದಯದಿ
ಉನ್ನತ ಜಯವೀವುದು 3
*********