Showing posts with label ನೀನೇ ದಯಾಸಂಪನ್ನನೊ ಕಾವೇರಿ purandara vittala NEENE DAYA SAMPANNANOKAAV ERI. Show all posts
Showing posts with label ನೀನೇ ದಯಾಸಂಪನ್ನನೊ ಕಾವೇರಿ purandara vittala NEENE DAYA SAMPANNANOKAAV ERI. Show all posts

Thursday 5 December 2019

ನೀನೇ ದಯಾಸಂಪನ್ನನೊ ಕಾವೇರಿ purandara vittala NEENE DAYA SAMPANNANOKAAV ERI

Audio by Mrs. Nandini Sripad

ಪುರಂದರದಾಸರು
ರಾಗ ತೋಡಿ ಆದಿ ತಾಳ 

ನೀನೇ ದಯಾಸಂಪನ್ನನೋ, ಕಾವೇರಿರಂಗ
ನೀನೇ ಬ್ರಹ್ಮಾದಿ ವಂದ್ಯನೋ ||ಪ||

ಬಂಧುಗಳೆಲ್ಲರ ಮುಂದಾ ದ್ರುಪದನ
ನಂದನೆಯೆಳೆ ತಂದು ಸೀರೆಯ ಸೆಳೆವಾಗ
ಬಂಧು ಕೃಷ್ಣ ಸಲಹೆಂದರೆ ಅಕ್ಷಯ-
ವೆಂದು ಕಾಯ್ದ ಗೋವಿಂದನು ನೀನೇ ||

ನಿಂದಿತ ಕರ್ಮನೊಂದುಳಿಯದೆ ಬೇ-
ಕೆಂದು ಮಾಡಿದನಂದಜಮಿಳನು
ಕಂದ ನಾರಗ ಎಂದರೆ ಮುಕ್ತಿಯ
ಕುಂದದೆಯಿತ್ತ ಮುಕುಂದನು ನೀನೇ ||

ಮತ್ತಗಜವ ನೆಗಳೊತ್ತಿ ಪಿಡಿದು, ಬಲು
ಒತ್ಯಧರೋಷ್ಠವ ಮೃತ್ಯುವಿನಂತಿರೆ
ಭಕ್ತರ ಸಲಹುವ ಪುರಂದರವಿಟ್ಠಲ
ಹಸ್ತಿಗೊಲಿದ ಪರವಸ್ತುವು ನೀನೇ ||
***

pallavi

nInE dayA sampannanO kAvEri ranga nInE brahmAdi vandyanO

caraNam 1

bandhugaLellara mundA drupadana nandaneyeLe tandu sIreya seLevAga
bandhu krSNa salahendare akSayavendu kAida gOvindanu nInE

caraNam 2

nindita karmanonduLiyade bEkendu mADidanandajamiLanu
kanda nAragA endare muktiya kundadeyitta mukundanu nInE

caraNam 3

mattagajava negaLotti piDidu balu otyadharOSThava mrtyuvinantire
bhaktara salahuva purandara viTTala hastigolida para vasatuvu nInE
***

ನೀನೇ ದಯಾಸಂಪನ್ನನೊ ಕಾವೇರಿ ರಂಗನೀನೆ ಬ್ರಹ್ಮಾದಿವಂದ್ಯನೊ ಪ

ಬಂಧುಗಳೆಲ್ಲರ ಮುಂದಾ ದ್ರುಪದನನಂದನೆಯೆಳತಂದು ಸೀರೆಯ ಸೆಳೆಯಲು ||ನೊಂದು ಕೃಷ್ಣ ಸಲಹೆಂದರೆಅಕ್ಷಯಕುಂದದಲಿತ್ತ ಮುಕುಂದನು ನೀನೇ 1

ನಿಂದಿತ ಕರ್ಮಗಳೊಂದು ಬಿಡದೆ ಬೇ-ಕೆಂದು ಮಾಡಿದನಂದಜಮಿಳನು ||ಕಂದಗೆ ನಾರಗನೆಂದರೆ ಮುಕುತಿಯಕುಂದದಲಿತ್ತ ಮುಕುಂದನು ನೀನೇ 2

ಮತ್ತಗಜವನೆಗಳೊತ್ತಿ ಪಿಡಿಯೆ ಬಲುಒತ್ತಿ ರಭಸದಿ ಬಿತ್ತರಿಸಲುಗುಣ||ಭೃತ್ಯವರದ ಶ್ರೀ ಪುರಂದರವಿಠಲಹಸ್ತಿಗೊಲಿದ ಪರವಸ್ತುವು ನೀನೇ 3
********