Showing posts with label ಎಂದಿಗಾದರೂ ಒಮ್ಮೆ ವೃಂದಾವನದಿಂದ prasannavenkata. Show all posts
Showing posts with label ಎಂದಿಗಾದರೂ ಒಮ್ಮೆ ವೃಂದಾವನದಿಂದ prasannavenkata. Show all posts

Monday 6 September 2021

ಎಂದಿಗಾದರೂ ಒಮ್ಮೆ ವೃಂದಾವನದಿಂದ ankita prasannavenkata

 ರಾಗ: ಮಿಶ್ರಕಮಾಚ್ ತಾಳ: ಝಂಪೆ


ಎಂದಿಗಾದರೂ ಒಮ್ಮೆ ವೃಂದಾವನದಿಂದ

ಬಂದು ಈ ಕಂದನನು ಕೂಗಲಾರೆಯ ಗುರುವೆ


ಮಂದರೋದ್ಧರನ ಮಹಾ ಮಂದಿರವ ತಂದಿಳಿಸಿ

ಚೆಂದ ಮುಕುತಿ ಜ್ಞಾನದಾನಂದವನೀಡಿ ಅ ಪ

ಅಪ್ರಮೇಯನೆ ನೀನು ಅಪರೂಪದಲಿ ಅಂದು

ಅಪ್ಪಣ್ಣಾಚಾರ್ಯರಿಗೆ ಪ್ರಕಟಗೊಂಡು

ಸ್ವಪದವಲಂಬಿತರ ಪೊರೆವ ಗುರು ನೀ ಎಂಬ

ಸುಪ್ರಸಿದ್ಧಿಯ ಕೇಳಿ ಒಪ್ಪಿಸಿ ಬಂದಿರುವೆ 1


ಅಶನವಸನಗಳಾಶೆ ಹುಸಿಮಾತನಾಡಿಸಿ

ಘಾಸಿಗೊಳಿಸಿದೆ ಎನ್ನ ಮನಕೆ ಮುಸುಕ್ಹಾಕಿ

ಮೋಸಹೋದೆ ಗುರುವೆ ಭವಪಾಶದಲಿ ಸಿಲುಕಿ

ಆಸರೆಯ ನೀಡು ಬಾ ಹರಿದಾಸನೆನಿಸಿ 2


ಧನಕನಕಗಳ ಬಯಸಿ ನಿನ್ನ ಕರೆಯುವನಲ್ಲ

ನಿನ್ನವರ ಮನೆಯಲ್ಲಿ ಕುನ್ನಿಯಾಗಿರಿಸೆನ್ನ

ಮನೋಜನಿತಜನಕ ಶ್ರೀ ಪ್ರಸನ್ನವೆಂಕಟನೊಲುಮೆ

ಸನ್ನುತವು ಕೊಡಿಸೆನ್ನ ಅನುಗ್ರಹಿಸು ಬಾ ತಂದೆ 3

***

ಎಂದಿಗಾದರೂ ಒಮ್ಮೆ ವೃಂದಾವನದಿಂದ |

ಬಂದು ಈ ಕಂದನನು ಕೂಗಲಾರೆಯ ಗುರುವೆ || ಪ ||


ಮಂದರೋದ್ಧರನ ಮಹಾ ಮಂದಿರವ ತಂದಿಳಿಸಿ

ಚೆಂದ ಮುಕುತಿ ಜ್ಞಾನದಾನಂದವನೆ ನೀಡಿ || ಅ ಪ ||


ಅಪ್ರಮೇಯನೆ ನೀನು ಅಪರೂಪದಲಿ ಅಂದು |

ಅಪ್ಪಣ್ಣಾಚಾರ್ಯರಿಗೆ ಒಲಿದು ಪ್ರಕಟಗೊಂಡು ||

ಸ್ವಪದವಲಂಬಿತರ ಪೊರೆವ ಗುರು ನೀ ಏನೆಂಬರು |

ಸುಪ್ರಸಿದ್ಧಿಯ ಕೇಳಿ ಒಪ್ಪಿಸಿ ಬಂದಿರುವೆ || 1 ||


ಅಶನವಸನ ಹುಸಿಮಾತನಾಡಿಕಾಗಿಸಿ |

ಘಾಸಿಗೊಳಿಸಿದೆ ಎನ್ನ ಮನಕೆ ಮುಸುಕ್ಹಾಕಿ ||

ಮೋಸಹೋದೆ ಗುರುವೆ ಭವಪಾಶದಲಿ ಸಿಲುಕಿ |

ಆಸರೆಯ ನೀಡು ಬಾ ಹರಿದಾಸನೆನಿಸಿ || 2 ||


ಧನಕನಕಗಳ ಬಯಸಿ ನಿನ್ನ ಕರೆಯುವನಲ್ಲ |

ನಿನ್ನವರ ಮನೆಯಲ್ಲಿ ಕುನ್ನಿಯಾಗಿರಿ ಸೋ ಎನ್ನ ||

ಮನೋಜ ಜನಕ ಶ್ರೀ ಪ್ರಸನ್ನವೆಂಕಟನೊಲುಮೆ |

ಸನ್ನುತವು ಕೊಡಿಸೆನ್ನ ಅನುಗ್ರಹಿಸು ಬಾ ತಂದೆ || 3 ||

***


Endigādarū om’me vr̥ndāvanadinda |


bandu ī kandananu kūgalāreya guruve || pa ||


mandarōd’dharana mahā mandirava tandiḷisi


cenda mukuti jñānadānandavane nīḍi || a pa ||


apramēyane nīnu aparūpadali andu |


appaṇṇācāryarige olidu prakaṭagoṇḍu ||


svapadavalambitara poreva guru nī ēnembaru |


suprasid’dhiya kēḷi oppisi bandiruve || 1 ||


aśanavasana husimātanāḍikāgisi |


ghāsigoḷiside enna manake musuk’hāki ||


mōsahōde guruve bhavapāśadali siluki |


āsareya nīḍu bā haridāsanenisi || 2 ||


dhanakanakagaḷa bayasi ninna kareyuvanalla |


ninnavara maneyalli kunniyāgiri sō enna ||


manōja janaka śrī prasannaveṅkaṭanolume |


sannutavu koḍisenna anugrahisu bā tande || 3 ||

***