Showing posts with label ಪಾಲಿಸೈ ಪರಮೇಶ್ವರ govinda. Show all posts
Showing posts with label ಪಾಲಿಸೈ ಪರಮೇಶ್ವರ govinda. Show all posts

Wednesday, 13 November 2019

ಪಾಲಿಸೈ ಪರಮೇಶ್ವರ ankita govinda

by ಗೋವಿಂದದಾಸ
ಪಾಲಿಸೈ ಪರಮೇಶ್ವರ | ಕ-|ಪಾಲ ಲೋಚನ ಶಂಕರಾ ||ನೀಲಕಂಧರಶಶಿಧರಾ ತ್ರಿ-|ಶೂಲಪಾಣಿ ಮಹೇಶ್ವರ 1

ದಂಡಧರ ಶಿರಖಂಡನಾ | ಬ್ರ -|ಹ್ಮಾಂಡಪತಿ ಪಂಚತುಂಡನಾ ||ಖಂಡ ಪರಶುಪ್ರಚಂಡನಾ | ಈಗ |ಕಂಡೆ ನಾ ರುಂಡಮಾಲನಾ 2

ಉರಗಕುಂಡಲಧಾರನೇ |ಭವ|ದುರಿತಘೋರವಿಹಾರನೇ ||ಶರಧಿಸಮ ಗಂಭೀರನೇ | ನಿನ -|ಗೆರಗುವೆನು ಪರಮೇಶನೇ 3

ದೂತನಾಥ ತ್ರಿಲೋಚನಾ | ಪುರು - |ಹೂತವಂದ್ಯಾ ಸುಖ್ಯಾತನಾ ||ಆರ್ತರಕ್ಷಕ ದೇವನಾ | ಬಲು |ಪ್ರೀತಿಯೊಳು ನಂಬಿರ್ದೆನಾ 4

ಚಂದ್ರಕೋಟಿ ಪ್ರಕಾಶನೇ | ಪೂ -|ರ್ಣೇಂದು ಮುಖಿ ಗಿರಿಜೇಶನೆ ||ಅಂಧಕಾಸುರ ನಾಶನೇ | ಗೋ- |ವಿಂದ ದಾಸನಪೋಷನೇ ||ಪಾಲಿಸೈ| | 5
******