Showing posts with label ಇದು ಏನು ನೋಡೇ ಇದು ರಂಗನ ಮುಖ purandara vittala. Show all posts
Showing posts with label ಇದು ಏನು ನೋಡೇ ಇದು ರಂಗನ ಮುಖ purandara vittala. Show all posts

Tuesday, 3 December 2019

ಇದು ಏನು ನೋಡೇ ಇದು ರಂಗನ ಮುಖ purandara vittala

ಇದು ಏನು ನೋಡೇ ,ಇದು ರಂಗನ ಮುಖ, 
ಚಂದದಿ ಬಾಡೆ ಸಖಿ ||ಪ||

ನೀರೊಳಾಡಿದನೆ , ಬೆನ್ನಲಿ ದೊಡ್ಡ ಭಾರ ಪೊತ್ತನೆ
ಕೋರೆದಾಡೆಯಿಂದ ಸೀಳಿ ಕಶಿಪಿನ
ಕರುಳ ಮಾಲೆಯ ಧರಿಸಿದ ನರಸಿಂಹ ರೂಪನೆ ||

ಧರೆಯನಳೆದ ಪಾದದಲೊಂದು , ಪರಚ್ಛೆಯ ತರಿದ
ನಾರವಸ್ತ್ರವನು ಉಟ್ಟು ನಂದಗೋಕುಲದಲಿ ಮಂ-
ದರಗಿರಿ ಎತ್ತಿ ತಂದ ಬೆಳೆದನಮ್ಮ ||

ಬತ್ತಲೆ ಇರುವ ಉತ್ತಮ ತೇಜಿ ಹತ್ತಿ ತಾನೆ ಮೆರೆವ
ಭಕ್ತವತ್ಸಲ ನಮ್ಮ ಪುರಂದರವಿಠಲನ್ನ
ಚಿತ್ತಕ್ಕೆ ಮೆರೆದಂತೆ ಅತ್ತಾತ ಬಿಡನಮ್ಮ ||
***

pallavi

idu Enu nODe idu rangana mukha candadi bADe sakhi

caraNam 1

nIroLADidane bennasi doDDa bhAra pottane kOredADayinda
sILi kashipina karuLa mAleya dharisida narasimha rUpane

caraNam 2

dhareyanaLeda pAdadalondu paraccheya tarida nAra vastravanu
uTTu nanda gOkuladalli mandharagiri etti tanda beLadanamma

caraNam 3

battale iruva uttama tEji hatti tAne mereva bhaktavatsala namma
purandara viTTalanna cittakke meredante attAta biDanamma
***