ಚೆನ್ನಕೇಶವದೇವರಾಯಇನ್ನು ಸುಖಿಪೆನೆಂತೆನಗೆ ಅನ್ಯಥಾ ಗತಿಯಿಲ್ಲ ಪ.
ಹೆÀಣ್ಣಿನಾಸೆ ಮಣ್ಣಿನಾಸೆ ಹೊನ್ನಿನಾಸೆ ಮನೆಯಾಸೆಉಣ್ಣಬೇಕೆಂಬ ಬಲು ದುರಾಶೆ ಈಪುಣ್ಯಹೀನನ ಮನದಿ ಅನುದಿನ ಸಂದಣಿಸೆ 1
ಉಡುವಾಸೆ ನುಡಿವಾಸೆ ಬೇಡುವಾಸೆ ಕೊಡುವಾಸೆಒಡಲ ತುಂಬಬೇಕೆಂಬ ಆಸೆಕೊಡದವನ ಬಡಿದು ಜಡಿವಾಸೆ ಬಿಡದಿರಲು 2
ಹಯವದನನೆ ದೇವ ನಿನ್ನ ನೆನೆಯದಿದ್ದೀಮನಕೆಭಯವೆಲ್ಲಿಹುದು ಜಗನ್ನಾಥ ನಿನ್ನದಯವನೆ ಬೀರಿ ನಿರ್ದಯನನ್ನುದ್ಧರಿಸೊ 3
***