ಮರೆಯದಿರು ಮರೆಯದಿರು ಮನುಜಾ
ನಾರಾಯಣನ ಸ್ಮರಣೆಯನು ಮಾಡು ಮನುಜಾ ಪ
ರಂಗನಾಥನು ಇರಲಿಕ್ಕೆ ಜಂಗುಳಿ ದೈವಗಳೇಕೆತುಂಗಭದ್ರೆ ಇರಲಿಕ್ಕೆ ಕೆರೆಬಾವಿಯೇಕೆಅಂಗನೆ ಸತಿ ಇರಲಿಕ್ಕೆ ಬಣಗು ಹೆಣ್ಣುಗಳೇಕೆಮಂಗಳಾತ್ಮಕನಿರಲಿಕ್ಕೆ ಪರದೈವವೇಕೆ 1
ಹಾಲು ಹಳ್ಳವಿರಲಿಕ್ಕೆ ವಾಳಿಯವ ತರಲೇಕೆಮೇಲು ನಾಮವಿರಲಿಕ್ಕೆ ಕಟುಕು ಇನ್ನೇಕೆಬಾಲ ಹನುಮನಿರಲಿಕ್ಕೆ ಹುಲು ಕಪಿಗಳೇಕೆಒಳ್ಳೆ ತುಳಸಿ ಇರಲಿಕ್ಕೆ ಕಗ್ಗೊರಲೆಯೇಕೆ 2
ಚಿನ್ನದ ಗಿರಿಯಿರಲಿಕ್ಕೆ ಕಬ್ಬಿಣದ ಮೊರಡಿಯೇಕೆರನ್ನ ಮಾಣಿಕವಿರಲಿಕ್ಕೆ ಕಾಜಿನ ಹರಳೇಕೆಅನ್ನ ತುಪ್ಪವಿರಲಿಕ್ಕೆ ಮದ್ಯಪಾನಗಳೇಕೆಚೆನ್ನಾದಿಕೇಶವನಿರೆ ಬಿನುಗು ದೈವಗಳೇಕೆ3
***
Mareyediru mareyediru marulu manuja naraynana smaraneyanu madu manuja
Ranganathanu iralikke janguli daivagalekke tungabhadra iralikke bavikkereyekke
Angana sati iralikke banagu hennugaleke mangalatmaniralikke paradaivaveke||1||
Halu hallaviralikke valiyava taraleke melunama viralikke kataku inneke
Bala hanumaniralikke hulu kapigaleke olle tulasiyire kaggoraleyeke||2||
Cinnada giri iralikke kabbinada moradiyeke ranna manika viralikke kajina haraleke
Anna tuppa viralikke madya panagaleke cennadikeshavanire binugu daivagaleke||3||
***